ಪದ / ದೇವರನಾಮ

ದಾಸರ ಪದಗಳು

ಅಂಬೆಗಾಲಿಕ್ಕುತ ಬಂದ ಗೋವಿಂದ

ಅಂಬೆಗಾಲಿಕ್ಕುತ ಬಂದ ಗೋವಿಂದ ||ಪ|| ಅಂಬುಜನಾಭ ದಯದಿಂದ ಎನ್ನಮನೆಗೆ ||ಅ.ಪ|| ಜಲಚರ ಜಲವಾಸ ಧರಣೀಧರ ಮೃಗರೂಪ ನೆಲನಳೆದು ಮೂರಡಿ ಮಾಡಿ ಬಂದ ಕುಲನಾಶ ವನಮಾಸ ನವನೀತ ಚೋರನಿವ ಲಲನೆಯರ ವ್ರತಭಂಗ ವಾಹನತುರಂಗ ||೧|| ಕಣ್ಣ ಬಿಡುವನು ತನ್ನ ಬೆನ್ನು ತಗ್ಗಿಸುವನು ಮಣ್ಣು ಕೆದರಿ ಕೋರೆ ಬಾಯ ತೆರೆದು ಚಿಣ್ಣ ಭಾರ್ಗವ ಲಕ್ಷ್ಮಣಣ್ಣ ಬೆಣ್ಣೆಯ ಕಳ್ಳ ಮಾನವ ಬಿಟ್ಟು ಕುದುರೆಯನೇರಿದ ||೨|| ನೀರ ಪೊಕ್ಕನು ಗಿರಿಯ ನೆಗಹಿ ಧರಣಿಯ ತಂದು ನರಮೃಗ ಬಲಿಬಂಧ ಕೊರಳುಗೊಯಿಕ ಶರ ಮುರಿದೊರಳೆಳೆದು ನಿರವಾಣಿ ಹಯಹತ್ತಿ ಪುರಂದರವಿಠಲ ತಾ ಬಂದ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಡಿಗಳಿಗೊಂದಿಪೆ ಪುರಂದರಗುರುವೆ

ಅಡಿಗಳಿಗೊಂದಿಪೆ ಪುರಂದರಗುರುವೆ ||ಪ|| ಕಡುಜ್ಞಾನಭಕ್ತಿವೈರಾಗ್ಯದ ನಿಧಿಯೆ ||ಅ|| ವರ ಮಧ್ವಮತ ಕ್ಷೀರಾಂಬುಧಿಗೆ ಚಂದ್ರನಾದೆ ಗುರು ವ್ಯಾಸರಾಯರಿಂದುಪದೇಶಗೊಂಡೆ ಎರಡೆರಡು ಲಕ್ಷದಿಪ್ಪತ್ತೈದು ಸಾವಿರ ವರನಾಮಾವಳಿ ಮಾಡಿ ಹರಿಗೆ ಅರ್ಪಿಸಿದೆ ||೧|| ಗಂಗಾದಿ ಸಕಲ ತೀರ್ಥಂಗಳ ಚರಿಸಿದೆ ರಂಗವದನ ವೇದವ್ಯಾಸನ ಹಿಂಗದೆ ಮನದಲ್ಲಿ ನೆನೆದು ನೆನೆದು ಮೆರೆವ ಮಂಗಳಮಹಿಮೆಯ ನುತಿಸಿ ನುತಿಸಿ ನಾ ||೨|| ನಿನ್ನತಿಶಯಗುಣ ವರ್ಣಿಸಲಳವಲ್ಲ ನಿನ್ನ ಸೇವಕನ ಸೇವಕನೆಂತೆಂದು ಪನ್ನಗಶಯನ ಮುಕುಂದ ಕರುಣ ಪ್ರ- ಸನ್ನ ವಿಜಯವಿಠಲ ಸಂಪನ್ನ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಂತರಂಗದ ಕದವು ತೆರೆಯಿತಿಂದು

ಅಂತರಂಗದ ಕದವು ತೆರೆಯಿತಿಂದು ||ಪ|| ಎಂತು ಪುಣ್ಯದ ಫಲವು ಪ್ರಾಪ್ತಿ ದೊರಕಿತೊ ಎನಗೆ ||ಅ|| ಏಸುದಿನವಾಯಿತೊ ಬೀಗಮುದ್ರೆಯ ಮಾಡಿ ವಾಸವಾಗಿದ್ದರೋ ದುರುಳರಿಲ್ಲಿ ಮೋಸವಾಯಿತು ಇಂದಿನ ತನಕ ತಮಸಿನ ರಾಶಿಯೊಳಗೆ ಹೂಳಿ ಕಾಣಿಸುತ್ತಿರಲಿಲ್ಲ ||೧|| ಹರಿಕರುಣವೆಂಬ ಕೀಲಿಕೈ ದೊರಕಿತು ಗುರುಕರುಣವೆಂಬಂಥ ಶಕ್ತಿಯಿಂದ ಪರಮಭಾಗವತರ ಸಹವಾಸದಲಿ ಪೋಗಿ ಹರಿಸ್ಮರಣೆಯಿಂದಲ್ಲಿ ಬೀಗವ ತೆಗೆದೆ ||೨|| ಸುತ್ತಲಿದ್ದವರು ಪಲಾಯನವಾದರು ಭಕ್ತಿಕಕ್ಕಡವೆಂಬ ಜ್ಞಾನದೀಪ ಜತ್ತಾಗಿ ಹಿಡಕೊಂಡು ದ್ವಾರದೊಳಗೆ ಪೊಕ್ಕೆ ಎತ್ತನೋಡಿದರತ್ತ ಶೃಂಗಾರಸದನ ||೩|| ಹೊರಗೆ ದ್ವಾರವು ನಾಲ್ಕು , ಒಳಗೈದು ದ್ವಾರಗಳು ಪರ ದಾರಿಗೆ ಪ್ರಾಣ ಜಯವಿಜಯರು ಮಿರುಗುವ ಮಧ್ಯಮಂಟಪ ಕೋಟಿರವಿಯಂತೆ ಸರಸಿಜನಾಭನ ಅರಮನೆಯ ಸೊಬಗು ||೪||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಡಿಗೆಯನು ಮಾಡಬೇಕಣ್ಣ, ನಾವೀಗ ಸುಜ್ಞಾನದ

ಅಡಿಗೆಯನು ಮಾಡಬೇಕಣ್ಣ, ನಾವೀಗ ಸುಜ್ಞಾನದ ಅಡಿಗೆಯನು ಮಾಡಬೇಕಣ್ಣ ||ಪ|| ಅಡಿಗೆಯನು ಮಾಡಬೇಕಣ್ಣ , ಮದಿಸಬೇಕು ಮದಗಳನ್ನು ಒಡೆಯನಾಜ್ಞೆಯಿಂದ ಒಳ್ಳೆ ಸಡಗರದಿ ಈ ಮನೆಯ ಸಾರಿಸಿ ||ಅ.ಪ|| ತನ್ನ ಗುರುವನು ನೆನೆಯಬೇಕಣ್ಣ , ತನುಭಾವವೆಂಬ ಭಿನ್ನ ಕಶ್ಮಲವಳಿಯಬೇಕಣ್ಣ ಒನಕೆಯಿಂದ ಕುಟ್ಟಿ ಕೇರಿ ತನಗೆ ತಾನೆ ಆದ ಕೆಚ್ಚ - ನನುವರಿತು ಇಕ್ಕಬೇಕು ಅರಿವರ್ಗವೆಂಬ ತುಂಟರಳಿಸಿ ||೧|| ತತ್ವಭಾಂಡವ ತೊಳೆಯಬೇಕಣ್ಣ , ಸತ್ಯಾತ್ಮನಾಗಿ ಅರ್ತಿ ಅಕ್ಕಿಯ ಮಥಿಸಬೇಕಣ್ಣ ಕತ್ತರಿ ಮನವೆಂಬ ಹೊಟ್ಟನ್ನು ಎತ್ತಿ ಒಲೆಗೆ ಹಾಕಿ ಇನ್ನು ಹೊತ್ತಿಕೊಂಡಿಹ ಮಮತೆಯನ್ನು ಎತ್ತಿ ಹೆಸರ ಹಿಂಗಿಸುತಲಿ ||೨|| ಜನನ ಸೊಂಡಿಗೆ ಹುರಿಯಬೇಕಣ್ಣ , ನಿಜವಾಗಿ ನಿಂತು ತನುವ ತುಪ್ಪವ ಕಾಸಬೇಕಣ್ಣ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅವರೇ ಕಾಯ್ ಬೇಕು ಕಾಲದಿ

ಅವರೇ ಕಾಯ್ ಬೇಕು ಕಾಲದಿ ಅವರೇ ಕಾಯ್ ಬೇಕು ||ಪ|| ಅವರೆ ಬಹುರುಚಿಯವರೆ ಸಂಪದ ಅವರಿಂದಲಿ ಮೋಕ್ಷಾದಿ ಸಾಧನವು ||ಅ|| ಯುಕ್ತರಾಗಿ ಇರುವ ಜನರಿಗೆ ಭುಕ್ತಿಯನು ಕೊಡುವ ಭಕ್ತರಿಗೆಲ್ಲಾ ಬಾಯ್ಸವಿಯಾದ ಸಕ್ತಿಪುಟ್ಟಿಸುವ ಸರ್ವೋತ್ತಮವಾದ ||೧|| ಇವರೆಲ್ಲ ಅಳೆದು ಬಿತ್ತಿ ವಿವರವಾಗಿ ಅಳೆದು ತವಕದಿ ಮೂಟೆಯ ಕಟ್ಟಿಟ್ಟಿದ್ದರೆ ಜವನವರೆಳೆಯುವ ಕಾಲಕ್ಕೊದಗುತ ||೨|| ಹಿತರಾಗಿ ಅವರೆ ಮಾತಾ- ಪಿತರಾಗೀ ಅವರೆ ಗತಿದಾಯಕರಾಗಿ ಅವರೆ ಭೂ- ಸುತೆ ಗುರುರಾಮವಿಠಲರೀರ್ವರು ||೩|| --- ರಚನೆ:-ಬಾಗೇಪಲ್ಲಿ ಸುಬ್ರಹ್ಮಣ್ಯದಾಸರು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಶ್ರೀರಂಗವಿಠಲನ ಶ್ರೀ ಮಕುಟಕೆ ಶರಣು

( ನಾಟಿ ರಾಗ ಖಂಡಛಾಪು ತಾಳ) ಶ್ರೀರಂಗವಿಠಲನ ಶ್ರೀ ಮಕುಟಕೆ ಶರಣು ||ಪ|| ಶಿರದಲೊಪ್ಪುವ ನೀಲಕುಂತಳಕೆ ಶರಣು ಸಿರಿ ಸಹೋದರನರ್ಧದವಳಿಗೆ ಶರಣು ||ಅ.ಪ|| ಸೊಂಪು ನೋಟದ ಚೆಲುವ ಸೋಗೆಗಣ್ಣಿಗೆ ಶರಣು ಸಂಪಿಗೆಯ ಕುಸುಮಸಮ ನಾಸಿಕಕೆ ಶರಣು ಗುಂಪುರತ್ನದ ಕರ್ಣಕುಂಡಲಗಳಿಗೆ ಶರಣು ಇಂಪುದರ್ವಣನಿಭ ಕಪೋಲಗಳಿಗೆ ಶರಣು ||೧|| ಕುಂದಕುಟ್ಮಲ ಪೋಲ್ವ ದಂತಪಕ್ತಿಗೆ ಶರಣು ಅಂದವಾಗಿರುವ ಬಿಂಬೋಷ್ಠಕೆ ಶರಣು ಚಂದ್ರಿಕಾನಿಭ ಮುದ್ದು ಮಂದಹಾಸಕೆ ಶರಣು ನಂದಗೋಪನ ಮುದ್ದು ಕಂದನಿಗೆ ಶರಣು ||೨|| ಅಬ್ಜನಾಭನ ದಿವ್ಯ ಕಂಬು ಕಂಠಕೆ ಶರಣು ಅಬ್ಜಮುಖಿಯಿರುವ ವಕ್ಷಸ್ಥಳಕೆ ಶರಣು ಕುಬ್ಜೆಯ ಡೊಂಕ ತಿದ್ದಿದ ಭುಜಗಳಿಗೆ ಶರಣು ಅಬ್ಜಜಾಸನನ ಪೆತ್ತ ನಾಭಿಗೆ ಶರಣು ||೩|| ರನ್ನಗಂಟೆಗಳಿರುವ ನಿನ್ನ ಕಟಿಗೆ ಶರಣು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸರಸಿಜನಾಭನೆ ಸೆರಗೊಡ್ಡಿ ಬೇಡುವೆ

( ಕಾಂಬೋಧಿ ರಾಗ ಆದಿತಾಳ) ಸರಸಿಜನಾಭನೆ ಸೆರಗೊಡ್ಡಿ ಬೇಡುವೆ ದುರಿತಗಳೆಲ್ಲವ ತರಿದು ವರವಿತ್ತು ಕರುಣಿಸೋ ||ಪ|| ಕರುಣಾಸಾಗರ ನಿನ್ನ ಚರಣವ ನಂಬಿದೆ ಪರಮ ಪಾವನ ನಿನ್ನ ಶರಣನ ಪೊರೆಯೆಂದು ||೧|| ಈಶವಿನುತ ನಿನ್ನ ವಾಸಿಯ ಪೊಗಳುವೆ ದಾಸ ಎಂದೆನ್ನನು ಗಾಸಿಮಾಡದೆ ಕಾಯೊ ||೨|| ಬಾರಿಬಾರಿಗೆ ಬರುವ ದಾರಿದ್ರ್ಯ ದುಃಖವ ದೂರಗೈಸುವಂಥ ದಾರಿ ತೋರಿಸೆಂದು ||೩|| ಕಂತುಪಿತನೆ ಎನ್ನ ಅಂತರಂಗದಿ ನಿನ್ನ ಸಂತತ ನೆನೆವಂತೆ ಚಿಂತನೆ ನಿಲಿಸೆಂದು ||೪|| ಮಂಗಳಾತ್ಮಕನೆ ಶ್ರೀರಂಗವಿಟ್ಠಲ ಭು- ಜಂಗಶಯನ ನಿನ್ನ ಹಿಂಗದೆ ಭಜಿಪೆನು ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಶ್ರೀ ರಾಮ ನಿನ್ನ ಪಾದವ ತೋರೋ

(ಪೂರ್ವಿ ರಾಗ ಖಂಡ ಛಾಪು ತಾಳ) ಶ್ರೀ ರಾಮ ನಿನ್ನ ಪಾದವ ತೋರೋ ಮೋಹನ್ನ ಗುಣಧಾಮ ನಿನ್ನ ಮೋಹದ ಪಾದವ ||ಪ|| ವರಗುಣಜಾಲ ಸುರಗುಣಲೋಲ ಕರುಣಾಲವಾಲ ತರುಣೀ ಪರಿಪಾಲ ||೧|| ಅಜಭವಪೂಜಿತ ಗಜವರಭಾವಿತ ಸುಜನರ ಸೇವಿತ ತ್ರಿಜಗವಂದಿತ ||೨|| ಅಂಗಜ ಜನಕ ವಿಹಂಗತುರಂಗ ತುಂಗವಿಕ್ರಮ ಶ್ರೀರಂಗವಿಠಲ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಿನ್ನ ಮಗನ ಲೀಲೆಯ ತಾಳಲಾರೆವೆ

(ಕುರಂಜಿ ರಾಗ ಆದಿತಾಳ) ನಿನ್ನ ಮಗನ ಲೀಲೆಯ ತಾಳಲಾರೆವೆ ನಾವು ತರಳನ ದುಡುಕು ಹೇಳಬಾರದೆ ಗೋಪಾಲಕೃಷ್ಣಗೆ ಬುದ್ಧಿ ಅಮ್ಮ ||ಪ|| ಇದು ಚೆನ್ನಾಯಿತು ತಿಳಿದವನಲ್ಲವೆ ನೀ ಕೇಳೆ ಯಶೋದೆ ||ಅ.ಪ|| ಬಾಲಕನೆಂದು ಲಾಲಿಸಿ ಕರೆದರೆ ಮೂಲೆ ಮನೆಯೊಳಗೆ ಪೊಕ್ಕು ಪಾಲು ಬೆಣ್ಣೆ ಮೊಸರೆಲ್ಲವ ಮೆದ್ದು ಕೋಲಲಿ ನೀರೆ ಕೊಡವ ಒಡೆದನೇ ಆಸಲ (?) ವರ್ಣನವ ದಿಟ್ಟ ನಿತ್ಯಾ ಇವನ ಹೋರಾಟ ಹೆಬ್ಬಾಲೆಯರಲ್ಲಿ ನೋಟ ಬಹಳ ಬಗೆಯಲಿ ಪಿಡಿದೇವೆಂದರೆ ಮೇಲಿಯಂಜಲುಗಳವೋಡಿದಾ (?) ಅಮ್ಮ ಇದು ಚೆನ್ನಾಯಿತು ||೧|| ಮತ್ತೆ ಭಾಮಿನಿಯರೆಲ್ಲರು ಕೂಡಿ ಮಡುವಿನಲ್ಲಿ ಜಲಕ್ರೀಡೆಯಾಡಿರಲು ಚಿತ್ತಚೋರ ಸೀರೆಗಳನೆಲ್ಲವ- ನೆತ್ತಿಕೊಂಡು ಮರನನೇರಿದನವ್ವಾ ಬೆತ್ತಲೆ ಭಾಮೆಯರೆಲ್ಲ ಬೇಡಿದರೆ ಕೊಡನಲ್ಲ ಈ ಯುಕ್ತಿಗಳೆ ಬಹುಬಲ್ಲ ಹತ್ತಿಲಿ ಬಂದು ಕರವೆತ್ತಿ ಮುಗಿದರೆ
ದಾಸ ಸಾಹಿತ್ಯ ಪ್ರಕಾರ
ಬರೆದವರು