ವಾದಿರಾಜ

ಲಕ್ಷ್ಮಿ ಶೋಭಾನ

ರಾಗ: ಪಂತುರಾವಳಿ ಧ್ರುವ ತಾಳ

ಶೋಭಾನವೆನ್ನೀರೆ ಸುರರೊಳು ಸುಭಗನಿಗೆ
ಶೋಭಾನವೆನ್ನಿ ಸುಗುಣನಿಗೆ
ಶೋಭಾನವೆನ್ನೀರೆ ತ್ರಿವಿಕ್ರಮರಾಯಗೆ
ಶೋಭಾನವೆನ್ನಿ ಸುರಪ್ರಿಯಗೆ || ಶೋಭಾನೆ || ಪ ||

 

ಲಕ್ಷ್ಮೀನಾರಾಯಣರ ಚರಣಕ್ಕೆ ಶರಣೆಂಬೆ
ಪಕ್ಷಿವಾಹನ್ನಗೆರಗುವೆ
ಪಕ್ಷಿವಾಹನ್ನಗೆರಗುವೆ ಅನುದಿನ
ರಕ್ಷಿಸಲಿ ನಮ್ಮ ವಧೂವರರ ||

 

ಪಾಲಸಾಗರವನ್ನು ಲೀಲೆಯಲಿ ಕಡೆಯಲು
ಬಾಲೆ ಮಹಲಕ್ಷುಮಿ ಉದಿಸಿದಳು
ಬಾಲೆ ಮಹಲಕ್ಷುಮಿ ಉದಿಸಿದಳಾ ದೇವಿ
ಪಾಲಿಸಲಿ ನಮ್ಮ ವಧೂವರರ ||

 

ಬೊಮ್ಮನ ಪ್ರಳಯದಲಿ ತನ್ನರಸಿಯೊಡಗೂಡಿ
ಸುಮ್ಮನೆಯಾಗಿ ಮಲಗಿರ್ದು
ನಮ್ಮ ನಾರಾಯಣಗು ಈ ರಮ್ಮೆಗಡಿಗಡಿಗು
ಜನ್ಮವೆಂಬುದು ಅವತಾರ ||

 

ದಾಸ ಸಾಹಿತ್ಯ ಪ್ರಕಾರ
ಬರೆದವರು

ನಿನ್ನ ಧ್ಯಾನದಲಿ ಶಕ್ತಿಯ ಕೊಡೊ

ನಿನ್ನ ಧ್ಯಾನದಲಿ ಶಕ್ತಿಯ ಕೊಡೊ ಅನ್ಯದಲಿ ವಿರಕ್ತಿಯ ಕೊಡೊ ನಿನ್ನ ನೋಡುವ ಯುಕ್ತಿಯ ಕೊಡೊ ನಿನ್ನ ಪಾಡುವ ಭಕ್ತಿಯ ಕೊಡೊ ನಿನ್ಹತ್ತಿ ಬರುವ ಸಂಪತ್ತಿಯ ಕೊಡೊ ಚಿತ್ತದಿ ತತ್ವದ ಕೃತ್ಯವ ತೋರೊ ಮತ್ತೆ ತುದಿಯಲಿ ಎನಗೆ ಮುಕ್ತಿಯ ಕೊಡೊ ಭವ ಕತ್ತಲೆಯೆನಗೆ ಮುತ್ತಿದೆ
ದಾಸ ಸಾಹಿತ್ಯ ಪ್ರಕಾರ

ಧವಳ ಗಂಗೆಯ ಗಂಗಾಧರ ಮಹಾಲಿಂಗ

ರಾಗ: ಮೋಹನ ತಾಳ: ಝಂಪಾ ಧವಳ ಗಂಗೆಯ ಗಂಗಾಧರ ಮಹಾಲಿಂಗ ಮಾ ಧವನ ತೋರೋ ಗುರುಕುಲೋತ್ತುಂಗಾ ಅರ್ಚಿಸಿದವರಿಗಭೀಷ್ಟವ ಕೊಡುವ ಹೆಚ್ಚಿನ ಅಘಗಳ ತರಿದು ಬಿಸುಟುವಾ ದುಶ್ಚರಿತಗಳೆಲ್ಲ ದೂರದಲ್ಲಿಡುವ ನ ಮ್ಮಚ್ಚುತಗಲ್ಲದ ಅಸುರರ ಬಡಿವಾ ಮಾರನ ಗೆದ್ದ ಮನೋಹರ ಮೂರ್ತಿ
ದಾಸ ಸಾಹಿತ್ಯ ಪ್ರಕಾರ
ಬರೆದವರು