ಪದ / ದೇವರನಾಮ

ದಾಸರ ಪದಗಳು

ತುಂಗ ಭುಜಂಗನ ಫಣೆಯಲಿ ಕುಣಿದನು

ತುಂಗ ಭುಜಂಗನ ಫಣೆಯಲಿ ಕುಣಿದನು ಮಂಗಳ ಮೂರುತಿ ರಂಗಾ|| ಗಿಣಿಗಿಣಿ ತಾಳ ಝೇಂಕರಿಸುವ ತಂಬೂರಿ ಗಣಗಣವೆಂಬೊ ಸುನಾದ ಮೃದಂಗವ ಝಣಿಝಣಿಸುವ ಗಂಜರಿ ನಾದಗಳನು ಅನುಕರಿಸುತ ದಿಕ್ಕಿಟದಿಕ್ಕಿಟ ಎಂದು|| ಗಗನವ ತುಂಬಿ ತುಂಬುರು ಗಂಧರ್ವರು ಶಹನ ಅಟಾಣ ಶಂಕರಾಭರಣಗಳಿಂದ ಸೊಗಸಿನಿಂದಲಿ ಗುಣಗಾನವ ಮಾಡಲು ನಗಧರ ಕೃಷ್ಣನು ನಗುಮೊಗದಿಂದಲಿ|| ಪನ್ನಗ ಸತಿಯರು ಚೆನ್ನಾದ ತವಕದಿ ಸನ್ನುತಿಸುತ ಆರತಿಯ ಬೆಳಗುತಿರೆ ಉನ್ನತ ಗಗನದಿ ಸುಮನಸರೆಲ್ಲ ಪ್ರಸನ್ನ ಹರಿಗೆ ಸುಮ ಮಳೆಗರೆಯುತಲಿರೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮಧುರವು ಮಧುರನಾಥನ ನಾಮವು

ಮಧುರವು ಮಧುರನಾಥನ ನಾಮವು ದಧಿ ಮಧು ದ್ರಾಕ್ಷಾಸುಧೆರಸಗಳಿಗಿಂತ|| ಸುಂದರವದನನ ಅರವಿಂದ ನಯನನ ನಂದಕುಮಾರನ ಚೆಂದದ ನಾಮವು|| ಯದುಕುಲತಿಲಕನ ಸದಮಲ ಚರಿತನ ಮದನಪಿತನ ನಾಮ ಮುದದಲಿ ಪಾಡಲು|| ಗಾನವಿಲೋಲನ ದಾನವಕಾಲನ ಲೀಲೆಗಳನು ಸದಾ ಲಾಲಿಸಿ ಪೊಗಳಲು|| ಹೇಮವಸನನ ಕೋಮಲರೂಪನ ಭಾಮಕಾಂತನ ಪ್ರೇಮದ ನಾಮವು|| ಪನ್ನಗಶಯನನ ಚಿನ್ಮಯರೂಪನ ಸನ್ನುತಿಸಲಿಕೆ ಪ್ರಸನ್ನನ ನಾಮವು||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಪಮೃತ್ಯು ಪರಿಹರಿಸೊ ಅನಿಲ ದೇವ

( ರಾಗ ಕಾಂಬೋಧಿ(ಭೂಪ) ಝಂಪೆತಾಳ) ಅಪಮೃತ್ಯು ಪರಿಹರಿಸೊ ಅನಿಲದೇವ ಕೃಪಣ ವತ್ಸಲನೆ ಕಾವರ ಕಾಣೆ ಜಗದೊಳಗೆ ||ಪ|| ನಿನಗಿನ್ನು ಸಮರಾದ ಅನಿಮಿತ್ತ ಬಾಂಧವರು ಎನಗಿಲ್ಲ ಆವಾವ ಜನುಮದಲ್ಲಿ ಅನುದಿನವು ಎಮ್ಮನುದಾಸೀನ(/ಎಮ್ಮನೀನುದಾಸೀನ) ಮಾಡುವುದು ಅನುಚಿತವು ನಿನಗೆ ಸಜ್ಜನ ಶಿಖಾಮಣಿಯೆ ||೧|| ಕರಣಾಭಿಮಾನಿಗಳು ಕಿಂಕರರು ಮೂರ್ಲೋಕ ದೊರೆ ನಿನ್ನೊಳಗಿಪ್ಪ ಪರ್ವಕಾಲ ಪರಿಸರನೆ ಈ ಭಾಗ್ಯ ದೊರೆತನಕೆ ಸರಿಯುಂಟೆ ಗುರುವರನೆ ನೀ ದಯಾಕರನೆಂದು ಬಿನ್ನೈಪೆ ||೨| ಭವರೋಗಮೋಚಕನೆ ಪವಮಾನರಾಯ ನಿ- ನ್ನವರವನು ನಾನು ಮಾಧವಪ್ರಿಯನೆ ಜವನ ಬಾಧೆಯ ಬಿಡಿಸು ಅವನಿಯೊಳು ಸುಜನರಿಗೆ ದಿವಿಜಗಣ ಮಧ್ಯದೊಳು ಪ್ರವರ ನೀನಹುದೋ ||೩|| ಜ್ಞಾನಾಯು ರೂಪಕನು ನೀನಹುದೊ, ವಾಣಿ ಪಂ- ಚಾನನಾದ್ಯಮರರಿಗೆ ಪ್ರಾಣದೇವ
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಿಲ್ಲುಬಾರೊ ದಯಾನಿಧೆ

( ರಾಗ-ಆನಂದಭೈರವಿ(ಕಿರ್ವಾಣಿ) ಅಟತಾಳ(ದೀಪಚಂದಿ) ) ನಿಲ್ಲುಬಾರೊ ದಯಾನಿಧೆ ||ಪ|| ನಿಲ್ಲುಬಾರೊ ಸರಿಯಿಲ್ಲ ನಿನಗೆ ಲಕ್ಷ್ಮೀ- ವಲ್ಲಭ ಮನ್ಮನದಲ್ಲಿ ಬಿಡದೆ ಬಂದು ||೧|| ಅತಿಮೃದುವಾದ ಹೃತ್ಶತಪತ್ರ ಸದನದಿ ಶಾಶ್ವತ ಭವ್ಯ ಮೂರುತಿ ಭಕ್ತವತ್ಸಲ ||೨|| ನಾನಾ ವ್ರತಂಗಳ ನಾನನುಕರಿಸಿದೆ ಶ್ರೀನಿಧಿ ನಿನ್ನಂಘ್ರಿ ಕಾಣಬೇಕೆನುತಲಿ ||೩|| ತನು ಮನ ಧನ ಚಿಂತೆಯ ಬಿಟ್ಟು ತ್ವತ್ಪದ ವನರುಹ ಧೇನಿಪೆ ಮನುಮಥನಯ್ಯ ||೪|| ಯಾತರ್ಯೋಚನೆ ಮನಸೋತ ಬಳಿಕ ಪುರು- ಹೂತವಂದಿತ ಜಗನ್ನಾಥವಿಠ್ಠ್ಲರೇಯ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು

ದಾಸೋಹಂ ತವ ದಾಸೋಹಂ

( ರಾಗ- ಪೀಲೂ (ಭೈರವ) ಆದಿತಾಳ) ದಾಸೋಹಂ ತವ ದಾಸೋಹಂ ತವ ದಾಸೋಹಂ ತವ ದಾಸೋಹಂ ||ಪ|| ವಾಸುದೇವ ವಿಗತಾಘಸಂಘ ತವ ||ಅ. ಪ|| ಜೀವಾಂತರ್ಗತ ಜೀವ ನಿಯಾಮಕ ಜೀವ ವಿಲಕ್ಷಣ ಜೀವನದ ಜೀವಾಧಾರಕ ಜೀವರೂಪಿ ರಾ- ಜೀವ ಭವಜನಕ ಜೀವೇಶ್ವರ ತವ ||೧|| ಕಾಲಾಂತರ್ಗತ ಕಾಲನಿಯಮಕ ಕಾಲಾತೀತ ತ್ರಿಕಾಲಜ್ಞ ಕಾಲ ಪ್ರವರ್ತಕ ಕಾಲನಿವರ್ತಕ ಕಾಲೋತ್ಪಾದಕ ಕಾಲಮೂರ್ತಿ ತವ ||೨|| ಕರ್ಮಕರ್ಮಕೃತ ಕರ್ಮಕೃತಾಗಮ ಕರ್ಮ ಫಲಪ್ರದ ಕರ್ಮಜಿತ ಕರ್ಮಬಂಧ ಮಹ ಕರ್ಮವಿಮೋಚಕ ಕರ್ಮನಿಗ್ರಹ ಕರ್ಮಸಾಕ್ಷಿ ತವ ||೩|| ಧರ್ಮಯೂಪ ಮಹ ಧರ್ಮವಿವರ್ಧನ ಧರ್ಮವಿದೊತ್ತಮ ಧರ್ಮನಿಧೇ ಧರ್ಮಸೂಕ್ಷ್ಮ ಮಹ ಧರ್ಮಸಂರಕ್ಷಕ ಧರ್ಮಸಾಕ್ಷಿ ಯಮಧರ್ಮಪುತ್ರ ತವ || ೪|| ಮಂತ್ರಯಂತ್ರ ಮಹ ಮಂತ್ರ ಬೀಜ ಮಹ ಮಂತ್ರ ರಾಜಗುರು ಮಂತ್ರಧೃತ ಮಂತ್ರಮೇಯ ಮಹ ಮಂತ್ರನಿಯಾಮಕ
ದಾಸ ಸಾಹಿತ್ಯ ಪ್ರಕಾರ
ಬರೆದವರು

ತಾರಕವಿದು ಹರಿಕಥಾಮೃತ

( ರಾಗ- ಪಂತುವರಾಳಿ(ಭೈರವಿ) ರೂಪಕತಾಳ(ದಾದರಾ) ) ತಾರಕವಿದು ಹರಿಕಥಾಮೃತ , ಸಾರಜನಕೆ ಘೋರತರ ಅಸಾರಸಂಸಾರವೆಂಬ ಶರಧಿಗೆ ನವತಾರಕ ||ಪ|| ಶ್ವಾನಸೂಕರಾದಿ ನೀಚಯೋನಿಗಳಲ್ಲಿ ಬಂದು ನೊಂದು ವೈನತೇಯವಾಹನ ಸನ್ನಿಧಾನ ಬೇಕು ಎಂಬವಗೆ ||೧|| ಪ್ರಿಯವಸ್ತುಗಳೊಳು ಪಾಂಡವರ ಸಖನೆ ಎಮಗೆ ಬ್ರಹ್ಮ ವಾಯು ಉಚ್ಚಸುರರು ತಂದೆತಾಯಿ ಎಂದರಿತವರಿಗೆ ||೨|| ಶ್ರೀ ಮುಕುಂದ ಸರ್ವ ಮಮ ಸ್ವಾಮಿ ಅಂತ- ರಾತ್ಮ ಪರಂಧಾಮ ದೀನಬಂಧು ಪುಣ್ಯನಾಮವೆಂದರಿತವರಿಗೆ ||೩|| ಜ್ಞೇಯಜ್ಞಾನಜ್ಞಾತೃ ಬಾದರಾಯಣಾಖ್ಯ ಹರಿಯ ವಚನ ಕಯ ಮನದಿ ಮಾಡ್ದ ಕರ್ಮ ಶ್ರೀಯರಸನಿಗೀವ ನರಗೆ ||೪|| ಭೂತ ಭವ್ಯ ಭವತ್ಪ್ರಭು ಅನಾಥಜನರ ಬಂಧು ಜಗ- ನ್ನಾಥವಿಠಲ ಪಾಹಿಯೆಂದು ಮಾತು ಮಾತಿಗೆಂಬುವರಿಗೆ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು

ತಿಳಿಯದೋ ನಿನ್ನಾಟ ತಿರುಪತಿಯ ವೆಂಕಟ

ತಿಳಿಯದೋ ನಿನ್ನಾಟ ತಿರುಪತಿಯ ವೆಂಕಟ |ಪ| ಪೊಳೆವ ನೀರೊಳು ಗೆಲುವ ಮೋರೆಯ ನೆಲವ ನೋಡುವ ಸುಳಿವ ಕಂಬದಿ ಇಳೆಯನಳೆಯುವ ಭಳಿರೆ ಭಾರ್ಗವ ಖಳನ ಛೇಧಿಸಿ ಕೊಳಲಧ್ವನಿಗೆ ನಳಿನಮುಖಿಯರ ನಾಚಿಸುವ ಬಲು ಹಯದಳದ ಬಹು ಹವಣೆಗಾರನೆ|| ಆರು ಬಲ್ಲರು ನಿಮ್ಮ ಶ್ರೀ ಲಕುಮಿಯ ಮನಸಿಗೆ ತೋರುವಿಯೊ ಪರಬೊಮ್ಮ ಉಳಿದವರು ಬಲ್ಲರೆ ನೀರಜಾಸನ ಬೊಮ್ಮ ಇದು ನಿನ್ನ ಮರ್ಮ ನೀರೊಳಗೆ ಮನೆ ಭಾರ ಬೆನ್ನಿಲಿ ಕೋರದಾಡೆಯ ನಾರಸಿಂಹನೆ ಧರೆಯ ಬೇಡಿದ ಧೀರಪುರುಷನೆ ವಾರಿಬಂಧನ ಮಾರಜನಕನೆ ನಾರಿಯರ ವ್ರತವಳಿದು ಕುದುರೆಯನೇರಿ ಮೆರೆಯುವ ಸುಂದರಾಂಗನೆ|| ಸಕಲಮಾಯವಿದೇನು ವೃಕನ ವಾಯು ಸಖನ ಸಲಹಿದೆ ನೀನು ಭಕುತಿಯಿಂದಲಿ ತುತಿಪರಿಗೆ ಸುರಧೇನು ಸುರಕಾಮಧೇನು ನಿಖಿಳ ವೇದೋದ್ಧಾರ ಗಿರಿಧರ ಅಖಿಳ ಭೂಮಿಯ ತಂದ ನರಹರಿ ಯುಕುತಿಯಲಿ ನೆಲನಳೆದ ಭಾರ್ಗವ ಮುಕುತಿಗೋಸುಗ ಫಲವ ಸವಿದನೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ತಟಿತ್ಕೋಟಿ ನಿಭಕಾಯ

(ರಾಗ - ಪಂತುವರಾಳಿ(ಕಾಲಿಂಗಡ) ಆದಿತಾಳ(ಕಹರವಾ) ತಟಿತ್ಕೋಟಿ ನಿಭಕಾಯ ಜಗನ್ನಾಥ ವಿಠಲಯ್ಯಾ ವಿಠಲಯ್ಯಾ ||ಪ|| ಭಜಿಸುವೆ ನಿನ್ನನು ಅಜಭವಸುರನುತ ಭಜಕಾಮರತರು ಕುಜನಕುಠಾರಾ ||೧|| ನೀ ಕರುಣಿಸದೆ ನಿರಾಕರಿಸಲು ಎನ್ನ ಸಾಕುವರ್ಯಾರು ದಯಾಪರ ಮೂರುತಿ ||೨|| ಶರಣಾಗತರನು ಪೊರೆವೆನೆಂಬ ತವ ಬಿರುದು ಕಾಯೋ ಕರಿವರ ಜಗನ್ನಾಥ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ರತುನ ದೊರಕಿತಲ್ಲ ಎನಗೆ ದಿವ್ಯ ರತುನ ದೊರಕಿತಲ್ಲ

( ರಾಗ: ಬಿಲಹರಿ( ಭೀಮ್ ಪಲಾಸ್ ) ಆಟತಾಳ(ದೀಪಚಂದಿ) ) ರತುನ ದೊರಕಿತಲ್ಲ ಎನಗೆ ದಿವ್ಯ- ರತುನ ದೊರಕಿತಲ್ಲ ||ಪ|| ರತುನ ದೊರಕಿತು ಎನ್ನ ಜನ್ಮ ಪ- ವಿತ್ರವಾಯಿತು ಈ ದಿನವು ನಾ ಯತುನಗೈವುತ ಬರುತಿರಲು ಪ್ರ- ಯತನವಿಲ್ಲದೆ ವಿಜಯರಾಯರೆಂಬ ||ಅ. ಪ|| ಪಥದಿ ನಾ ಬರುತಿರಲು ಥಳಥಳವೆಂದು ಅತಿಕಾಂತಿ ಝಳಪಿಸಲು ಬೆರಗಾಗುತ್ತ ಅತಿಚೋದ್ಯವ ಕಾಣಲು ಸೇವಿಸುತಿರೆ ಸತತ ಕರಪಿಡಿದಾದರಿಸಿ ಮನೋ ರಥವ ಪೂರೈಸುತಲಿ ದಿವ್ಯ ಸ- ನ್ಮತಿಯ ಪಾಲಿಸಿ ಮೋಕ್ಷ ಸುಪಥವ ಅತಿಶಯದಿ ತೋರುತಲಿ ಪೊರೆಯುವ ||೧|| ಜ್ಞಾನವೆಂಬೋ ಪುತ್ಥಳಿ ಕಂಬಿಯಲಿ ಅಣಿಮುತ್ತಿನ ಭಕ್ತಿಲಿ ಸುಕೃತಮಾತಾ ನಾನಾ ವಿಧ್ಹ್ ವಳದಲಿ ಸೇರಿಸುತಿರೆ ಪ್ರಾಣಪದಕವೆಂಬ ಮಾಲಾನು- ಮಾನವಿಲ್ಲದೆ ಕೊರಳಿಗ್ಹಾಕುತ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬಿನ್ನೈಪೆ ನಿನಗಾನು ಭೀಮಸೇನ

(ರಾಗ ಕಾಂಬೋಧಿ (ಭೂಪ್ ) ಝಂಪೆತಾಳ) ಬಿನ್ನೈಪೆ ನಿನಗಾನು ಭೀಮಸೇನ ||ಪ|| ಬನ್ನಬಡುತಿಹ ಜನರ ಭಯವ ಪರಿಹರಿಸೆಂದು ||ಅ.ಪ|| ನೀಚರಿಂದಲಿ ಬಂದ ಭಯಗಳಿಂದಲಿ ಜನರು ಯೋಚಿಸುವರೆಮಗಾರು ಗತಿಯೆನುತಲಿ ಕೀಚಕಾಂತಕ ನಿನ್ನ ಕೀರ್ತಿ ಬಹುವಿಧ ಕೇಳಿ ಯಾಚಿಸುವೆ ನಿನಗಾನು ಎಲ್ಲರನು ಸಲಹೆಂದು ||೧|| ರೋಚನೇಂದ್ರನೆ ಭವವಿಮೋಚಕನು ನೀನೆ ಸಚರಾಚರಕೆ ಸಂತತ ಪುರೋಚನಾರೆ ಪ್ರಾಚೀನ ಕರ್ಮಾಬ್ಧಿವೀಚಿಯೊಳು ಮುಳುಗಿಹರ ಖೇಚರೇಂದ್ರಾಹಿಪ ತ್ರಿಲೋಚನರ ಗುರುವೆಂದು ||೨|| ಖಚರೋತ್ತಮನೆ ನಿನ್ನ ಸುಚರಿತ್ರೆಗಳ ಕೇಳಿ ರಚನೆಗಯ್ಯಬಲ್ಲೆನೆ ಅಚಲಸತ್ವ ಪ್ರಚಲಿಸುತ್ತಿಹ ಮನೋವಚನಕಾಯವ ಘಟೋ- ತ್ಕಚಜನಕ ಸಜ್ಜನರ ಪ್ರಚಯ ಮಾಡುವುದೆಂದು ||೩|| ಈ ಚತುರ್ದಶ ಭುವನದಾಚಾರ್ಯ ದೇಶ ಕಾ- ಲೋಚಿತ ಸುಧರ್ಮಗಳ ಸೂಚಿಸೆಮಗೆ
ದಾಸ ಸಾಹಿತ್ಯ ಪ್ರಕಾರ
ಬರೆದವರು