ಕಲ್ಲುಸಕ್ಕರೆ ಕೊಳ್ಳಿರೋ
ರಾಗ - ಕಲ್ಯಾಣಿ
ತಾಳ - ಆಟ
ಕಲ್ಲುಸಕ್ಕರೆ ಕೊಳ್ಳಿರೊ-ನೀವೆಲ್ಲರು
ಕಲ್ಲುಸಕ್ಕರೆ ಕೊಳ್ಳಿರೊ ||ಪ||
ಕಲ್ಲು ಸಕ್ಕರೆ ಸವಿ ಬಲ್ಲವರೆ ಬಲ್ಲರು
ಪುಲ್ಲಲೋಚನ ಕೃಷ್ಣನ ದಿವ್ಯನಾಮವೆಂಬ ||೧||
ಎತ್ತು ಹೇರುವುದಲ್ಲ ಹೊತ್ತು ಮಾರುವುದಲ್ಲ
ಒತ್ತೊತ್ತಿ ಗೋಣಿಯ ತುಂಬುವುದಲ್ಲ
ಎತ್ತ ಹೋದರೂ ಮತ್ತೆ ಸುಂಕವು ಇದಕಿಲ್ಲ
ಹತ್ತೆಂಟು ಸಾವಿರಕೆ ಬೆಲೆಯಿಲ್ಲದಂತಹ ||೨||
ನಷ್ಟ ಬೀಳುವುದಿಲ್ಲ ನಾಶವಾಗುವುದಲ್ಲ
ಕಟ್ಟಿ ಇಟ್ಟರೆ ಮತ್ತೆ ಕೆಡುವುದಲ್ಲ
ಎಷ್ಟು ದಿನವಿಟ್ಟರೂ ಕೆಟ್ಟು ಹೋಗುವುದಲ್ಲ
ಪಟ್ಟಣದೊಳಗೊಂದು ಲಾಭವೆನಿಸುವಂಥ ||೨|
ಸಂತೆ ಪೇಟೆಗೆ ಹೋಗಿ ಶ್ರಮ ಪಡಿಸುವುದಿಲ್ಲ
ಎಂತು ಮಾರಿದರೂ ಅಂತರವಿಲ್ಲ
ಸಂತತ ಪುರಂದರ ವಿಠಲನ ನಾಮವ
ಎಂತು ನೆನೆಯಲು ಪಾಪ ಪರಿಹಾರವಲ್ಲದೆ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ
- Log in to post comments
Re: ಕಲ್ಲುಸಕ್ಕರೆ ಕೊಳ್ಳಿರೋ
Re: ಕಲ್ಲುಸಕ್ಕರೆ ಕೊಳ್ಳಿರೋ