ನಮ್ಮ ಕುಲದೈವನೀತ ಬೊಮ್ಮನ ಪಡೆದಾತ
------ಖಂಬಾವತಿ ರಾಗ ತ್ರಿತಾಳ (ಝಪ್ )
ನಮ್ಮ ಕುಲದೈವನೀತ ಬೊಮ್ಮನ ಪಡೆದಾತ
ಸಾಮಗಾಯನ ಪ್ರೀತ ಸ್ವಾಮಿ ಈತ ||ಪ||
ವೇದ ಉದ್ಧರನೀತ ಮೇದಿನಿಯ ಪೊತ್ತಾತ
ಸಾಧುಜನವಂದಿತ ಸದ್ವಸ್ತು ಈತ ||೧||
ಧಾರುಣಿಯ ಗೆದ್ದಾತ ತರಳಗೊಲಿದಿಹನೀತ
ವರಮುನಿಗಳ ದಾತ ಕರುಣಿ ಈತ ||೨||
ಮೂರು ಪಾದಳದಾತ ಪರಶುಧರನಹುದೀತ
ಸುರಜನರ ಪೂಜಿತ ಸರ್ವೋತ್ತಮನೀತ ||೩||
ಪವನಸುತಗೊಲಿದಾತ ಮಾವನ ಮಡಹಿದಾತ
ಭುವನತ್ರಯಲೀತ ದೇವನೀತ ||೪||
ಬತ್ತಲೆಯು ಸುಳಿದಾತ ಉತ್ತಮ ಹಯವನೇರಿದಾತ
ಭಕ್ತರಿಗೆ ಹೊರೆವಾತ ಶಕ್ತನೀತ ||೫||
ಅಣುರೇಣುದೊಳು ಈತ ಅನುಕೂಲವಾದಾತ
ಆನಂದ ಬ್ರಹ್ಮ ಅನಂತ ಈತ ||೬||
ಮಹಾಮಹಿಮನಹುದೀತ ಬಾಹ್ಯಂತರ ಪೂರಿತ
ಮಹಿಪತಿಯ ಸಾಕ್ಷಾತ ವಸ್ತು ಈತ ||೭||
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ
- Log in to post comments