ಪಾಲಿಸೈ ತಿಮ್ಮಪ್ಪ ಪರಮಪಾವನನಪ್ಪ
(ರಾಗ ಭೈರವಿ ಅಷ್ಟತಾಳ)
ಪಾಲಿಸೈ ತಿಮ್ಮಪ್ಪ ಪರಮಪಾವನನಪ್ಪ
ಮೇಲುಗಿರಿಯೊಳಿಪ್ಪ ತಿರುಪತಿ ತಿಮ್ಮಪ್ಪ ||ಪ||
ಪ್ರಾಣದಾಸೆಗಳಿಂದ ಕಾಣ ಬರುವೆವೆಂದ
ಆಣೆಭಾಷೆಯನೊಂದ ಮಾಣೆನೊ ಗೋವಿಂದ
ಕಾಣಿಕೆಯ ಕರದಿಂದ ತ್ರಾಣ ಮೀರಿಯೆ ಬಂದ
ಜಾಣರಾಯನೆ ಚಂದಗಾಣಿಸೊ ಶುಭದಿಂದ ||೧||
ಸ್ವಾಮಿ ನೀನೆ ಹೊಣೆ ಭೂಮಿಯೊಳು ರಕ್ಷಣೆ
ಕಾಮಿತ ಸೈರಣೆ ನಾಮಕಲ್ಪನೆಯು
ಪ್ರೇಮವಾಗಿಹ ಹಣೆನಾಮದ ಮನ್ನಣೆ
ಸೌಮನಸ್ಯದ ಮಾಣೆ ತಾಮಸಕ್ಕಿಡಿಗಾಣೆ ||೨||
ಸೇವಕ ಸಂಕಲ್ಪ ಕಾವ ನಾಯಕನಿಪ್ಪ
ಠಾವಿಗಾಗಿಯೇ ಪೋಪ ಭಾವದಿ ಇರುತಿಪ್ಪ
ಜೀವನ ತಾಮಪ್ಪ ದೇವ ಕಾಣು ಈ ಕಪ್ಪ
ಈವೆನೆನುತ ಬಪ್ಪ ಭೂವರಹ ತಿಮ್ಮಪ್ಪ ||೩||
---- ಈ ರಚನೆ ನೆಕ್ಕರ ಕೃಷ್ಣದಾಸರದು
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments