ಹರಿ ಹರಿ ನಿನ್ನನು ಒಲಿಸಲುಬಹುದು

ಹರಿ ಹರಿ ನಿನ್ನನು ಒಲಿಸಲುಬಹುದು

(ರಾಗ ಬಿಲಹರಿ ಅಟತಾಳ) ಹರಿ ಹರಿ ನಿನ್ನನು ಒಲಿಸಲುಬಹುದು ನರಜನರೊಲಿಸೋದು ಬಲು ಕಷ್ಟ ||ಪ|| ಸರಿಬಂದಂತೆ ಆಡುವ ಜನರಿಗೆ ಕಡೆತನಕಿರುವುದು ಬಲುಕಷ್ಟ ||ಅ|| ಸುಮ್ಮನೆ ಇದ್ದರೆ ಸೇರರು ಸಖರು ಗಮ್ಮಿನಾತನೆಂತೆಂಬೊ ರುನ್ಮಯದಿಂದ ಬಹಳನ್ನವನುಂಡರೆ ಭೂತಪ್ರಾಣಿ ಇವನೆಂಬರು ಕಮ್ಮಿಯುಂಡರೆ ಕಡುಲೋಭಿಯೆಂಬರು ಉಣದಿದ್ದರೆ ರೋಗಿ ಎಂಬುವರಯ್ಯ || ಸುಮ್ಮನೆ ಇದ್ದರೆ ಬಹಳ ಗರುವಿಕೆ ಆತಗೆಂಬರು ಹೊರಬಿಚ್ಚಾಡಲು ಬಾಯಿಬಡಕನೆಂಬರು ಆಡದಿದ್ದರೆ ಮೂಕನೆಂಬರಯ್ಯ || ಒಗೆದ ವಸ್ತ್ರವನು ಶುದ್ಧಾಗಿ ಹೊದ್ದರೆ ಸುಳುಶೋಕಿನವನಿವನೆಂಬರು ನಗೆ ಮಾಸಿದರೆ ಹೇಸಿಯೆಂಬರು ಹೊದಿಯದಿದ್ದರೆ ಹುಚ್ಚನೆಂಬರಯ್ಯ || ಸತಿಯಳ ಸಂಗದಿ ಸೌಖ್ಯದಿಂದಿದ್ದರೆ ಸಲಿಗೆ ಕೊಟ್ಟ ಕೋತ್ಯೆಂಬರು ವ್ರತದ ನಾರೇರ ಸಂಗವ ಬಿಟ್ಟರೆ ನಪುಂಸಕನೆಂತೆಂಬರು ಅರಿಯದಿದ್ದರೆ ದಡ್ಡನೆಂಬರಯ್ಯ || ದಡಬಡಿ ಇದ್ದರೆ ಠೊಣ್ಯನೆಂಬರು ತೆಳುವಿದ್ದರೆ ರೋಗಿಷ್ಠನೆಂಬರು ಗಳಿಸಿ ಗಳಿಸಿ ಧನವಂತನಾದರೆ ಪರರ ಒಡವೆ ಕೈಸೇರಿತೆಂಬರು ಕಡೆಹಾಯಿಸೊ ಎನ್ನ ಕಠಿನ ಪಂಢರಪುರ- ದೊಡೆಯ ಶ್ರೀಪುರಂದರವಿಠಲ ಕಡೆದೋರೈ ||
ದಾಸ ಸಾಹಿತ್ಯ ಪ್ರಕಾರ
ಬರೆದವರು