ಜಯತು ಗೋಕುಲವಾಸ

ಜಯತು ಗೋಕುಲವಾಸ

(ರಾಗ ಸೌರಾಷ್ಟ್ರ ಝಂಪೆ ತಾಳ) ಜಯತು ಗೋಕುಲವಾಸ ದೈತ್ಯಪೂತವಿನಾಶ ಜಯತು ಕ್ಲೇಶವಿನಾಶ ಸರ್ವಲೋಕೇಶ ||೧|| ಜಯತು ರುಕ್ಮಿಣಿನಾಥ ಅನಾಥರಿಗೆ ನಾಥ ಜಯತು ಮಥುರಾನಾಥ ಪಾಲಿಸೋ ದಾತ ||೨|| ಜಯತು ಪಾವನಗಾತ್ರ ಚಾರುತರ ಚಾರಿತ್ರ ಜಯತು ಜಲಜಾನೇತ್ರ ಮುನಿನುತಿಪಾತ್ರ ||೩|| ಜಯತು ಸಾವಿರನಾಮ ನೀಡೆನಗೆ ಪರಂಧಾಮ ಜಯತು ಸಾರ್ವಭೌಮ ಭಕ್ತಿಯದು ಪರಮ ||೪|| ಜಯತು ತುಲಸೀಹಾರ ದಿವ್ಯದೊಂದಾಕಾರ ಜಯತು ನಿನ್ನ ವಿಚಾರ ಅದು ಬಲು ಪಾರ || ಜಯತು ಪಾಂಡವಪಕ್ಷ ತುಂಟಯೋಧನಶಿಕ್ಷ ಜಯತು ಲೋಕಾಧ್ಯಕ್ಷ ಧರ್ಮಸಂರಕ್ಷ || ಜಯತು ಶ್ರೀಭೂಲೋಲ ಭಕ್ತಜನಪರಿಪಾಲ ಜಯತು ಪಾವನಶೀಲ ತಂದೆ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು