ಪುರಂದರದಾಸ

Compositions of Purandara dasa

ಅರ್ಭಕನ ತೊದಲುನುಡಿ

ಅರ್ಭಕನ ತೊದಲುನುಡಿ ಅವರೆ ತಾಯಿತಂದೆ ಉಬ್ಬಿ ಕೇಳುವರ್ಯಾರೊ ಉರಗೇಂದ್ರಶಯನ ಕಬ್ಬು ನಾನಾಡಿದರು ತಾಳಿ ರಕ್ಷಿಸು ಎನ್ನ ಕಬ್ಬುಬಿಲ್ಲನ ಪಿತ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಣುರೇಣು ತೃಣದಲ್ಲಿ

ಅಣುರೇಣು ತೃಣದಲ್ಲಿ ಪರಿಪೂರ್ಣನಾಗಿರುವ ಗುಣವಂತನೆ ನಿನ್ನ ಮಹಿಮೆ ಗಣನೆ ಮಾಡುವರಾರು ಎಣಿಸಿ ನೋಡುವಳಿನ್ನು ಏಣಾಕ್ಷಿ ಸಿರಿದೇವಿ ಜ್ಞಾನಸುಗುಣತತ್ವ ವೇಣುಗೋಪಾಲ ಹರೇ ಕಾಣಿಸೊ ನಿನ್ನ ಮಹಿಮೆ , ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹೊಲೆಯ ಬಂದಾನೆಂದು

ಹೊಲೆಯ ಬಂದಾನೆಂದು ಒಳಗೆ ದೇವರ ಮಾಡಿ ಘಣಘಣ ಘಂಟೆ ಬಾರಿಸುತ ತನುವಿನ ಕೋಪ ಹೊಲೆಯಲ್ಲವೇನಯ್ಯ ಮನಸಿನ ವಂಚನೆ ಹೊಲೆಯಲ್ಲವೇನಯ್ಯ ಇಂಥಾ ಹೊರಗಿದ್ದ ಹೊಲೆಯನ್ನ ಒಳಗೆ ತುಂಬಿಟ್ಟುಕೊಂಡು ಇದಕ್ಕೇನು ಮದ್ದು ಶ್ರೀಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಉರಿಗಂಜೆ , ಸಿರಿಗಂಜೆ

ಉರಿಗಂಜೆ , ಸಿರಿಗಂಜೆ , ಶರೀರದ ಭಯಗಂಜೆ ಪರಧನ ಪರಸತಿ ಎರದಕ್ಕಂಜುವೆನಯ್ಯ ಹಿಂದೆ ಮಾಡಿದ ರಾವಣನೇನಾಗಿ ಪೋದನು ಮುಂದೆನ್ನ ಸಲಹಯ್ಯ ಪುರಂದರವಿಠಲ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಇಕ್ಕೋ ನಮ್ಮ ಸ್ವಾಮಿ

ಇಕ್ಕೋ ನಮ್ಮ ಸ್ವಾಮಿ , ಸರ್ವಾಂತರ್ಯಾಮಿ ಪ್ರಕಟ ಸಹಸ್ರ ನೇಮಿ , ಭಕ್ತಜನಪ್ರೇಮಿ ವಳನೋಡಿ ನಮ್ಮ ಹೊಳೆವ ಪರಬ್ರಹ್ಮ-ನರಿಯಬೇಕು ವರ್ಮ ವಸ್ತುವಿನ ನೋಡಿ , ಸಮಸ್ತಮನ ಮಾಡಿ ಅಸ್ತವಸ್ತು ಬೇಡಿ , ಸಮಸ್ತ ನಿಚಗೂಡಿ ಮಾಡು ಗುರುಧ್ಯಾನ ಮುದ್ದು ಪುರಂದರವಿಠಲನ ಚರಣವ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹಗಲು ನಾಲ್ಕು ಝಾವ

ಹಗಲು ನಾಲ್ಕು ಝಾವ ಹಸಿವನು ಕಳೆದೆನೊ ಇರುಳು ನಾಲ್ಕು ಝಾವ ವಿಷಯಕ್ಕೆ ಕೂಡಿದೆನೊ ವ್ಯರ್ಥವಾಯಿತಲ್ಲ ಈ ಸಂಸಾರಸುಖವೆಲ್ಲ ಕೇಲಯ್ಯ ತಂದೆ ಶ್ರೀಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ತಿಂಬರೆ ಅನ್ನ ಹುಟ್ಟಲುಬೇಡ

ತಿಂಬರೆ ಅನ್ನ ಹುಟ್ಟಲುಬೇಡ ಅನ್ನ ಹುಟ್ಟಿದರೆ ಬಟ್ಟೆ ದೊರಕಲುಬೇಡ ಬಟ್ಟೆ ದೊರಕಿದರೆ ಇಂಪು ತೋರಲುಬೇಡ ಇಂಪು ನಿನ್ನ ಪಾದಾರವಿಂದದಲಿ ಸಂತೋಷ ತೋರಿಸಯ್ಯ ಇಂದಿರಾರಾಧ್ಯ ಶ್ರೀ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಎರಗಿ ಭಜಿಪೆನೊ ನಿನ್ನ

ಎರಗಿ ಭಜಿಪೆನೊ ನಿನ್ನ ಚರಣಸನ್ನಿಧಿಗೆ ಕರುಣದಿಂದಲಿ ನಿನ್ನ ಸ್ಮರಣೆಯನು ಎನಗಿತ್ತು ಮರೆಯದೆ ಸಲಹೊ ಶ್ರೀ- ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಎನ್ನ ಕಡೆಹಾಯಿಸುವುದು ನಿನ್ನ ಭಾರ

ಎನ್ನ ಕಡೆಹಾಯಿಸುವುದು ನಿನ್ನ ಭಾರ , ನಿನ್ನ ನೆನೆಯುತ್ತಲಿಹುದು ಎನ್ನ ವ್ಯಾಪಾರ ಎನ್ನ ಸತಿಸುತರಿಗೆ ನೀನೇ ಗತಿ , ನಿನ್ನನೊಪ್ಪಿಸುವುದು ಎನ್ನ ನೀತಿ ಎನ್ನ ಪಡಿಯಕ್ಕಿ ಸಲಹುವುದು ನಿನ್ನ ಧರ್ಮ , ನಿನ್ನ ಅಡಿಗೆರಗುವುದು ಎನ್ನ ಕರ್ಮ
ದಾಸ ಸಾಹಿತ್ಯ ಪ್ರಕಾರ
ಬರೆದವರು