ಉಗಾಭೋಗ

Haridasa compositions that fall under ugAbgOga category

ಮಾರಿಯ ಕೈಯಿಂದ ನೀರ ತರಿಸುವರು

ಮಾರಿಯ ಕೈಯಿಂದ ನೀರ ತರಿಸುವರು ಮಸಣಿಯ ಕೈಯಿಂದ ಕಸವ ಬಳಿಸುವರು ಮೃತ್ಯುವಿನ ಕೈಯಿಂದ ಭತ್ತವ ಕುಟ್ಟಿಸುವರು ಜವನವರ ಕೈಯಿಂದ ಜಂಗುಲಿಯ ಕಾಯಿಸುವರು ಪುರಂದರವಿಠಲನ ದಾಸರು ಸರಿಬಂದ ಹಾಗಿಹರು ಭೂಮಿಯ ಮೇಲೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ತಾಯಿ ಗೋಪಿಯಂತೆ ನಿನ್ನ ಒರಳನೆಳೆಸಲಿಲ್ಲ

ತಾಯಿ ಗೋಪಿಯಂತೆ ನಿನ್ನ ಒರಳನೆಳೆಸಲಿಲ್ಲ ವಾಲಿಯಂತೆ ಎದುರು ವಾದಿಸುತಿರಲಿಲ್ಲ ಭೃಗುಮುನಿಯಂತೆ ನಿನ್ನ ಎದೆಯ ತುಳಿಯಲಿಲ್ಲ ಭೀಷ್ಮನಂತೆ ನಿನ್ನ ಹಣೆ ಒಡೆಯಲಿಲ್ಲ ಕೊಂಕಣಿಗರ ಎಮ್ಮೆಗೆ ಕೊಡತಿಯೆ ಮದ್ದೆಂದು ಅವರೆ ಮದ್ದು ನಿನಗೆ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಏಳುತ್ತ ಗೋವಿಂದಗೆ ಕೈಯ ಮುಗಿವೆ

ಏಳುತ್ತ ಗೋವಿಂದಗೆ ಕೈಯ ಮುಗಿವೆ ಕಣ್ಣಲಿ ತೆಗೆದು ನೋಡುವೆ ಶ್ರೀಹರಿಯ ನಾಲಿಗೆ ತೆಗೆದು ನಾರಾಯಣ ನರಹರಿ ಸೋಳಸಾಸಿರ ಗೋಪಿಯರರಸ ಎನ್ನಾಳುವ ಧೊರೆಯೆ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕೋಳಿಗೆ ಏತಕ್ಕೆ ಹೊನ್ನುಪಂಜರವು

ಕೋಳಿಗೆ ಏತಕ್ಕೆ ಹೊನ್ನುಪಂಜರವು ಬೋಳಿಗೆ ಏತಕ್ಕೆ ಜಾಜಿಮಲ್ಲಿಗೆ ದಂಡೆ ಆಳಿಲ್ಲದವಗೆ ಅರಸುತನವೇಕೆ ಮಾಳಿಗೆ ಮನೆಯು ಬಡವಗಿನ್ನೇಕೆ ನಿನ್ನ ಊಳಿಗ ಮಾಡದವನ ಬಾಳು ಇನ್ನೇತಕೆ ಕೇಳಯ್ಯ ದೇವ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮಾತಾಪಿತರು ನಿನಗಂದೆ ಮಾರಿದರೆನ್ನ

ಮಾತಾಪಿತರು ನಿನಗಂದೆ ಮಾರಿದರೆನ್ನ ನಾಥನೆ ನೀನೆನ್ನ ಸಲಹದಿದ್ದರೆ ದೇವ ಏತಕೆ ಭಕ್ತವತ್ಸಲನೆನಿಸಿಕೊಂಡೆ ನಾ ತಡೆಯೆನೊ ನಿನ್ನ ಬಿರುದಿಗಂಜುವನಲ್ಲ ಸಾತ್ವಿಕ ದೈವವೆ ಸಲಹೊ ಎನ್ನ ಪ್ರಖ್ಯಾತಪುರುಷ ಶ್ರೀಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಾಳೀಯನಂತೆ ಕಟ್ಟಿ ಬಿಗಿಯಬೇಕು

ಕಾಳೀಯನಂತೆ ಕಟ್ಟಿ ಬಿಗಿಯಬೇಕು ಬಲಿಯಂತೆ ನಿನ್ನ ಬಾಗಿಲ ಕಯಿಸಲಿಬೇಕು ಕುಬ್ಜೆಯಂತೆ ನಿನ್ನ ರಟ್ಟುಬುತ್ತು ಮಾಡಿ ಮುಂಜೆರಗ ಪಿಡಿದು ಗುಂಬೆ ಹಾಕಿಸಬೇಕು ಪುರಂದರವಿಠಲ ನಿನ್ನ ಅಟಿಮುಟ್ಟಿ ಹಾಕೆಂದರೆ ಪುಟ್ಟದು ರವಿ ತಿರಿತಿಂಬಂತೆ ಮಾಡುವೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬಲಿಯಂತೆ ಮುಕುಟವ

ಬಲಿಯಂತೆ ಮುಕುಟವ ಕದ್ದುಕೊಂಡೋಡಬೇಕು ವಾಲಿಯಂತೆ ನಿನ್ನ ಮೂದಲಿಸಬೇಕು ಸುಗ್ರೀವನಂತೆ ನಿನ್ನ ಲೆಕ್ಕಿಸದಿರಬೇಕು ಪುರಂದರವಿಠಲ ನಿನ್ನ ನಂಬಿರಬೇಕು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಾವ ದೈವವು ನೀನೆ ಕೈಮುಗಿವೆನು ನಾನು

ಕಾವ ದೈವವು ನೀನೆ ಕೈಮುಗಿವೆನು ನಾನು ಕೈವಲ್ಯ ಫಲದಾತ ಕೇಶವನೆ ರಘುನಾಥ ಯಾವ ದೈವಕಿನ್ನು ಈ ವೈಭವಗಳ ಕಾಣೆ ರಾವಣಾಂತಕ ಶ್ರೀಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸಿರಿ ಚತುರ್ಮುಖ ಸುರರು

ಸಿರಿ ಚತುರ್ಮುಖ ಸುರರು ಮನು ಮುನಿಗಳು ಮನುಜೋತ್ತಮರು ತಾರತಮ್ಯಯುಕ್ತರು ಪುರಂದರವಿಠಲನ ಸದಾಶರಣರು ||
ದಾಸ ಸಾಹಿತ್ಯ ಪ್ರಕಾರ
ಬರೆದವರು