ಇಂತಿಂಥಾದ್ದೆಲ್ಲವು ಬರಲಿ

ಇಂತಿಂಥಾದ್ದೆಲ್ಲವು ಬರಲಿ

(ರಾಗ ಪಂತುವರಾಳಿ ಏಕತಾಳ) ಇಂತಿಂಥಾದ್ದೆಲ್ಲವು ಬರಲಿ, ನಿ- ಶ್ಚಿಂತೆಂಬುದು ನಿಜವಾಗಿರಲಿ ||ಪ|| ಬಡತನವೆಂಬುದು ಕಡೆತನಕಿರಲಿ ಒಡವೆ ವಸ್ತುಗಳು ಹಾಳಾಗ್ಹೋಗಲಿ ನಡೆಯುವ ದಾರಿ ಎನ್ನ ಬಿಟ್ಟ್ಹ್ಹೋಗಲಿ ಅಡವಿಲಿ ಗಿಡಗಳು ಸಿಗದ್ಹಾಗ್ಹೋಗಲಿ || ಉದ್ಯೋಗವೆಂಬುದು ಮೊದಲೇ ಹೋಗಲಿ ಬುದ್ಧಿಯು ಎನಗೆ ಮದಡಿಸಿ ಹೋಗಲಿ ಮದ್ದುಹಾಕಿ ಎನ್ನನು ಕೊಲ್ಲಲಿ ಹದ್ದುನಾಯಿ ಹರಕೊಂಡು ತಿನ್ನಲಿ || ಗಂಡಸುತನ ಎನಗಿರದ್ಹಾಗ್ಹೋಗಲಿ ಹೆಂಡರು ಮಕ್ಕಳು ಎನ್ನನು ಬಿಡಲಿ ಕುಂಡೆ ಮಂಡೆ ಎಲ್ಲಾರುದಿಯಲಿ ಭಂಡುಮಾಡಿ ಜನರೆಲ್ಲ ನಗಲಿ || ಡಾಂಭಿಕ ಇವನೆಂತೆಲ್ಲರು ಎನಲಿ ಅಂಬರ ಮುರಕೊಂಡು ಮೇಲೆ ಬೀಳಲಿ ನಂಬಿಕೆ ಎನ್ನಲಿರದ್ಹಾಗ್ಹೋಗಲಿ ಡೊಂಬಿ ಸೂಳೆಮಗನೆಂತೆನಲಿ || ಆಶಾಪಂಥ ನಡೆಯದ್ಹಾಗ್ಹೋಗಲಿ ಹಾಸ್ಯಮಾಡಿ ಜನರು ನಗಲಿ ಈಶ ಪುರಂದರವಿಠಲನ ನಾಮ ಒಂದೇ ಮನದಲ್ಲಿ ಇರಲಿ ||
ದಾಸ ಸಾಹಿತ್ಯ ಪ್ರಕಾರ
ಬರೆದವರು