ನೆಕ್ಕರ ಕೃಷ್ಣದಾಸರು

ನಿನಗೇನು ಘನವೇನು ವನಜಾಕ್ಷ ವೇಂಕಟೇಶ

(ಸಾರಂಗ ರಾಗ , ಆದಿತಾಳ) ನಿನಗೇನು ಘನವೇನು ವನಜಾಕ್ಷ ವೇಂಕಟೇಶ ಮನಕೆ ಬೇಕಾದುದ ಇತ್ತು ರಕ್ಷಿಸುವರೆ ||ಪ|| ದೇಶ ನಿನ್ನದು ಬಹುಕೋಶ ನಿನ್ನದು ಜಗ- ದೀಶ ನಿನ್ನನು ಭಾಗ್ಯ ಲಕುಮಿ ಸೇವಿಸುವಳು ಆಸೆಯಿಂದಲಿ ನಿನ್ನ ಚರಣವ ಮೊರೆಹೊಕ್ಕೆ ದೋಷವ ಕಳೆದು ಎನ್ನ ಲೇಸಿತ್ತು ಸಲಹಯ್ಯ ||೧|| ಅಣುವಾಗಲೂ ಬಲ್ಲೆ ಮಹತ್ತಾಗಲೂ ಬಲ್ಲೆ ಅಣುಮಹತ್ತಿನೊಳಗೆ ಗುಣವ ತೋರಲೂ ಬಲ್ಲೆ ಕ್ಷಣಕೆ ಮುನಿಯಬಲ್ಲೆ ಆ ಕ್ಷಣಕೆ ರಕ್ಷಿಸಬಲ್ಲೆ ಗುಣಗಳವಂಗುಣವ ನೋಡದೆ ಸಲಹಯ್ಯ್ ||೨|| ಹುಟ್ಟಿದೆ ನರಜನ್ಮದಿ ಬಹಳ ಬಳಲಿಯೆ ಕಷ್ಟ- ಬಟ್ಟೆನು ಕೈಯ ಮುಟ್ಟಿ ರಕ್ಷಿಪರಿಲ್ಲ ಬೆಟ್ಟದೊಡೆಯ ಮನದಭೀಷ್ಟವೆಲ್ಲವನಿತ್ತು ದೃಷ್ಟಿಯಿಂದಲೆ ನೋಡಿ ಒಟ್ಟೈಸಿ ಸಲಹಯ್ಯ ||೩|| ತಂದೆತಾಯಿಗಳಿಲ್ಲ ಬಂಧುಬಾಂಧವರಿಲ್ಲ ಕುಂದು ಹೆಚ್ಚಿಯೆ ನಿರ್ಬಂಧಬಡಿಸುತಿದೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಭಯನಿವಾರಣವಾದ ಹರಿಯ ನಾಮಗಳು

( ಶಂಕರಾಭರಣ ರಾಗ ತ್ರಿವಿಡೆ ತಾಳ) ಭಯನಿವಾರಣವಾದ ಹರಿಯ ನಾಮಗಳು ದಯಾನಿಧಿ ತೋರಿದ ಎನ್ನ ಜಿಹ್ವೆಯೊಳು ||ಪ|| ವಸುದೇವಾತ್ಮಜ ಕೇಶವ ದೇವಕಿ ಬಸುರೊಳಗುದಿಸಿದ ನಾರಾಯಣನು ಎಸೆದು ನಿಂದನು ಗೋಕುಲದೊಳು ಮಾಧವ ಕುಸುಮನಾಭನು ಗೋವಿಂದ ನಂದ ನಂದನಕಂದ ||೧|| ದುಷ್ಟಪೂತನಿಯನ್ನು ವಿಷ್ಣುವೆ ಕೊಂದನು ತೊಟ್ಟಿಲ ಶಿಶುವಾಗಿ ಮಧುಸೂಧನ ಮೆಟ್ಟಿಕೊಂದನು ತ್ರಿವಿಕ್ರಮ ಶಕಟನ ಕಟ್ಟಿಗೆ ಸಿಲುಕಿದನು ವಾಮನ ಯಶೋದೆಗೆ ||೨|| ಬೆಣ್ಣೆಯ ಮೆದ್ದನು ಮಿಣ್ಣಗೆ ಶ್ರೀಧರ ಕಣ್ಣಿಯ ಕರುವನು ಹೃಷಿಕೇಶನು ಉಣ್ಣಬಿಟ್ಟನು ತಾಯ ಮೊಲೆಗೆ ಪದ್ಮನಾಭ ಸಣ್ಣವ ಕ್ಷಣದೊಳು ದಾಮೋದರನಾದ ||೩|| ವಾಸುದೇವನು ದ್ವಾರಾವತಿವಾಸನೆನಿಸಿದ ಸಾಸಿರ ನಾಮನು ಸಂಕರುಷಣನು ಅಸುರನಾಗಿಯೆ ಪ್ರದ್ಯುಮ್ನನೆಸೆದನು ದೋಷರಹಿತನಾದ ಅನಿರುದ್ಧನು ||೪||
ದಾಸ ಸಾಹಿತ್ಯ ಪ್ರಕಾರ
ಬರೆದವರು

ತನ್ನ ಸ್ಮರಣೆ ತಾನರಿಯದ ಮನವು

( ಮುಖಾರಿ ರಾಗ ಅಷ್ಟ ತಾಳ) ತನ್ನ ಸ್ಮರಣೆ ತಾನರಿಯದ ಮನವು ಚಿನುಮಯ ರೂಪನ ಬೆನ್ನವಿಡಿವುದುಂಟೆ ||ಪ|| ಹಾವಿನ ಹೆಜ್ಜೆಯ ಹಾವರಿವಂದದಿ ಭಾವಿಸಿಕೊಳ್ಳದೆ ತಗ್ಗು ಮುಗ್ಗುಗಳ ಗೋವಳನಿಲ್ಲದ ಗೋವಿನ ತೆರನಂತೆ ಜೀವನುಂಗುವ ವ್ಯಾಘ್ರನಗ್ರಕೆ ಸುಳಿಯಲು ||೧|| ಕನ್ನಡಿ ಶುದ್ಧವಾಗಿಯೆ ಕಾಣದ ದೃಷ್ಟಿ ಚಿನ್ನವಾರಿಕೆಯನ್ನು ಮಾಡುವ ಪರಿಯು ಧನ್ಯವಾದವರನ್ನು ಕಂಡು ನಗದ ಮನ ಮನ್ನಣೆಯಿಲ್ಲದ ಮನೆಯೊಳುಂಬರೆ ಹೇಸ ||೨|| ಹೇಳಿದ ಮಾತನು ಕೇಳಿ ಮಾನಸದೊಳು ಮೇಳವಾಗುವೆನೆಂದು ಖೂಳತನದಿ ಪೋಗಿ ಕೇಳಿದ ಉತ್ತರಕುತ್ತರ ಹರಿಸದೆ ಆಳು ಬಾವಿಯ ಹಾರಿ ಹೊಳಚುವ ತೆರನಂತೆ ||೩|| ಕಾಗೆಯು ಗರುಡನ ಸರಿಯೆಂದು ಜೂಜಾಡಿ ಸಾಗರವನು ಹಾರಿ ನಡುವೆ ಬಿದ್ದಂದದಿ ಯೋಗಿಯ ಪರಿಯಂತೆ ತಪವೆಂದು ತನ್ನಯ ಮೂಗ ಮುಚ್ಚಲು ಭವರೋಗ ಹಾರುವುದಂತೆ ||೪||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಗುರುವಿನ ಚರಣವ ನೆನೆವುತಲನುದಿನ

(ಶಂಕರಾಭರಣ ರಾಗ ತ್ರಿವಿಡೆ ತಾಳ) ಗುರುವಿನ ಚರಣವ ನೆನೆವುತಲನುದಿನ ಪರದೊಳು ದೈವದ ನೆಲೆ ನೋಡು ||ಪ|| ಗುರುವಿನ ಕರುಣಕಟಾಕ್ಷವದಲ್ಲದೆ ನರರಿಗೆ ದೊರಕದು ಪರಸುಖವು ಹಿರಿಯರ ಅಭಿಮತವಿಲ್ಲದ ಗೃಹದೊಳು ಕರೆಕರೆಯಾಗಿದೆ ಕೌತುಕವು ||೧|| ಸ್ಥಿರವಾಗಿ ನಿಲ್ಲದ ಮನವು ಭ್ರಮೆಯೊಳು ನೆರೆವುದು ತನ್ನೊಳು ಘಾತಕವು ಸೆರೆವಿಡಿಯಲು ಹರಿವಿಡಿದಿಹನಾತನ ತೊರೆವುದು ಭವಭಯ ಸೂತಕವು ||೨|| ಯೋಗಿಯ ಹೃದಯದಿ ಸಕಲಾಗಮ ಸಮ- ನಾಗಿಯೆ ತೋರ್ಪುದು ದೃಢವಾಗಿ ಸಾಗರ ಸುತ್ತಿದ ಭೂಭಾಗದ ಸರಿ ಯೋಗಿಯ ದೃಷ್ಟಿಯೆ ಘನವಾಗಿ ||೩|| ಬಾಗಿದ ಕಬ್ಬಿನ ಕೋಲೊಳು ರುಚಿಕರ- ವಾಗಿಯೆ ತೋರುವ ಪರಿಯಾಗಿ ರಾಗಿಯ ಶಿಲೆ ತಾ ಬಳಲಿದೆನೆನುತಲೆ ಭಾಗೆಯ ಕೊಂಬುದೆ ಸಮವಾಗಿ ||೪|| ನಂಬದಿರಂಬರ ವಾದಿಯ ಅಂಶಕ ತುಂಬಿದ ಕುಂಭ ದೃಢದಿಂದ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕರುಣಿಸೈ ಗುರುರಾಯ ಚರಣತೀರ್ಥವನು

( ರಾಗ ಮುಖಾರಿ ತ್ರಿವಿಡೆ ತಾಳ) ಕರುಣಿಸೈ ಗುರುರಾಯ ಚರಣತೀರ್ಥವನು ಹರಣ ಭಯದೊಳು ಲಕುಮೀರಮಣನೊಲಿವಂದದಲಿ ||ಪ|| ದೇಶ ದೇಶವ ತಿರುಗಿ ಬೇಸರದು ಈ ಚರಣ ಭೂಸುರವ ಪೂಜಿಸುವದು ಈ ದಿವ್ಯ ಚರಣ ಕ್ಲೇಶವೆನಿಸದೆ ತೀರ್ಥದಾಸೆಯ ಬಿಡದ ಈ ಚರಣ ಕಾಶಿ ರಾಮೇಶ್ವರಕೆ ನಡೆದ ಚರಣ ||೧|| ಹಾವಿಗೆಯನೊಲ್ಲದೆ ಹಾದಿ ನಡೆದ ಈ ಚರಣ ದೇವಿ ಭಾಗೀರಥಿಗೆ ಇಳಿದ ಚರಣ ಕಾವಿ ವಸ್ತ್ರವನುಟ್ಟ ಕಾಶಿವಾಸಿಯ ಚರಣ ಕೋವಿದರು ವಂದಿಸುವ ದಿವ್ಯ ಚರಣ ||೨|| ಗಟ್ಟಿ ಬೆಟ್ಟವ ತಿರುಗಿ ಕಷ್ಟಬಟ್ಟಿಹ ಚರಣ ಸೃಷ್ಟಿಗುತ್ತಮ ನದಿಯ ಮಿಂದ ಚರಣ ಇಷ್ಟಗಳನೆಲ್ಲ ತಾ ಪಡೆದುಕೊಂಡಿಹ ಚರಣ ಕೃಷ್ಣಮೂರ್ತಿಯ ಬಳಿಗೆ ಬಂದ ಚರಣ ||೩|| ಶುದ್ಧ ವೈಷ್ಣವರೆಲ್ಲ ಉಜ್ಜಿತೊಳೆವ ಚರಣ ಬದ್ಧ ಮುಕ್ತರಿಗೆಲ್ಲ ಸಿದ್ಧಿಯಹ ಚರಣ ಮಧ್ವರಾಯನ ಮತದಿ ಎದ್ದು ತಿರುಗುವ ಚರಣ
ದಾಸ ಸಾಹಿತ್ಯ ಪ್ರಕಾರ
ಬರೆದವರು

ವಂದಿಸುವೆನು ನಿತ್ಯ ವಂದಿಸುವೆನು

(ಮುಖಾರಿ ರಾಗ ಝಂಪೆ ತಾಳ) ವಂದಿಸುವೆನು ನಿತ್ಯ ವಂದಿಸುವೆನು ||ಪ|| ವಂದಿಸುವೆ ಗುರುಮಧ್ವರಾಯನಷ್ಟಾಂಗದೊಳು ನಿಂದಿರ್ದ ವೈಷ್ಣವಮತಚಂದ್ರವಾರಿಧಿಗೆ ||ಅ.ಪ|| ಕ್ರೋಧವರ್ಜಿತನಾಗಿ ವೈರಾಗ್ಯವನು ತೊಟ್ಟು ಬಾಧಿಸುವ ಇಂದ್ರಿಯಂಗಳನೆಲ್ಲ ಬಲಿದು ಆಧರಿಸಿ ಕ್ಷಮೆ ದಮೆ ಶಾಂತ ಸದ್ಗುಣದಿಂದ ಮಾಧುರ್ಯದೊಳು ಜನರ ಪ್ರೀತಿಕರನಾದವಗೆ ||೧|| ಭಯವಿವರ್ಜಿತನಾಗಿ ಬಹುಲೋಭವನು ತೊರೆದು ಕ್ಷಯಮಾಡಿ ಮೋಹವನು ಹಿಂದುಗಳೆದು ನಯವಿಧದ ಜ್ಞಾನವನು ದಶಲಕ್ಷಣಗಳಿಂದ ನಿಯತವತಿ ಕೈಕೊಂಡನಕ್ಷರತ್ರಯದೊಳು ||೨|| ಏಳು ಕೋಟಿಯ ಮಹಾಮಂತ್ರಬಾಹ್ಯದ ಕೋಟೆ ನಾಲಿಗೆ ವಶಮಾಡಿ ನವದ್ವಾರಗಳನು ಮೂಲಾಗ್ನಿಯಿಂ ಸುಟ್ಟು ದಶವಾಯುಗಳ ಕದವ ಸಾಲುನಾದಗಳೆಂಬ ಕಹಳೆವಿಡಿದವಗೆ ||೩|| ದಶವಿಧದ ಘೋಷಗಳ ಬಿಂದು ಪ್ರತಾಪದಿಂ ದಶಮನಾಗಿಯೆ ಮುಂದೆ ಡೆಂಕಣಿಯ ಹಾರಿ
ದಾಸ ಸಾಹಿತ್ಯ ಪ್ರಕಾರ
ಬರೆದವರು