ನೀರೆ ನೀ ಕರೆತಾರೆ ಮಾರಸುಂದರನ

ನೀರೆ ನೀ ಕರೆತಾರೆ ಮಾರಸುಂದರನ

(ರಾಗ ಕೋರೆ ಅಟತಾಳ) ನೀರೆ ನೀ ಕರೆತಾರೆ ಮಾರಸುಂದರನ ಮಾರಸುಂದರನ ಸುಕುಮಾರಸುಂದರನ ||ಪ|| ಗೊಲ್ಲರ ಮನೆಯೊಳಗಿದ್ದ ಪಾಲ್ಮೊಸರ ಮೆಲ್ಲನೆ ಮೆಲ್ಲುವ ವಲ್ಲಭ ಶ್ರೀ ಹರಿಯ || ಯಾದವರೆಲ್ಲ ಆದರಿಸಿದನ ವೇದವೇದಾಂತನ ಯಾದವಪ್ರಿಯನ || ವರಗೌರಿಪುರದಲ್ಲಿ ವಾಸವಾಗಿಹನ ವರದಪುರಂದರವಿಟ್ಠಲರಾಯನ ||
ದಾಸ ಸಾಹಿತ್ಯ ಪ್ರಕಾರ
ಬರೆದವರು