ಮಾರುತನೆ ಏಳೆಂದು ಎಬ್ಬಿಸಿದಳಂಜನೆಯು

ಮಾರುತನೆ ಏಳೆಂದು ಎಬ್ಬಿಸಿದಳಂಜನೆಯು

ಪಲ್ಲವಿ: ಮಾರುತನೆ ಏಳೆಂದು ಎಬ್ಬಿಸಿದಳಂಜನೆಯು ಶ್ರೀ ರಾಮ ಸೇವೆಗೆ ತಡವಾಯಿತೇಳು ಚರಣಗಳು: ಸೇತು ಕಟ್ಟಲು ಬೇಕು ಶರಧಿ ದಾಟಲು ಬೇಕು ಮಾತೆಗೆ ಉಂಗುರ ಕೊಡಲುಬೇಕು ಪಾತಕಿ ರಾವಣನ ಶಿರವನಳಿಯಲುಬೇಕು ಸೀತೆಪತಿ ರಾಮನಿಗೆ ನಮಿಸಬೇಕು ಇಂತು ಕಳೆಯಲು ಬೇಕು ಅಜ್ಞಾತವಾಸವನು ಬಂಧದಲಿ ಕೀಚಕನ ಒಡೆಯ ಬೇಕು ತಂತ್ರದಲಿ ಗೆಲಬೇಕು ಶಕುನಿ ದುರ್ಯೋಧನರ ಕುಂತಿನಂದನನೆಂದು ಹೆಸರಾಗಬೇಕು ಮಧ್ವರಾಯರು ಎಂದು ಪ್ರಸಿದ್ಧರಾಗಲು ಬೇಕು ತಿದ್ದಿ ಹಾಕಲು ಬೇಕು ಸಕಲ ಗ್ರಂಥಗಳ ಅದ್ವೈತ ವಾದಿಗಳ ಗೆದ್ದುಕೆಡಹಲು ಬೇಕು ಮುದ್ದು ಪುರಂದರ ವಿಠಲನ ದಾಸನೆನಿಸಲು ಬೇಕು *ಭೀಮ ಮತ್ತು ಮಧ್ವರು ಹನುಮಂತನ ಅವತಾರವೆಂದು ನಂಬಿಕೆ ಇದೆ
ದಾಸ ಸಾಹಿತ್ಯ ಪ್ರಕಾರ
ಬರೆದವರು