ನಿನ್ನ ಕಾಲ್ಹೆಜ್ಜೆಯ ಪಿಡಿದು ನಾ ನಿಲ್ಲುವೆ

ನಿನ್ನ ಕಾಲ್ಹೆಜ್ಜೆಯ ಪಿಡಿದು ನಾ ನಿಲ್ಲುವೆ ನಿನ್ನ ಪಂಜು ಹಿಡಿದು ಒಡ್ಡಿ ಬೊಬ್ಬಿಡುವೆ ನಿನ್ನ ಛತ್ರಚಾಮರ ಪಿಡಿದೇಳುವೆ ನೀರು ನಿವಾಳಿಸಿಕೊಂಡು ಕೊಬ್ಬುವೆನು ಬಿಡೆನು ಬಿಡೆನು ನಿನ್ನ ಚರಣಕಮಲವ ಪುರಂದರವಿಠಲ ನಿನ್ನ ಪಾದವ ಬಿಡೆನು ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮುಟ್ಟಬೇಡ ಅಚ್ಯುತಗರ್ಪಿತವಲ್ಲದನ್ನ

ಮುಟ್ಟಬೇಡ ಅಚ್ಯುತಗರ್ಪಿತವಲ್ಲದನ್ನ ಕಂ- ಗೆಟ್ಟು ತುತಿಸಬೇಡ ಹರಿಯಲ್ಲದನ್ಯತ್ರ ಕಷ್ಟ ಬೇಡ ಭೂಸುರರಲ್ಲಿ ದುಷ್ಟಜನರ ಸಂಗ ಬೇಡ ಶ್ರೀ ಪುರಂದರವಿಠಲನಂಘ್ರಿಯ ನೆನೆಯುತಲಿರು ಕಷ್ಟ ಬೇಡ ಭೂಸುರರಲ್ಲಿ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಪಾಯ ಕೋಟಿಕೋಟಿಗಳಿಗೆ

ಅಪಾಯ ಕೋಟಿಕೋಟಿಗಳಿಗೆ ಉಪಾಯ ಒಂದೆ ಹರಿಭಕ್ತರ ತೋರಿಕೊಟ್ಟು ಉಪಾಯ ಒಂದೆ ಪುರಂದರವಿಠಲನೆಂದು ಬೋವಿಟ್ಟು ಕರೆವ ಉಪಾಯ ಒಂದೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಆದಿಸೃಷ್ಟಿಯಲಾರು ಮೊದಲೆ ಉದಿಸಿದರೇನು

ಆದಿಸೃಷ್ಟಿಯಲಾರು ಮೊದಲೆ ಉದಿಸಿದರೇನು , ಅವರವರೆ ಅಧಿಕರಧಿಕರಯ್ಯ ಕಾಲಾಜಯಾದಿಗಳು ಮೊದಲೆ ಉದಿಸಿದರೇನು , ಅವರವರೆ ಅಧಿಕರಧಿಕರಯ್ಯ ಅವರಂತರಂತರ ಅವರ ನೋಡಯ್ಯ , ಅವರವರೆ ಅಧಿಕರಧಿಕರಯ್ಯ ಪುರಂದರವಿಠಲನ ಸಂತತಿ ನೋಡಯ್ಯ , ಅವರವರೆ ಅಧಿಕರಧಿಕರಯ್ಯ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹರಿಗುರುಗಳಿಗೆರಗದೆ

ಹರಿಗುರುಗಳಿಗೆರಗದೆ ಹರಿಭಕ್ತಿ ಎರಗದೆ ಕೆರವ ತಿಂಬೊ ನಾಯಿಗೆ ತುಪ್ಪವಾಗ ಸೊಗಸುವುದೆ ಹರಿನಾಮಕ್ಕೆ ಹರಿದಾಸರು ಕರಗುವರಲ್ಲದೆ ನರಕಭಾಜನನಿಗು ಪಾಮರರು ಕರಗುವರೆ ಚಂದ್ರಕಿರಣಕೆ ಚಂದ್ರಕಾಂತಿ ಒಸರುವುದಲ್ಲದೆ ಗೋರಿಕಲ್ಲು ಒಸರುವುದೆ ಸಿರಿಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸೂಸಲಾಸೆಗೆ ಪೋಗಿ

ಸೂಸಲಾಸೆಗೆ ಪೋಗಿ ಬಡಿಗಲ್ಲಿನೊಳು ಸಿಕ್ಕಿದ ಮೂಷಕನ ತೆರನಾದೆನೊ ಎಲೊ ದೇವ ಹೇಸಿಕೆ ವಿಷಯಂಗಳಿಗೆ ಎರಗುತಿದೆ ಎನ್ನ ಮನ ಘಾಸಿಯಾದೆನೊ ಹೃಷಿಕೇಶ ನೀ ಸಲಹಯ್ಯ ವಾಸವಾರ್ಚಿತ ಗುರು ಪುರಂದರವಿಠಲ ನಿನ್ನ ದಾಸರ ಸಂಗದೊಳು ಇರಿಸೆನ್ನ ಅನವರತ ಕ್ಲೇಶ ಕಳೆಯಯ್ಯ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸಕಲ ಶ್ರುತಿಪುರಾಣಗಳೆಲ್ಲ

ಸಕಲ ಶ್ರುತಿಪುರಾಣಗಳೆಲ್ಲ ದಾವನ ಮಹಿಮೆ ಸುಖಪೂರ್ಣ ಸುರವರಾರ್ಚಿತ ಪಾದ ಶಕಟಮರ್ದನ ಶಾರದೇಂದುವಕ್ತ್ರ ರುಚಿಕರ ವರಕಲ್ಯಾಣರಂಗ ರುಕ್ಮಿಣೀರಮಣ ಪರಿಪೂರ್ಣ ನಮ್ಮ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮರ್ಕಟನ ಕೈನೂಲು

ಮರ್ಕಟನ ಕೈನೂಲು ಗುಕ್ಕರಿಯ ತೆರನಂತೆ ಸಿಕ್ಕಿಕೊಂಡು ಕಾಮಕ್ರೋಧಾದಿಗಳೆನ್ನ ಹಿಕ್ಕಿ ಹೀರುತಲಿವೆ ಏಕೆ ನೋಡುತಲಿದ್ಯೊ ಅಕ್ಕಟಕಟ ನಿನ್ನ ದಾಸನಲ್ಲವೆ ನಾನು ಸಿಕ್ಕು ಬಿಡಿಸಿ ನಿನ್ನ ಭಕುತಿಯ ತೋರಿಸೋ ಪಕ್ಕದೊಳಗಿಟ್ಟು ಸಲಹೊ ಶ್ರೀಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಒಂದೇ ಒಂದು ಬೆರಳ ಜಪ

ಒಂದೇ ಒಂದು ಬೆರಳ ಜಪ ಒಂದೇ ಅಯಿದು ಗೆರೆಯ ಜಪ ಒಂದೇ ಹತ್ತು ಪುತ್ರ ಜೀವಿಮಣಿಯ ಜಪ ಒಂದೇ ನೂರು ಶಂಖದ ಮಣಿಯ ಜಪ ಒಂದೇ ಸಾವಿರ ಹವಳದ ಜಪ ಒಂದೇ ಹತ್ತು ಸಾವಿರ ಮುತ್ತಿನ ಮಣಿಯ ಜಪ ಒಂದೇ ಲಕ್ಷ ಸುವರ್ಣಮಣಿಯ ಜಪ ಒಂದೇ ಕೋಟಿ ದರ್ಭೆಗಂಟಿನ ಜಪ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಎರಡು ಘಳಿಗೆ ಬೆಳಗು ಇರಲು

ಎರಡು ಘಳಿಗೆ ಬೆಳಗು ಇರಲು ಗೃಹಸ್ಥಗೆ ಸ್ನಾನ ಕರವ ಮುಗಿದು ಮಾಡೊ ಸಂಕಲ್ಪ ವೇದ ಪರಮಪುಣ್ಯಾತ್ಮ ಬ್ರಾಹ್ಮಣಧರ್ಮವೆಂದು ಪುರಂದರವಿಠಲ ಮೆಚ್ಚಿ ಪಾಲಿಸುವ | ಮಲ ಮೂತ್ರ ಮಾಡುವಾಗ ಕರದಲ್ಲಿ ಜಲವಿರೆ ಮಲಕೆ ಸಮಾನ ಅದು ಶುದ್ಧವಲ್ಲ ವಿಲಸಿತ ಕರ್ಮವಾಚರಿಸಿ ಹರಿಯ ನೆನೆಯು
ದಾಸ ಸಾಹಿತ್ಯ ಪ್ರಕಾರ
ಬರೆದವರು