ಉಗಾಭೋಗ

Haridasa compositions that fall under ugAbgOga category

ಬರುವುದು ಬುದ್ಧಿಯು ಬಲವು ಕೀರುತಿಯು

ಬರುವುದು ಬುದ್ಧಿಯು ಬಲವು ಕೀರುತಿಯು ನಿರುತದಿ ಧೈರ್ಯವು ನಿರ್ಭಯತ್ವವು ಅರೋಗಾನಂದ ಅಜಾಡ್ಯ ವಾಕ್ಪಟುತ್ವವು ಹರೇ ರಂಗವಿಠಲ ಹನುಮಾ ಎನಲು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಲಿಕಾಲಕೆ ಸಮಯುಗವಿಲ್ಲವಯ್ಯ

ಕಲಿಕಾಲಕೆ ಸಮಯುಗವಿಲ್ಲವಯ್ಯ ಕಲುಷ ಹರಿಸಿ ಕೈವಲ್ಯವೀವುದಯ್ಯ ಸಲೆ ನಾಮಕೀರ್ತನೆ ಸ್ಮರಣೆ ಸಾಕಯ್ಯ ಸ್ಮರಿಸಲು ಸಾಯುಜ್ಯ ಪದವೀವುದಯ್ಯ ಬಲವಂತ ಶ್ರೀರಂಗವಿಠಲನ ನೆನೆದರೆ ಕಲಿಯುಗ ಕೃತಯುಗವಾಗುವುದಯ್ಯ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಂಬರದಾಳವನು ಇನಶಶಿಗಳಲ್ಲದೆ

ಅಂಬರದಾಳವನು ಇನಶಶಿಗಳಲ್ಲದೆ ಅಂಬರತಳದಲಾಡುವ ಪಕ್ಷಿ ತಾ ಬಲ್ಲವೆ? ಜಲದ ಪ್ರಮಾಣವ ತಾವರೆಗಳಲ್ಲದೆ ಮೇಲಿದ್ದ ಮರಗಿಡಬಳ್ಳಿಗಳು ತಾವು ಬಲ್ಲವೆ? ಮಾವಿನ ಹಣ್ಣಿನ ರುಚಿ ಅರಗಿಳಿಗಳಲ್ಲದೆ ಚೀರ್ವ ಕಾಗೆಗಳು ತಾವು ಬಲ್ಲವೆ? ನಿನ್ನ ಮಹಿಮೆ ನಿನ್ನ ಭಕ್ತರು ಬಲ್ಲರು, ಮ ತ್ತನ್ಯರೇನು ಬಲ್ಲರಯ್ಯ ? ಭಕ್ತರಾಧೀನನೆ ಭಕ್ತರೊಡೆಯನೆ ಭಕ್ತರ ಸಲಹಯ್ಯ ನಮೋ ರಂಗವಿಠಲಯ್ಯ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮನೆಯಿಂದ ಸಂತೋಷ ಕೆಲವರಿಗೆ ಲೋಕದಲ್ಲಿ

ಮನೆಯಿಂದ ಸಂತೋಷ ಕೆಲವರಿಗೆ ಲೋಕದಲ್ಲಿ ಧನದಿಂದ ಸಂತೋಷ ಕೆಲವರಿಗೆ ಲೋಕದಲ್ಲಿ ವನಿತೆಯಿಂ ಸಂತೋಷ ಕೆಲವರಿಗೆ ಲೋಕದಲ್ಲಿ ತನಯರಿಂ ಸಂತೋಷ ಕೆಲವರಿಗೆ ಲೋಕದಲ್ಲಿ ಇನಿತು ಸಂತೋಷ ಅವರವರಿಗಾಗಲಿ ನಿನ್ನ ನೆನೆವೋ ಸಂತೋಷ ಎನಗಾಗಲಿ ನಮ್ಮ ರಂಗವಿಠಲ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಧ್ಯಾನವು ಕೃತಯುಗದಿ

ಧ್ಯಾನವು ಕೃತಯುಗದಿ ಯಜನ ಯಜ್ಞವು ತ್ರೇತಾಯುಗದಿ ದಾನವಾಂತಕನ ದೇವತಾರ್ಚನೆ ದ್ವಾಪರಯುಗದಿ ಆ ಮಾನವರಿಗೆಷ್ಟು ಫಲವೊ ಅಷ್ಟು ಫಲವು ಕಲಿಯುಗದಿ ಗಾನದಲಿ ಕೇಶವಯೆನಲು ಕೈಗೂಡುವನು ರಂಗವಿಠಲ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕರುಣದಿ ತನುಮನಧನಂಗಳೆಲ್ಲವು

ಕರುಣದಿ ತನುಮನಧನಂಗಳೆಲ್ಲವು ನಿನ್ನ ಚರಣಕೊಪ್ಪಿಸಿದ ಬಳಿಕ ಮರಳಿ ಎನ್ನ ಮರುಳು ಮಾಡುವರೆ ಸರಕು ಒಪ್ಪಿಸಿದ ಮ್ಯಾಲೆ ಸುಂಕವುಂಟೆ ದೇವಾ ಕರುಣಾಕರ ನಿನ್ನ ಚರಣದಡಿಯೊಳಿಟ್ಟು ಕಾಯೊ ರಂಗವಿಠಲ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಆರು ವಂದಿಸಲೇನು ಆರು ನಿಂದಿಸಲೇನು?

ಆರು ವಂದಿಸಲೇನು ಆರು ನಿಂದಿಸಲೇನು ಆರು ಶಾಪಿಸಲೇನು ಆರು ಕೋಪಿಸಲೇನು ಆರು ಮುನಿದು ಮಾತನಾಡದಿದ್ದರೆ ಏನು ಮಾರುತಾಂತರ್ಯಾಮಿ ಜಗನ್ನಾಥವಿಠಲನ ಕಾರುಣ್ಯಪಾತ್ರರ ಕರುಣವೆನ್ನೊಳಗಿರೆ ಆರು ವಂದಿಸಲೇನು ಆರು ನಿಂದಿಸಲೇನು ?
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬಲಿಯ ಮನೆಗೆ ವಾಮನ ಬಂದಂತೆ

ಬಲಿಯ ಮನೆಗೆ ವಾಮನ ಬಂದಂತೆ ಭಗೀರಥಗೆ ಶ್ರೀಗಂಗೆ ಬಂದಂತೆ ಮುಚುಕುಂದಗೆ ಶ್ರೀ ಮುಕುಂದ ಬಂದಂತೆ ಗೋಪಿಯರಿಗೆ ಗೋವಿಂದ ಬಂದಂತೆ ವಿದುರನ ಮನೆಗೆ ಶ್ರೀ ಕೃಷ್ಣ ಬಂದಂತೆ ವಿಭೀಷಣನ ಮನೆಗೆ ಶ್ರೀ ರಾಮ ಬಂದಂತೆ ನಿನ್ನ ನಾಮವು ಬಂದು ಎನ್ನ ನಾಲಿಗೆಯಲಿ ನಿಂದು ಸಲಹಲಿ ಶ್ರೀ ಪುರಂದರವಿಠಲ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಿನ್ನಂಥ ಸ್ವಾಮಿ ನನಗುಂಟು ನಿನಗಿಲ್ಲ

ನಿನ್ನಂಥ ಸ್ವಾಮಿ ನನಗುಂಟು ನಿನಗಿಲ್ಲ ನಿನ್ನಂಥ ದೊರೆಯು ಎನಗುಂಟು ನಿನಗಿಲ್ಲ ನಿನ್ನಂಥ ತಂದೆ ಎನಗುಂಟು ನಿನಗಿಲ್ಲ ನಾನೇ ಸ್ವದೇಶಿ ನೀನೇ ಪರದೇಶಿ ನಿನ್ನರಸಿ ಲಕುಮಿ ಎನ್ನ ತಾಯಿ ನಿನ್ನ ತಾಯ ತೋರೋ ಪುರಂದರ ವಿಠಲ!
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಂದು ಗೋಕುಲದಲ್ಲಿ ಗೋಪಾಲಕರಾಗಿ

ಅಂದು ಗೋಕುಲದಲ್ಲಿ ಗೋಪಾಲಕರಾಗಿ ಅನಿಮಿಷರೆಲ್ಲ ಸಾಲೋಕ್ಯವ ಪಡೆದರು ಅಂದು ಗೋವುಗಳಾಗಿ ಸಾಧನವ ಮಾಡಿ ಸಾಮೀಪ್ಯವನ್ನು ಪಡೆದರು ಕೆಲರು ಅಂದು ನಿನ್ನನು ಕೂಡಿ ಆಡಿ ಸಾರೂಪ್ಯವೆಂಬ ಮುಕ್ತಿಯ ಪಡೆದರು ತತ್ವಾಭಿಮಾನಿಗಳು
ದಾಸ ಸಾಹಿತ್ಯ ಪ್ರಕಾರ
ಬರೆದವರು