ವಂದಿಪೆನಮ್ಮಾ ಮುದ್ದುಶಾರದೆ

ವಂದಿಪೆನಮ್ಮಾ ಮುದ್ದುಶಾರದೆ

( ರಾಗ ಮಧ್ಯಮಾವತಿ(ಕಾಫಿ) , ಅಟತಾಳ (ತೀನ್ ತಾಳ) ವಂದಿಪೆನಮ್ಮಾ ಮುದ್ದುಶಾರದೆ ಶರ- ಚ್ಚಂದಿರವದನೆ ಶಾರದೆ ||ಪ|| ಇಂದೀವರಾಕ್ಷಿ ಶತಾನಂದನಪ್ರಿಯೆ ದೇವಿ ಕುಂದು ನೋಡದೆ ಶ್ರುತಿವಂದ್ಯೆ ಜ್ಞಾನವ ನೀಡೆ ||ಅ.ಪ|| ಸಿತಾಬ್ಜಾಸನೆ ಸುಖದಾಯಕಿ, ಸುರ ನಾಥಾರಾಧಿತೆ ವಿಶ್ವನಾಯಕೀ ವೀತದುರಿತೆ ಶಿವಮಾತೆ ಸದ್ಗುಣಮಣಿ ವ್ರಾತೆ ವೇದೋಪನಿಷದ್ಗೀತೆ ವಾಗ್ದೇವಿ ಮಾತೆ ||೧|| ಕೋಕಿಲವಾಣಿ ಕವಿಸೇವಿತೆ ಎನ್ನ ವಾಕು ಲಾಲಿಸೆ ಮುನಿವಂದಿತೆ ತೋಕನೆಂದು ಸುವಿವೇಕ ಬುದ್ಧಿಯನಿತ್ತು ಸಾಕು ಸಜ್ಜನರನ್ನು ವಾಕು ಮನ್ನಿಸೆ ತಾಯೆ ||೨|| ಪಾತಕಿಗಳೊಡನಾಡಿ ನಾ ನಿನ್ನ ಪೂತಾಬ್ಜಪದ ಭಜಿಸದ್ಹೋದೆ ನಾ ಪಾತಕವೆಣಿಸದೆ ಸೀತಾರಮಣ ಜಗ- ನಾಥವಿಟ್ಠಲನಂಘ್ರಿಗೀತಾಮೃತವನುಣಿಸು ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು