ಶಿವ ಶಿವ ಎನ್ನಿರೋ

ಶಿವ ಶಿವ ಎನ್ನಿರೋ

ರಾಗ: ಆರಭಿ: ತಾಳ: ಆದಿತಾಳ: ಆ: ಸ ರಿ ಮ ಪ ದ ಸ* ಅ: ಸ* ನಿ ದ ಪ ಮ ಗ ರಿ ಸ ಪಲ್ಲವಿ: ||ಶಿವ ಶಿವ ಶಿವ ಎನ್ನಿರೋ ಮೂಜಗದವರೆಲ್ಲ|| ಚರಣ ೧: ||ಆಗಮ ಸಿದ್ಧಾಂತ ಮೂಲದ ಜಪವಿದು ||ನಿಮ್ಮ ರೋಗದ ಮೂಲವ ಕೆಡಿಪ ಔಷಧವಿದು||ಶಿವ|| ಚರಣ ೨: ||ಗುರುಲಿಂಗ ಜಂಗಮವ ಅರಿಯಬೇಕಾದರೆ ||ಪರಮಾತ್ಮನ ನೀವು ತಿಳಿಯಬೇಕಾದರೆ||ಶಿವ|| ಚರಣ ೩: ||ಪೃಥ್ವಿಗೆ ಸದ್ಗುರುವಾಗಬೇಕಾದರೆ ನೀವು ||ತತ್ವಪತಿ ಆದಿಕೇಶವನ ಕೂಡಬೇಕಾದರೆ||ಶಿವ||
ದಾಸ ಸಾಹಿತ್ಯ ಪ್ರಕಾರ
ಬರೆದವರು