Skip to main content

ಅಂಬರದಾಳವನು ಇನಶಶಿಗಳಲ್ಲದೆ

ಅಂಬರದಾಳವನು ಇನಶಶಿಗಳಲ್ಲದೆ
ಅಂಬರತಳದಲಾಡುವ ಪಕ್ಷಿ ತಾ ಬಲ್ಲವೆ?
ಜಲದ ಪ್ರಮಾಣವ ತಾವರೆಗಳಲ್ಲದೆ
ಮೇಲಿದ್ದ ಮರಗಿಡಬಳ್ಳಿಗಳು ತಾವು ಬಲ್ಲವೆ?
ಮಾವಿನ ಹಣ್ಣಿನ ರುಚಿ ಅರಗಿಳಿಗಳಲ್ಲದೆ
ಚೀರ್ವ ಕಾಗೆಗಳು ತಾವು ಬಲ್ಲವೆ?
ನಿನ್ನ ಮಹಿಮೆ ನಿನ್ನ ಭಕ್ತರು ಬಲ್ಲರು, ಮ
ತ್ತನ್ಯರೇನು ಬಲ್ಲರಯ್ಯ ?
ಭಕ್ತರಾಧೀನನೆ ಭಕ್ತರೊಡೆಯನೆ
ಭಕ್ತರ ಸಲಹಯ್ಯ ನಮೋ ರಂಗವಿಠಲಯ್ಯ

ದಾಸ ಸಾಹಿತ್ಯ ಪ್ರಕಾರ: 
ಬರೆದವರು: