ಪುರಂದರದಾಸ

Compositions of Purandara dasa

ಶ್ರೀಪತಿಯು ನಮಗೆ ಸಂಪದವೀಯಲಿ

( ರಾಗ ಮುಖಾರಿ. ಛಾಪು ತಾಳ) ಶ್ರೀಪತಿಯು ನಮಗೆ ಸಂಪದವೀಯಲಿ ||ಪ|| ವಾಣೀಪತಿಯು ನಮಗೆ ಧೀರ್ಘಾಯು ಕೊಡಲಿ ||ಅ|| ವರವಿಬುಧರನು ಪೊರೆಯೆ ವಿಷವ ಕಂಠದಲಿಟ್ಟ ಹರ ನಿತ್ಯ ನಮಗೆ ಸಹಾಯಕನಾಗಲಿ ನರರೊಳುನ್ನತವಾದ ನಿತ್ಯಭೋಗಂಗಳನು ಪುರುಹೂತ ಪೂರ್ಣ ಮಾಡಿಸಲಿ ನಮಗೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಶ್ರೀಮಧ್ವರಾಯರ ಸೇವೆ ದೊರಕುವದು

( ರಾಗ ಮೋಹನ. ತ್ರಿಪುಟ ತಾಳ) ಶ್ರೀಮಧ್ವರಾಯರ ಸೇವೆ ದೊರಕುವದು ಜನುಮ ಸಫಲ ಕಾಣಿರೋ ಶ್ರೀಮದಾನಂದತೀರ್ಥರ ಪಾದ ನೆನೆವರು ಸಾಮಾನ್ಯ ಸುರರು ಕಾಣೆ ಬೊಮ್ಮನ ಆಣೆ ||ಪ|| ಜಗವು ಸತ್ಯವ ಅಲ್ಲ ಜಡಜೀವ ಭೇದವಿಲ್ಲ ಅಗುಣನು ಪರ ಬೊಮ್ಮನು ಹೀಗೇ ನುಡಿದ ಜನರ ನಿಗಮ ಶಾಸ್ತ್ರದಿ ಗೆದ್ದು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸುಳ್ಳು ನಮ್ಮಲ್ಲಿಲ್ಲವಯ್ಯ

( ರಾಗ ಪೂರ್ವಿ. ಆದಿ ತಾಳ) ಸುಳ್ಳು ನಮ್ಮಲ್ಲಿಲ್ಲವಯ್ಯ ಸುಳ್ಳು ನಮ್ಮಲ್ಲಿಲ್ಲ ( / ಸುಳ್ಳೇ ನಮ್ಮನಿ ದೇವರು) ||ಪ|| ಇಲಿಯು ಒಲೆಯ ಚಾಚ್ವದ ಕಂಡೆ ಬೆಕ್ಕು ಭಕ್ಕರಿ ಮಾಡ್ವುದಕಂಡೆ ಮೆಣಸಿನಕಾಯಿ ಕಂಡೆನಪ್ಪ ಒನಕೆ ಗಡತರ || ಕಪ್ಪೆ ಪಾತರ ಕುಣಿವುದ ಕಂಡೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸುಲಭವಲ್ಲವೊ ಮಹಾನಂದ

( ರಾಗ ನಾದನಾಮಕ್ರಿಯೆ. ಛಾಪು ತಾಳ) ಸುಲಭವಲ್ಲವೊ ಮಹಾನಂದ, ತನ್ನೊಳಗೆ ತಾ ತಿಳಿಯಬೇಕು ಗುರುದಯದಿಂದ ||ಪ|| ಬೆಕ್ಕನು ಇಲಿ ನುಂಗುವ ತನಕ, ಕಡು ರಕ್ಕಸಿಯ ಕಂಡು ಗಿಣಿ ನುಂಗುವ ತನಕ ಮಕ್ಕಳ ಭಕ್ಷಿಸುವ ತನಕ, ಮದ ಸೊಕ್ಕಿದ ಗಜವನ್ನು ನರಿ ನುಂಗುವ ತನಕ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸುದ್ದಿ ಕೇಳಮ್ಮ

( ರಾಗ ಮೋಹನ . ಅಟ ತಾಳ) ಸುದ್ದಿ ಕೇಳಮ್ಮ ಎನಗೆ ಒಂದು ಬುದ್ಧಿ ಹೇಳಮ್ಮ ||ಪ|| ಮುದ್ರೆ ಉಂಗುರ ನೋಡು ಮನದಲ್ಲಿ ಲೋಲಾಡುವ ಶುದ್ಧ ಶ್ರೀರಾಮನು ಸುಖದಲ್ಲಿರ್ಪನು ||ಅ|| ಸೂರ್ಯ ವಂಶಜರಂತೆ ಅಯೋಧ್ಯವನಾಳುವ ಅರಸುಗಳಂತೆ ಬಂಧುಳ್ಳ ದಶರಥನಣುಗರಂತೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸೋಮಕುಲವಾರಿನಿಧಿ

( ರಾಗ ಮುಖಾರಿ/ಸಾವೇರಿ. ಝಂಪೆ ತಾಳ) ಸೋಮಕುಲವಾರಿನಿಧಿ ಸೋಮನುದ್ದಾಮ ರಣಧೀರ ಜಯ ಜಯ ಭೀಮಸೇನ ಭಾಪುರೆ ||ಪ|| ಮರೆಸಿ ಕೌರವರಿತ್ತ ವಿಷವುಂಡು ತೇಗಿ ನೀ ಉರಗಗಳ ಮೇಲೆ ಬಿಡಲವನೊರಗಿದೆ ಸುರನದಿಯೊಳಗೆ ನೂಕೆ ಭರದಲೆದ್ದು ಖಳನ ಮುರಿದು ಮುಟ್ಟಿಯ ಮಾಡಿದೆಲ , ಭಾಪುರೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಾರಾಯಣನೆಂಬ ನಾಮವ ನೇಮದಿ

(ರಾಗ ಸೌರಾಷ್ಟ್ರ. ಅಟ ತಾಳ ) ನಾರಾಯಣನೆಂಬ ನಾಮವ ನೇಮದಿ ನೆನೆವುತಿರೆಚ್ಚರಿಕೆ||ಪ|| ನೀರ ಮೇಲಿನ ಗುಳ್ಳೆ ನರರೆಂಬ ಡಿಂಭವ ನಂಬದಿರೆಚ್ಚರಿಕೆ ||ಅ|| ಪರರು ಮಾಡಿದ ಪಾತಕಗಳುಚ್ಚರಿಸದೆ ನಾಲಿಗೆಗೆಚ್ಚರಿಕೆ ಗುರು ಹರಿಯರ ಸೇವೆ ಮಾಡದೆ ಉದರವ ಪೊರೆಯದಿರೆಚ್ಚರಿಕೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಿನ್ನ ಆಶ್ರಯಿಸುವೆನು ನಿಗಮಗೋಚರ

(ರಾಗ ಕಲ್ಯಾಣಿ. ಝಂಪೆ ತಾಳ ) ನಿನ್ನ ಆಶ್ರಯಿಸುವೆನು ನಿಗಮಗೋಚರ ನಿತ್ಯ ಬೆನ್ನ ಬಿಡದೆ ಕಾಯೊ ಮನದಿಷ್ಟವೀಯೋ ||ಪ|| ಕುಂದಣದ ಆಶ್ರಯ ನವರತ್ನಗಳಿಗೆಲ್ಲ ಚಂದಿರನ ಆಶ್ರಯ ಚಕೋರಗೆ ಕಂದರ್ಪನಾಶ್ರಯ ವಸಂತ ಕಾಲಕ್ಕೆ ಗೋವಿಂದನಾಶ್ರಯವು ಮರಣಕಾಲದೊಳು || ಹಣ್ಣುಳ್ಳ ಮರಗಳು ಪಕ್ಷಿಗಳಾಶ್ರಯವು ಪುಣ್ಯನದಿಗಳು ಋಷಿಗಳಾಶ್ರಯವು ಕಣ್ಣಿಲ್ಲದಾತಗೆ ಕೈಗೋಲಿನಾಶ್ರಯವು ತನ್ನಿಷ್ಟ ಪಡೆದವಗೆ ನಿನ್ನ ಆಶ್ರಯವು || ಪತಿವ್ರತೆ ವನಿತೆಗೆ ಪತಿಯೊಂದೆ ಆಶ್ರಯವು ಯತಿಗಳಿಗೆ ಶ್ರುತಿ ಪ್ರಣವದಾಶ್ರಯವು ಮತಿವಂತನಿಗೆ ಹರಿಸ್ತುತಿಗಳೇ ಆಶ್ರಯವು ಹಿತವಾದ ಪುರಂದರವಿಠಲನಾಶ್ರಯವು ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನೀನ್ಯಾರು ಪೇಳೆನ್ನ ಕಣ್ಣಮುಚ್ಚಿದೆ

(ರಾಗ ಕಾಂಭೋಜ. ಆದಿ ತಾಳ ) ನೀನ್ಯಾರು ಪೇಳೆನ್ನ ಕಣ್ಣಮುಚ್ಚಿದೆ ಮೌನಗೊಂಡರಿಯದಂತಿಹೆ ನಗುತಿ ||ಪ|| ಯಶೋದೆಯಲ್ಲಾಡುತಲ್ಲಾಡುತ ಶಶಿಮುಖಿ ಬಂದು ಸೆರಗ ಪಿಡಿದು ನಿಂದು ಪಶುವ ಕರೆಯೆ ಕಣ್ಣ ಮುಚ್ಚುತೊಂದು ಮಾತ ಬೆಸಗೊಂಡಳೆ ಗೋಪಿ ನಗುತಲಿಂದು ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನರವರ್ಯ ಭೀಮಸೇನ ನಾರಿಗೆ ಕುಸುಮ ತರುವೆನೆನುತ

(ರಾಗ ಆರಭಿ. ತ್ರಿಪುಟ ತಾಳ ) ನರವರ್ಯ ಭೀಮಸೇನ ನಾರಿಗೆ ಕುಸುಮ ತರುವೆನೆನುತ ಬೇಗ ತೆರಳಿದನು ಕರಿರಾಜನಂತೆ ದೊಡ್ಡ ಕಾನನ ಮಧ್ಯ ಗಿರಿವರನೇರಿದನ ಗುರು ಪುಂಗವ ||೧|| ಕನಕದ ವೃಕ್ಷವ ಕರದಲಿ ಪಿಡಿದನು ಧನುಸು ಬಾಣಂಗಳ ಧರಿಸಿಕೊಂಡು ಮನೋವೇಗದಿಂದ ಬಂದು ಮಹಾಬಲಸಿಂಧು
ದಾಸ ಸಾಹಿತ್ಯ ಪ್ರಕಾರ
ಬರೆದವರು