ತನ್ನ ತಾನರಿಯದಾ ಜ್ಞಾನವೇನೊ

ತನ್ನ ತಾನರಿಯದಾ ಜ್ಞಾನವೇನೊ ಚೆನ್ನ ಶ್ರೀಪುರಂದರವಿಟ್ಠಲನ ನೆನೆಯದವ ಸಂನ್ಯಾಸಿಯಾದರೇನು ಷಂಡನಾದರೆ ಏನು ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಿನ್ನ ದಾಸನಾಗಿ ನಿನ್ನ ಎಂಜಲನುಂಡು

ನಿನ್ನ ದಾಸನಾಗಿ ನಿನ್ನ ಎಂಜಲನುಂಡು ನೀನುದಾಸೀನಮಾಡಿದರೆ ಲೋಕರು ನಗರೇ ನಿನ್ನ ಚರಣಕಮಲವನು ಕೊರಳಲಿ ಕಟ್ಟುವೆ ಪುರಂದರವಿಠಲ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬಡಗಿನ ನಾಡಲ್ಲಿ ಒಂದು ವಿಪರೀತ ಹುಟ್ಟಿತು

ಬಡಗಿನ ನಾಡಲ್ಲಿ ಒಂದು ವಿಪರೀತ ಹುಟ್ಟಿತು ಮುಂದೆ ಮುದ್ದೆ ಮಾಡಿದ ಕಣಕದ ರೊಟ್ಟಿ ಅದಕೆ ಸಾಧನ ತೋವೆ ಕಟಕೆಟ್ಟಿ ಅದರ ಮೇಲೆ ತಾ ಪುಣ್ಯವು ಪುಟ್ಟಿ ಪುರಂದರವಿಠಲನ ಪ್ರಸಾದ ಘಟ್ಟಿ ಯಾವಾಗ ದೊರಕಿದಾವಾಗ ಜಗಜಟ್ಟಿ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಯಾರು ಮುನಿದು ನಮಗೇನು ಮಾಡುವರಯ್ಯ

ಯಾರು ಮುನಿದು ನಮಗೇನು ಮಾಡುವರಯ್ಯ ಯಾರು ಒಲಿದು ನಮಗೇನು ಕೊಡುವರಯ್ಯ ಕೊಡಬೇಡ ನಮ್ಮ ಕುನ್ನಿಗೆ ಕಾಸನು ಈಯಲುಬೇಡ ನಮ್ಮ ಶುನಕಂಗೆ ತಳಿಗೆಯ ಆನೆ ಮೆಲೆ ಪೋಪನ ಶ್ವಾನ ಮುಟ್ಟಬಲ್ಲುದೆ ನಮಗೆ ಶ್ರೀಪುರಂದರವಿಠಲಾನೆ ಸಾಕು ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಲೇಸು ದಾಸರಿಗೆ ಸಿರಿ ಭಾಗವತರಿಗೆ

ಲೇಸು ದಾಸರಿಗೆ ಸಿರಿ ಭಾಗವತರಿಗೆ ದಾರಿದ್ರ್ಯ ದ್ರೋಹಿಗಳಿಗೆ , ಕೀರ್ತಿ ಕಿಂಕರರಿಗೆ ಅಪಕೀರ್ತಿ ಕ್ರೂರರಿಗೆ , ಜಯ ದೇವರಿಗೆ ಅಪಜಯ ಮಂಕುಗಳಿಗೆ , ನಷ್ಟ ಕಪಟರಿಗೆ ಲಾಭ ಮಹಾತ್ಮರಿಗೆ , ಪುರಂದರವಿಠಲನ ಆಳುಗಳಿಗೆ ಮುಕ್ತಿ ದೈತ್ಯರಿಗೆ ಅಂಧಂತಮಸ್ಸು ಸಂದೇಹವಿಲ್ಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಣ್ಣಿಲಿ ಕೇಳುವ ಕಾಂಬುದನರಿವ

ಕಣ್ಣಿಲಿ ಕೇಳುವ ಕಾಂಬುದನರಿವ ಆಘ್ರಾಣಿಸುವ ಆಸ್ವಾದಿಸುವ ರಸನದಿ ಕೇಳುವ ಕರ್ಮಲೋಪಕ ಲೋಕವಿಲಕ್ಷಣ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಆವಿನ ಕೊಂಬಿನ ತುದಿಯಲ್ಲಿ

ಆವಿನ ಕೊಂಬಿನ ತುದಿಯಲ್ಲಿ ಸಾಸಿವೆ ನಿಂತಿದ್ದ ಕಾಲವೆ ನಿನ್ನ ನೆನೆದವ ಜೀವನ್ಮುಕ್ತನಲ್ಲವೆ ಸರ್ವಕಾಲದಲ್ಲಿ ಒರಲುತ್ತ ನರಲುತ್ತ ಹರಿಹರಿ ಎಂದವ ಜೀವನ್ಮುಕ್ತ ಎಂಬುದಕ್ಕೆ ಏನು ಆಶ್ಚರ್ಯವಯ್ಯ ಪುರಂದರವಿಠಲ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಪಾಂಡುತನಯನಂತೆ ಕರೆದು

ಪಾಂಡುತನಯನಂತೆ ಕರೆದು ನಿನ್ನ ಅಟ್ಟುಮಾಣಿಗೆ ಮಣೆಯ ಹಾಕಿಕ್ಕಬೇಕು ಅರ್ಜುನನಂತೆ ನಿನ್ನ ಬಂಡಿಯ ಬೋವನ ಮಾಡಿ ಕುದುರೆಲಗಾಮು ಕೈಹಿಡಿಸಲಿಬೇಕು ಆಹಾ ಅನುದಿನ ಅರ್ಚಿಸಿ ಪೂಜಿಸಿ ಮೋಸ ಹೋದೆ ಸ್ವಾಮಿ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಿತ್ಯ ಪತಿಭಾವ ಶ್ರೀಲಕುಮಿದೇವಿಗಯ್ಯ

ನಿತ್ಯ ಪತಿಭಾವ ಶ್ರೀಲಕುಮಿದೇವಿಗಯ್ಯ ನಿತ್ಯ ಪುತ್ರಭಾವ ಬೊಮ್ಮ ಪ್ರಾಣರಿಗೆ ನಿತ್ಯ ಪೌತ್ರಭಾವ ಗರುಡ ಶೇಷ ರುದ್ರರಿಗೆ ನಿತ್ಯ ಭೃತ್ಯಭಾವ ಇಂದ್ರ ಕಾಮ ಆತ್ಮ ಜೀವರಿಗೆ ಇಂತೆಂದ ಶ್ರೀಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸನಕಾದಿಗಳ ಹಂಸದಂತೆ

ಸನಕಾದಿಗಳ ಹಂಸದಂತೆ ಕಮಲದಲಿ ನಲಿವ ಮೂರುತಿಯನು ಮನುಜೋತ್ತಮರೆಂಬ ಮನ ಅಂಬರದೊಳು ಕಾಲಮಿಂಚಿನಂತೆ ಥಳಥಳಿಸುವ ಗುರುಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು