ಮನವ ನಿಲಿಸುವದು ಬಹು ಕಷ್ಟ

ಮನವ ನಿಲಿಸುವದು ಬಹು ಕಷ್ಟ

(ರಾಗ ನಾದನಾಮಕ್ರಿಯ ಆದಿ ತಾಳ ) ಮನವ ನಿಲಿಸುವದು ಬಹು ಕಷ್ಟ, ಹರಿದಾಡುವಂಥ ಮನವ ನಿಲಿಸುವದು ಬಹು ಕಷ್ಟ ||ಪ|| ಕಾಶಿಗ್ಹೋಗಲುಬಹುದು ದೇಶ ತಿರುಗಲುಬಹುದು ಆಸೆ ಸುಟ್ಟಂತೆ ಇರಬಹುದು ||೧|| ಜಪವ ಮಾಡಲುಬಹುದು ತಪವ ಮಾಡಲುಬಹುದು ಉಪವಾಸ ವ್ರತದಲ್ಲಿರಬಹುದು ||೨|| ಸ್ನಾನ ಮಾಡಲುಬಹುದು ಮೌನ ಮಾಡಲುಬಹುದು ಧ್ಯಾನದಿಪುರಂದರವಿಠಲನ ಚರಣದಲಿ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು