Skip to main content

ಮನೆಯ ಕಟ್ಟುವರುಂಟು

ಮನೆಯ ಕಟ್ಟುವರುಂಟು ಮಡದಿ ಮಕ್ಕಳುಂಟು
ಧನವ ಗಳಿಸುವರುಂಟು ಗಳಿಸದಿದ್ದವರುಂಟು
ಧನವ ಕಟ್ಟುವರುಂಟು ದಾನ ಮಾಡುವರುಂಟು
ಋಣವ ಕೊಟ್ಟವರುಂಟು ಋಣ ಮಾಡಿದವರುಂಟು
ಮಣೆಗಾರತನವಿದರೊಳೆಂದಿಗೂ ಬೇಡ
ಮುನಿಗಳು ಸಹಿತಾಗಿ ಮೋಸ ಹೋದರು ಇದಕೆ
ಗುಣಪೂರ್ಣ ಚೆಲ್ವ ಗೋಪಾಲವಿಠ್ಠಲ ನಿನ್ನ
ಗುಣ ಚಿಂತನೆಯೊಳಿಡು ಇಷ್ಟೇ ಸಾಕು

ದಾಸ ಸಾಹಿತ್ಯ ಪ್ರಕಾರ: 
ಬಗೆ: 
ಬರೆದವರು: 

Comments

ಮಣೆಗಾರತನ = ಮಣೆಗಾರ; ಹಗ್ಗಡೆ; ಲೆಕ್ಕಿಗ
ಮಣಿಗಾರತನ =
ಅಕ್ಕಸಾಲಿಗ ಮಾಡುವ ಚಾಲಾಕು, ಮೋಸ; ಕುಸುರಿ ಕೆಲಸ ಮಾಡುವವನ ಕೈಚಳಕ, ಮೋಸ
ಮಣಿಗಾರತನ ಸರಿಯೇನೋ ಅನಿಸುತ್ತದೆ..