ಕ್ಷೇತ್ರ ವರ್ಣನೆ

ಇಲ್ಲೇ ವೈಕುಂಠ ನಮ್ಮ ಶ್ರೀಲಕ್ಷುಮಿ

(ರಾಗ ಭೈರವಿ ತ್ರಿಪುಟತಾಳ) ಇಲ್ಲೇ ವೈಕುಂಠ ನಮ್ಮ ಶ್ರೀಲಕ್ಷುಮಿ ವಲ್ಲಭ ಪರಿಪೂರ್ಣನೆಂದು ಭಜಿಪರಿಗೆ||ಪ|| ಆಶಾಪಾಶಗಳನ್ನು ಮರೆದು ಶ್ರೀಹರಿಯ ಮೇ- ಲಾಸೆಯನ್ನು ಮಾಡಿ ನೆಲೆಗೊಳಿಸಿ ವಾಸುಕಿಶಯನನ ದಾಸನಾಗಿ ಒಡನೆ ವಾಸುದೇವನ ದಿವ್ಯಮೂರ್ತಿ ನಿಟ್ಟಿಸುವಗೆ || ಕಾಮಕ್ರೋಧ ಲೋಭ ಮದಮತ್ಸರವಳಿದು ಕಾಮಜನಕನ ಕಾರುಣ್ಯದಿಂದ ನಾಮಾಮೃತವನುಂಡು ನವವಿಧಭಕ್ತಿ ನೇಮದಿಂದಚ್ಯುತನ ತಿಳಿದು ಭಜಿಪರಿಗೆ || ವರಕಾವೇರಿಯೆ ವಿರಜಾನದಿಯೆಂದು ಪರಮಪದವೆ ರಂಗಕ್ಷೇತ್ರವೆಂದು ಪರವಾಸುದೇವನೆ ರಂಗನಾಯಕನೆಂದು ಪರಮಭಕುತಿಯಲಿ ಭಜಿಸುವ ಜನರಿಗೆ || ಸ್ನಾನದಾನಾದಿ ಸತ್ಕರ್ಮವ ಮುದದಿಂದ ಶ್ರೀನರಹರಿಗೆ ಸಮರ್ಪಿಸುವ ಆನಂದವೈಕುಂಠ ಲಕ್ಷ್ಮೀಶನಡಿಗಳ ಸಾನುರಾಗದಿ ನಿತ್ಯ ಧ್ಯಾನಿಪ ಜನರಿಗೆ || ಉಭಯ ಕಾವೇರಿ ಮಧ್ಯದಲಿ ಪವಡಿಸಿ
ದಾಸ ಸಾಹಿತ್ಯ ಪ್ರಕಾರ
ಬರೆದವರು