ಶ್ರೀ ಯದುವರ ಪರಿಪಾಲಿಸು ಎನ್ನನು

(ರಾಗ ಘಂಟಾ ಆದಿತಾಳ) ಶ್ರೀ ಯದುವರ ಪರಿಪಾಲಿಸು ಎನ್ನನು ಭಕ್ತ ಕಾಮಧೇನು ಕಾಯದೆ ನೀ ಭಕ್ತನ ಬಿಟ್ಟರೆ ನಾನು ಮಾಡುವದೇನು ||ಪ|| ಪೆತ್ತ ತಾಯಿಯು ತನ್ನ ಶಿಶುವ ಕೊಲ್ಲಲು ಮತ್ತೆ ಕಾಯ್ವರಾರೈ ಸುತ್ತಿದ ಬೇಲಿಯ ಎದ್ದು ಪೈರ ಮೇಯೆ ಮತ್ತೆ ಕಾಯ್ವರಾರೈ ಕತ್ತಲೆಯೊಳು ಮೇಲೆ ಗಗನವು ಬಿದ್ದರೆ ಮತ್ತೆ ಕಾಯ್ವರಾರೈ ಉತ್ತಮವಾದ ಈ ಅನ್ನವು ವಿಷವಾಗೆ ಮತ್ತೆ ಕಾಯ್ವರಾರೈ ||೧|| ವಾರಿದವೃಂದಗಳು ವಹ್ನಿಯ ಕರೆದರೆ ಮತ್ತೆ ಕಾಯ್ವರಾರೈ ಧಾರುಣಿಯರಸನು ಪ್ರಜೆಗಳ ಕೊಲ್ಲಲು ಮತ್ತೆ ಕಾಯ್ವರಾರೈ ನಾರಿಯು ಮಲಗಿದ ಪತಿಯ ಕೊರಳ ಕೊಯ್ಯೆ ಮತ್ತೆ ಕಾಯ್ವರಾರೈ ಶೂರ ಪತಿಯು ತನ್ನ ಮಡದಿಯ ಕೊಂದೊಡೆ ಮತ್ತೆ ಕಾಯ್ವರಾರೈ ||೨|| ವೈಕುಂಠನಗರದ ನರಸಿಂಹರೂಪನೆ ನೀನೆ ಲೋಕಬಂಧು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಏಕಯ್ಯ ಎನ್ನ ನೀ ಪರಿಪಾಲಿಸೆ

(ರಾಗ ಕಲ್ಯಾಣಿ ಝಂಪೆ ತಾಳ) ಏಕಯ್ಯ ಎನ್ನ ನೀ ಪರಿಪಾಲಿಸೆ ಲೋಕೈಕನಾಥ ನಿನಗೇಕೆ ಬೇಸರವಿಷ್ಟು ||ಪ|| ತೇರಿಗೊಂದೇ ಬಂಡಿ ಹೂಡಲೇಳೇ ಕುದುರೆ ಸೇರಿಸುತ ಕಟ್ಟಲು ಭುಜಂಗ ಹಗ್ಗ ಸಾರಥಿಯು ಕುಂಟನೈ ಹರಿಸೆ ಧರಣಿಯು ಇಲ್ಲ ಈ ರೀತಿಯಾದೊಡೆ ತಿರಿವ ದಿನಪನ ನೋಡು ||೧|| ಸಿರಿಯು ಧರಣಿಯು ನಿನಗೆ ಮಡದಿಯರು , ಮಾವನು ಹಿರಿಯ ರತ್ನಾಕರನು ರಜತಾದ್ರಿವಾಸಿ ಹಿರಿಯ ಮೊಮ್ಮಗನು ಓಷಧೀಷ ತಾ ಮೈದುನನು ದಾರಿದ್ರ್ಯವೇನಯ್ಯ ಎನ್ನ ಪೊರೆಯುದಕೆ ||೨|| ಅಂದು ಧ್ರುವನು ಕಾಯ್ದೆ ಅಂಬರೀಷನು ಧರ್ಮ - ನಂದನನ ಪೊರೆಯೆ ಸಾಲವನೆಲ್ಲಿ ತಂದೆ ಇಂದೆನ್ನ ಪೊರೆಯಲು ಅಂದಿತ್ತವರು ನೂಕುವರೆ ತಂದೆ ವೈಕುಂಠಪುರದೆರೆಯ ನರಹರಿಯೆ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ತನ್ನ ಪ್ರಾಪ್ತಿಯ ಫಲವ ತಾನರಿಯದೆ

( ಮುಖಾರಿ ರಾಗ ಝಂಪೆ ತಾಳ) ತನ್ನ ಪ್ರಾಪ್ತಿಯ ಫಲವ ತಾನರಿಯದೆ ಇನ್ನು ನುಡಿವುದು ಮೂರ್ಖತನವಲ್ಲವೆ ||ಪ|| ಸರಸಿಜೋದ್ಭವನು ಫಣೆ*ಯೊಳು ಬರೆದು ನಿರ್ಮಿಸಿದ ತೆರನೊಂದು ಬೇರುಂಟೆ ತಾನರಿಯದೆ ಕರಕೊಂಡು ಕಂಡವರ ಕೂಡೆ ತಾನಾಡಿದರೆ ನೆರೆ ದುಃಖವಿದು ಬಿಟ್ಟು ಕಡೆಗೆ ತೊಲಗುವುದೆ ||೧|| ಬಡತನವು ಬಂದಲ್ಲಿ ಪೂರ್ವದಲಿ ತಾ ಮುನ್ನ ಪಡೆದಂಥ ವಿಧಿ ಬೆನ್ನ ಬಿಡಲರಿವುದೆ ಅಡಿಗಡಿಗೆ ಶೋಕದಲಿ ಅವರಿವರಿಗುಸುರಿದರೆ ಬಡತನವು ತಾ ಮುನ್ನ ಕಡೆಗೆ ತೊಲಗುವುದೆ ||೨|| ದೆಸೆಗೆಟ್ಟು ನಾಡದೈವಗಳಿಗೆ ಹಲುಬಿದಡೆ ನೊಸಲ ಬರಹವ ತೊಡೆದು ತಿದ್ದಲಳವೆ ವಸುಧೀಶ ಕಾಗಿನೆಲೆಯಾದಿಕೇಶವನಂಘ್ರಿ ಬಿಸಜ**ವನು ಕಂಡು ನೀ ಸುಖಿಯಾಗು ಮನುಜ ||೩|| (*ಫಣೆ=ಹಣೆ , **ಬಿಸಜ=ಕಮಲ, ತಾವರೆ)
ದಾಸ ಸಾಹಿತ್ಯ ಪ್ರಕಾರ
ಬರೆದವರು

ಎಂದೆಂದೂ ನಿನ್ನ ಪಾದವ ನಂಬಿದೆ ತಂದೆ

( ದ್ವಿಜಾವಂತಿ ರಾಗ ಆದಿತಾಳ) ಎಂದೆಂದೂ ನಿನ್ನ ಪಾದವ ನಂಬಿದೆ ತಂದೆ ಪಾಲಿಸೋ ಹರಿಯೆ ಬಂಧನಗಳ ನೀನಿಂದು ಓಡಿಸು ಎನ್ನ ಸಿಂಧುರವರದ ಸಿಂಧುಸುತೆಯ ರಮಣ ||ಪ|| ಗಂಗೆ ಕಾವೇರಿಯೊಳು ಅಂಗವ ತೊಳೆದರು ಹೋಗದು ಅಂಗದ ಕಲ್ಮಶವು ಹಿಂಗದೆ ನಾನಾ ಜಪಗಳು ಮಾಡಿದರು ಈ ಸಂಗವೆಂದಿಗೂ ಹರಿಯದು ರಂಗನೆ ನೀನು ಸಂಕಲ್ಪಿಸಿದೊಡೆ ಸಂಗ ಹಿಂಗಿ ಹೋಗುವುದಯ್ಯ ಪಾಪವು ಸಹಿತಲೆ ||೧|| ವ್ರತತಪ ದಾನಗಳಿಂದ ರಾಗದ್ವೇಷ ಗತಿಗೆಟ್ಟು ಪೋಪುದೇನೈ ಸತಿಸುತರಾಸೆಗಳು ಸುರರ ಪೂಜೆಗಳಿಂದ ಅತಿ ವೃದ್ಧಿಯಾಗುವುವೈ ಪತಿತಪಾವನ ನಿನ್ನ ಅನುದಿನ ನುತಿಸಲು ಶಿಥಿಲಗಳಾಗಿ ಇವುಗಳು ತೊಲಗುವವಲ್ಲದೆ ||೨|| ವೈಕುಂಠದರಸ ಎಂಬ ಸಿರಿನರಹರಿಯೆ ಪೋಷಿಸದಿದ್ದರೆ ನೀನು ಪಾಕಶಾಸನನು ಪಶುಪತಿಯೆ ಮೊದಲಾದ ಲೋಕಪಾಲರು ಪೊರೆವರೆ ಏಕ ಭಕ್ತಿಯಿಂದ ಏಕ ಚಿತ್ತದೊಳಿರ್ಪೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಗೋಕುಲರನ್ನ ಏಕೆನ್ನ ಕೈ ಬಿಡುವೆ

( ರಾಗ ಅಸಾವೇರಿ ಆದಿತಾಳ) ಗೋಕುಲರನ್ನ ಏಕೆನ್ನ ಕೈ ಬಿಡುವೆ ||ಪ|| ನಾನು ಮಾಡಿದ ಪಾಪ ನರಕಸಾಧನವಾಯ್ತು ಏನು ಗತಿಯೊ ಎನಗೆ ಭಕ್ತರ ಕಾಮಧೇನು ಮಾಡುವುದೇನಯ್ಯ ಕೃಷ್ಣಯ್ಯ ಎನ್ನ ಹೀನ ಬುದ್ಧಿಗಳನ್ನು ನೆನೆಯದೆ ಸ್ವಾನುಭವ ಗೋಷ್ಠಿಯಲಿ ಸೇರಿಸಿ ಮೀನಕೇತನ ಜನಕ ಪಾಲಿಸೊ , ಮಾನ ಅಭಿಮಾನಗಳು ನಿನ್ನದು ||೧|| ಎಷ್ಟು ನಿಲ್ಲಿಸಿದರು ಕೆಟ್ಟ ಇಂದ್ರಿಯಗಳು ತಟ್ಟನೆ ತಿರುಗುವವು ಭ್ರಷ್ಟನ ಚಿತ್ತ ಎಷ್ಟು ಹಿಡಿದರು ನಿಲ್ಲದು, ಕೃಷ್ಣಯ್ಯ ಎನ್ನ ಕಷ್ಟವನು ನೀ ಮನಕೆ ತಂದು ಎನಗಿಷ್ಟವೆಂತಹುದು ಅಂತೆಗೈವುತ ಭ್ರಷ್ಟತನವನು ತಿದ್ದಿ ನಿನ್ನುತ್ಕೃಷ್ಟ ಪದವನು ಸೇರಿಸೆನ್ನನು ||೨|| ವೈಕುಂಠನಗರೀಶ ಗೆದ್ದೆನೈ ಭವಪಾಶ ಸಕ್ಕರೆ ಸಿಕ್ಕಿತಯ್ಯ ನಿನ್ನಯ ನಾಮ ಜಿಹ್ವೆಗೆ ದೊರೆವುದೆ ಕೃಷ್ಣಯ್ಯ ಎನ್ನ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಮಲನಯನ ನೀ ಎನ್ನನು ತಳ್ಳಿದರೆ

(ತೋಡಿ ರಾಗ ಅಷ್ಟತಾಳ) ಕಮಲನಯನ ನೀ ಎನ್ನನು ತಳ್ಳಿದರೆ ತ್ಫರ್ತ್ರವೆ ಕರ್ತುವಿಲ್ಲವೈ ಮಮತೆಯಿಂದ ಮಗುವ ತಾಯಿ ಪೊರೆಯದಿರಲು ಮತ್ತೆ ಪೊರೆವರಾರೈ ಓ ಕೇಶವ ||ಪ|| ಪಂಚಭೂತಗಳ ಸಂಚಿತದ ದೇಹವು ವಂಚಿಪುದೈ ಕೇಶವ ಸಂಚಿತದ ವಸ್ತುವು ಕೊಂಚವಾದರೂ ಎನ್ನ ಹೊಂಚಿ ಈಗ ನೋಡದೈ ಓ ಕೇಶವ ||೨|| ಹೆಂಡತಿಯು ಮಕ್ಕಳು ಹಿಂಡುಗೂಡಿ ಬಂದು ದಂಡಿಪರೈ ಕೇಶವ ಕಂಡವರೊಂದಾಗಿ ಕಾಣದೆ ಎಂದಡೆ ಗೈದದೆ ಪೋಪರೈ ಓ ಕೇಶವ ||೨|| ಕಾಲನ ದೂತರು ಎನ್ನ ಕಾಲುಗಳನು ಕಟ್ಟಿ ಬಾಳಿಸರೈ ಕೇಶವ ಲೀಲೆಯಿಂದಲಿ ವೈಕುಂಠ ನಗರದೊಳಿರ್ಪ ಇಂದಿರೇಶನೆ ಪಾಲಿಸೈ ಓ ಕೇಶವ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಏನು ಬೇಕು ಜೋಗಿಗೆ ? ಏನೂ ಬೇಡ

( ಪೂರ್ವಿ ರಾಗ , ಮಟ್ಟತಾಳ) ಏನು ಬೇಕು ಜೋಗಿಗೆ ? ಏನೂ ಬೇಡ ||ಪ|| ರಾಗಭೋಗ ಸರ್ವವನ್ನು ರಾಗವೆಂಬ ಕಾಗೆಗಳನು ಕೂಗುವೆಂಬ ಕೋಳಿಯನ್ನು ತೇಗಿ ಮೂಗನಾದ ಬಳಿಕ ||೧|| ಪಂಚಕಂಗಳನ್ನು ಸುಟ್ಟು ಪಂಚ ಫಕೀರನು ಆಗಿ ಪಂಚ ಪಂಚವೆಂಬ ಅರಿಗಳ ಹಂಚಿನಲಿ ಹುರಿದು ತಿಂದ ||೨|| ಅಷ್ಟ ದಿಕ್ಪಾಲಕರನ್ನು ಒಟ್ಟುಗೂಡಿ ಮದವನೆಲ್ಲ ಮೆಟ್ಟಿ ಸಿಂಹನಾಗಿ ಸವಿದ ದಿಟ್ಟ ಗಂಡಭೇರುಂಡಗೆ ||೩|| ಆರು ಬಣ್ಣ ತೋರಿ ಮೆರೆವ ಕಾರಣಾರ್ಥ ಪಕ್ಷಿಗಳನು ತೋರಿ ಹಾರುತಿರಲು ಬಡಿದು ಬೇರು ಸಹಿತ ನುಂಗಿದಂಥ ||೪|| ಏಳು ಹೆಡೆಯ ಸರ್ಪವನ್ನು ಕೋಳಿ ಕೂಗೆ ಅದನು ಕಂಡು ಜೋಳು ಮುಟ್ಟಿ ಶರಣು ಕಂಡೂ ತೋಳನನ್ನು ತಿಂದು ಬಿಟ್ಟ ||೫|| ಮೂರು ನಾಮ ಮೂರು ನೇಮ ಮೀರಿದಂಥ ಶಿರಸದವನ ಮೇರುವ ತುದಿಗೇಳು ಕಟ್ಟಿ ಮೂರು ನದಿಯ ದಾಟಿದಂಥ ||೬||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಾನು ನೀನು ಎನ್ನದಿರೊ ಹೀನ ಮಾನವ

( ಭೈರವಿ ರಾಗ ಮಟ್ಟತಾಳ) ನಾನು ನೀನು ಎನ್ನದಿರೊ ಹೀನ ಮಾನವ ಜ್ಞಾನದಿಂದ ನಿನ್ನ ನೀನೆ ತಿಳಿದು ನೋಡೆಲೊ ಪ್ರಾಣಿ ||ಪ|| ಹೆಣ್ಣು ಹೊನ್ನು ಮಣ್ಣು ಮೂರು ನಿನ್ನದೇನೆಲೊ ಅನ್ನದಿಂದ ಬಂದ ಕಾಮ ನಿನ್ನದೇನೆಲೊ ಕರ್ಣದಿಂದ ಬರುವ ಘೋಷ ನಿನ್ನದೇನೆಲೊ ನಿನ್ನ ಬಿಟ್ಟು ಹೋಹ ಜೀವ ನಿನ್ನದೇನೆಲೊ ||೧|| ಹಲವು ಜನ್ಮದಲಿ ಬಂದಿರ್ವನು ನೀನೆಲೋ ಮಲದ ಗರ್ಭದಲಿ ನಿಂದಿರುವನು ನೀನೆಲೋ ಜಲದ ದಾರಿಯಲ್ಲಿ ಬಂದಿರುವನು ನೀನೆಲೋ ಕುಲವು ಜಾತಿ ಗೋತ್ರಗಳುಳ್ಳವನು ನೀನೆಲೋ ||೨|| ಕಾಲ ಕರ್ಮ ಶೀಲ ನೇಮ ನಿನ್ನದೇನೆಲೋ ಜಲ ವಿದ್ಯೆ ಬಯಲ ಮಾಯೆ ನಿನ್ನದೇನೆಲೋ ಕೀಲು ಜಡಿದ ನರದ ಬೊಂಬೆ ನಿನ್ನದೇನೆಲೋ ಲೋಲ ಆದಿಕೇಶವನ್ನ ಭಕ್ತನಾಗೆಲೋ ಪ್ರಾಣೀ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನೋಡಿದರೆ ನೋಡು ಮಾತಾಡು ತಾಯಿಗಳೆಂದು

(ರಾಗ ಮುಖಾರಿ ಝಂಪೆ ತಾಳ) ನೋಡಿದರೆ ನೋಡು ಮಾತಾಡು ತಾಯಿಗಳೆಂದು ನೋಡಿ ಭ್ರಮಿಸಲು ಬೇಡ ಪರಸತಿಯರ ||ಪ|| ದಾರಿಯೊಳು ಭಯವೆಂದು ಚೋರರೊಳು ಹೋಗುವರೆ ಕೇರು ಬೀಜದ ತೈಲ ಲೇಪಿಸುವರೆ ಅರಣ್ಯ ಮಧ್ಯದಲಿ ಮೃಗವಿರಲು ತುರಗವೆಂ- ದೇರುವರೆ ಪರಸತಿಯ ಪಾಪಿ ಮನವೆ ||೧|| ಹಸಿಯ ಎಕ್ಕೆಯ ಕಾಯಿ ನಸುಗುನ್ನಿ ತುರಚೆಯನು ತೃಷೆಗೆ ಮೆಲುವರೆ ವ್ಯಸನದೋರೀತೆಂದು ವಿಷವ ಸೇವಿಸಿದಂತೆ ನೋಡಿ ನೀ ಪರಸತಿಯ ವಿಷಯಕೆಳಸುವದೇಕೆ ಪಾಪಿ ಮನವೆ ||೨|| ಪ್ರೀತಿಯಿಂದಲಿ ಸತಿಯ ಮನೆಗಾಗಿ ಇಂದ್ರನತಿ- ಕಾತುರದಿ ಹೋಗಿ ಮೈ ತೂತಾದನು ಸೀತೆಗೋಸುಗವಾಗಿ ರಾವಣನು ತಾ ಕೆಟ್ಟ ಸೋತು ದ್ರೌಪದಿಗೆ ಕೀಚಕ ಕೆಟ್ಟನು ||೩|| ಕೆಟ್ಟವರ ದೃಷ್ಟ ಇನ್ನೆಷ್ಟು ಹೇಳಿದರೇನು ಬಿಟ್ಟುಬಿಡುವರೆ ತಮ್ಮ ಕೆಟ್ಟ ಗುಣವ ಕಟ್ಟಿನೊಳಗಿಟ್ಟು ಉತ್ಕೃಷ್ಟ ಜನಗಳ ಸಂಗ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಆರು ವಂದಿಸಲೇನು ಆರು ನಿಂದಿಸಲೇನು?

ಆರು ವಂದಿಸಲೇನು ಆರು ನಿಂದಿಸಲೇನು ಆರು ಶಾಪಿಸಲೇನು ಆರು ಕೋಪಿಸಲೇನು ಆರು ಮುನಿದು ಮಾತನಾಡದಿದ್ದರೆ ಏನು ಮಾರುತಾಂತರ್ಯಾಮಿ ಜಗನ್ನಾಥವಿಠಲನ ಕಾರುಣ್ಯಪಾತ್ರರ ಕರುಣವೆನ್ನೊಳಗಿರೆ ಆರು ವಂದಿಸಲೇನು ಆರು ನಿಂದಿಸಲೇನು ?
ದಾಸ ಸಾಹಿತ್ಯ ಪ್ರಕಾರ
ಬರೆದವರು