ಪುರಂದರದಾಸ

Compositions of Purandara dasa

ಸಿರಿವಿರಿಂಚಾದಿಗಳು ಅರಿಯದಂಥ

ಸಿರಿವಿರಿಂಚಾದಿಗಳು ಅರಿಯದಂಥ ಮಹಿಮೆ ಎಣಿಸಿ ಪಾಡುವುದಕ್ಕೆ ಅರ್ಹರ್ಯಾರೊ ಅರವಿಂದದಳನಯನ ಶರಣೆಂದವರ ಕಾಯ್ವ ಕರುಣಾಸಾಗರ ನಮ್ಮ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಪ್ರಸನ್ನರಕ್ಷಕ ನೀನು ಪಾಲಿಸೊ

ಪ್ರಸನ್ನರಕ್ಷಕ ನೀನು ಪಾಲಿಸೊ, ನಿನ್ನವನು ನಾನು ಉಪಸಾಧನವರಿಯೆನೊ ಒಮ್ಮೆ ನಿನ್ನ ನೆನೆವೆನು ಅಪರಾಧಿಗಾದಡೇನು , ಅಭಯಪ್ರದನು ನೀನು ವಿಪರೀತ ಮಾಡದೆನ್ನನು ಪುರಂದರವಿಠಲ ನಂಬಿದೆನೊ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬೆಲ್ಲದ ಕಟ್ಟೆಯ ಕಟ್ಟಿ

ಬೆಲ್ಲದ ಕಟ್ಟೆಯ ಕಟ್ಟಿ ಬೇವಿನ ಬೀಜವ ಬಿತ್ತಿ ಜೇನು ಮಳೆಗರೆದರೆ ವಿಷ ಹೋಗುವುದೇನಯ್ಯ ಏನು ನೋಡಿದರೇನು , ಏನು ಕೇಳಿದರೇನು ಮನದೊಳಗಿನ ತಾಮಸ ಮಾಣದನ್ನಕ ಕೊಳಲ ಧ್ವನಿಗೆ ಸರ್ಪ ತಲೆದೂಗುವಂದದಿ ಇದಕೇನು ಮದ್ದು ಶ್ರೀಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹಗಲು ನಿನ್ನ ನೆನೆಯಲಿಲ್ಲ

ಹಗಲು ನಿನ್ನ ನೆನೆಯಲಿಲ್ಲ ಹಸಿವು ತೃಷೆಯಿಂದ ಇರುಳು ನಿನ್ನ ನೆನೆಯಲಿಲ್ಲ ನಿದ್ರೆಭರದಿಂದ ಈ ಎರಡರ ಬಾಧೆಗೆ ನಾನೊಳಗಾದೆನೊ ಸಲಹೊ ಪುರಂದರವಿಠಲ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮರವಿದ್ದರೇನಯ್ಯ ನೆರಳಿಲ್ಲದನಕ

ಮರವಿದ್ದರೇನಯ್ಯ ನೆರಳಿಲ್ಲದನಕ ನೆರಳಿದ್ದರೇನಯ್ಯ ನೀರಿಲ್ಲದನಕ ನೀರಿದ್ದು ಫಲವೇನು ಕೊಡುವ ಮನವಿಲ್ಲದನಕ ಮನವಿದ್ದರೆ ಫಲವೇನು ಜ್ಞಾನವಿಲ್ಲದನಕ ದೇವ ಪುರಂದರವಿಠಲರಾಯನ ಊಳಿಗ ಮಾಡದವನ ಬಾಳುವೆಯೇತಕೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮುಗುಳುನಗೆ ಕಲ್ಲಮೇಲಿದ್ದರೇನು

ಮುಗುಳುನಗೆ ಕಲ್ಲಮೇಲಿದ್ದರೇನು ಜಗದೊಳಗೆ ವಾರಿಧಿ ಮೇರೆ ತಪ್ಪಿದರೇನು ಕಡೆಗೆ ಹಾಕುವರ್ಯಾರಯ್ಯ ಬಿಡಿಸೊ ಬಿಡಿಸೊ ನಿನ್ನ ಚರಣಕಮಲವನ್ನು ಎನ್ನೊಡೆಯ ಪುರಂದರವಿಠಲರೇಯ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಜಗವ ಸುತ್ತಿಹುದೆಲ್ಲ ನಿನ್ನ ಮಾಯವಯ್ಯ

ಜಗವ ಸುತ್ತಿಹುದೆಲ್ಲ ನಿನ್ನ ಮಾಯವಯ್ಯ , ನಿನ್ನ ಸುತ್ತಿಹುದೆಲ್ಲ ಎನ್ನ ಮನವಯ್ಯ ಜಗಕೆ ಬಲ್ಲಿದ ನೀನು , ನಿನಗೆ ಬಲ್ಲಿದ ನಾನು ಮೂರು ಜಗವು ನಿನ್ನೊಳಗೆ , ನೀನು ನನ್ನೊಳಗೆ ಕರಿಯು ಕನ್ನಡಿಯಲ್ಲಿ ಅಡಗಿಪ್ಪ ತೆರನಂತೆ ಎನ್ನೊಳು ಅಡಗಿದೆಯೊ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ದಾಸನಾದವಗೆ ವೈಕುಂಠದಲ್ಲಿ ವಾಸ

ದಾಸನಾದವಗೆ ವೈಕುಂಠದಲ್ಲಿ ವಾಸ ದಾಸನಾಗದವನೆಲ್ಲಿ ಪೋದರೆ ಭಾಗ ದಾಸನೆಂದೆನಿಸಿದ ಭಾರತಿಯ ಗಂಡ ಸತ್ಯಲೋಕವನಾಳ್ವ ಶೌಂಡ ದಾಸರ ಹೃದಯದಿ ಮಿನುಗುವ ಶ್ರೀಶ ವಾಸವಾದಿವಂದ್ಯ ದ್ವಿ- ಸಾಸಿರಾಂಬಕ ಶರಣ್ಯ ದಾಸರಿಗೊಲಿವ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹಂಗಿಸಿ ಹಂಗಿಸಿ ಎನಗೆ ಹರಿನಾಮ ನಿಲಿಸಿದರು

ಹಂಗಿಸಿ ಹಂಗಿಸಿ ಎನಗೆ ಹರಿನಾಮ ನಿಲಿಸಿದರು ಭಂಗಿಸಿ ಭಂಗಿಸಿ ಎನಗೆ ಬಯಲಾಸೆ ಕೆಡಿಸಿದರು ಕಂಗೆಡಿಸಿ ಕಂಗೆಡಿಸಿ ಕಾಮಕ್ರೋಧ ಬಿಡಿಸಿದರು ಹಿಂದೆ ನಿಂದಿಸಿದರೆ ಎನ್ನ ಬಂಧುಬಳಗ ಬಾಯಿಬಡುಕರಿಂದ ನಾನು ಬದುಕಿದೆನೋ ಹರಿಯೆ | ಕಾಡಿ ಕಾಡಿ ಕೈವಲ್ಯಪದವಿತ್ತರು
ದಾಸ ಸಾಹಿತ್ಯ ಪ್ರಕಾರ
ಬರೆದವರು