ಪ್ರಸನ್ನ ವೆಂಕಟ

ಹಕ್ಕಿಯ ಹೆಗಲೇರಿ ಬಂದವಗೆ

ಹಕ್ಕಿಯ ಹೆಗಲೇರಿ ಬಂದವಗೆ ನೋಡಕ್ಕ ಮನಸೋತೆ ನಾನವಗೆ|| ಸತ್ರಾಜಿತನ ಮಗಳೆತ್ತಿದ ಉನ್ಮತ್ತ ನರಕನೊಳು ತಾ ಕಾದಿದ ಮತ್ತೆ ಕೆಡಹಿದ ಅವನಂಗವ ಸತಿಗಿತ್ತನು ತಾ ಆಲಿಂಗನವ|| ಹದಿನಾರು ಸಾವಿರ ನಾರಿಯರ ಸೆರೆ ಮುದದಿಂದ ಬಿಡಿಸಿ ಮನೋಹರ ಅದಿತಿಯ ಕುಂಡಲ ಕಳಿಸಿದ ಹರಿ ವಿಧಿಸುರನೃಪರನು ಸಲಹಿದ|| ಉತ್ತಮ ಪ್ರಾಗ್ಜೋತಿಷಪುರವ ಭಗದತ್ತಗೆ ಕೊಟ್ಟ ವರಾಭಯವ ಕರ್ತ ಕೃಷ್ಣಯ್ಯನ ನಂಬಿದೆ ಶ್ರೀಮೂರ್ತಿಯ ಪಾದವ ಹೊಂದಿದೆ|| ನರಕಚತುರ್ದಶಿ ಪರ್ವದ ದಿನ ಹರುಷದಿ ವ್ರಕಟಾದನು ದೇವ ಶರಣಾಗತಜನ ವತ್ಸಲಾ ರಂಗ ಪರಮ ಭಾಗವತರ ಪರಿಪಾಲ|| ಹೊಗಳಿ ಕೃಷ್ಣಯ್ಯನ ಮಹಿಮೆಯ ಮುಕ್ತಿ ನಗರದ ಅರಸನ ಕೀರ್ತಿಯಾ ಜಗದೀಶ ಪ್ರಸನ್ವೆಂಕಟೇಶನು ಭಕ್ತರಘಹಾರಿ ರವಿ ಕೋಟಿಪ್ರಕಾಶನು||
ದಾಸ ಸಾಹಿತ್ಯ ಪ್ರಕಾರ
ಬರೆದವರು