ಆನೆ ಬಂದಿತಮ್ಮ ಮರಿಯಾನೆ ಬಂದಿತಮ್ಮ
ಆನೆ ಬಂದಿತಮ್ಮ ಮರಿಯಾನೆ ಬಂದಿತಮ್ಮ ||ಪ||
ತೊಲಗಿರೆ ತೊಲಗಿರೆ ಪರಬ್ರಹ್ಮ
ಬಲು ಸರಪಳಿ ಕಡುಕೊಂಡು ಬಂತಮ್ಮ ||ಅ ಪ ||
ಕಪಟನಾಟಕದ ಮರಿಯಾನೆ | ನಿಕಟ ಸಭೆಯಲಿ ನಿಂತಾನೆ
ಶಕಟನ ಭಂಡಿಯ ಮುರಿದಾನೆ ||
ಕಪಟನಾಟಕದಿಂದ ಸೋದರ ಮಾವನ |
ನಕಟಕಟೆನ್ನದೆ ಕೊಂದಾನೆ ||೧||
ಏಳು ಭಂಡಿಯನ್ನ ಉಂಡಾನೆ | ಸ್ವಾಮಿ ಬಾಲಕನೆಂಬ ಚೆಲ್ವಾನೆ
ಬಲ್ಲ ಗೋವುಗಳ ಕೂಡೆ ನಲಿದಾನೆ ||
ಚೆಲುವ ಕಾಳಿಂಗನ ಹೆಡೆಯಲಾಡುತ | ಸೊಬಗು
ಹೆಚ್ಚಿದ ಪಟ್ಟದಾನೆ | ಮದಸೊಕ್ಕಿ ಬರುತಾನೆ ||೨||
ಭೀಮಾರ್ಜುನರು ಗೆಲಿಸ್ಯಾನೆ | ಪರಮ್ ಭಾಗವತರ ಪ್ರೀಯಾನೆ
ಮುದದಿಂದಲಿ ಮಥುರೆಲಿ ನಿಂತಾನೆ ||
ಮದಮುಖದಸುರರ ದಿಗಿಲಿಟ್ಟುಕೊಂಡು |
ಪದುಮಲೋಚನ ಪುರಂದರವಿಟ್ಠಲನೆಂಬಾನೆ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ
- Log in to post comments
ಈ ದೇವರನಾಮದಲ್ಲಿ "ತೊಲಗಿರೆ