Skip to main content

ಮನವ ನಿಲಿಸುವದು ಬಹು ಕಷ್ಟ

(ರಾಗ ನಾದನಾಮಕ್ರಿಯ ಆದಿ ತಾಳ )

ಮನವ ನಿಲಿಸುವದು ಬಹು ಕಷ್ಟ, ಹರಿದಾಡುವಂಥ
ಮನವ ನಿಲಿಸುವದು ಬಹು ಕಷ್ಟ ||ಪ||

ಕಾಶಿಗ್ಹೋಗಲುಬಹುದು
ದೇಶ ತಿರುಗಲುಬಹುದು
ಆಸೆ ಸುಟ್ಟಂತೆ ಇರಬಹುದು ||೧||

ಜಪವ ಮಾಡಲುಬಹುದು
ತಪವ ಮಾಡಲುಬಹುದು
ಉಪವಾಸ ವ್ರತದಲ್ಲಿರಬಹುದು ||೨||

ಸ್ನಾನ ಮಾಡಲುಬಹುದು
ಮೌನ ಮಾಡಲುಬಹುದು
ಧ್ಯಾನದಿಪುರಂದರವಿಠಲನ ಚರಣದಲಿ ||೩||

ದಾಸ ಸಾಹಿತ್ಯ ಪ್ರಕಾರ: 
ಬರೆದವರು: 

Comments

ಇದು ಪ್ರಸಿದ್ಧ ಹಾಡು . ಇಪ್ಪತ್ತು - ಮೂವತ್ತು ವರ್ಷದ ಹಿಂದೆ ಧಾರವಾಡ ಆಕಾಶವಾಣಿಯಲ್ಲಿ ಜಯಶ್ರೀ ಲಕ್ಷ್ಮೇಶ್ವರ ಅವರು ಹಾಡಿದ್ದ ಹಾಡು ತುಂಬ ಜನಪ್ರಿಯವಾಗಿತ್ತು . ಇಂಟರ್ನೆಟ್ಟಲ್ಲಿ ಹುಡುಕಿ ನೋಡಿದೆ ಸಿಗಲಿಲ್ಲ ; ಆಗಲೇ ಯೂನಿಕೋಡ್ ಬಳಸಿದ ಇಂಥ ತಾಣದ ಬೆಲೆ ಅರಿವಾಯಿತು .
ನೆನಪಿಟ್ಟುಕೊಂಡು ಸಿಕ್ಕಾಗ ಹಾಕುವೆ . ನಿಮಗಾರಿಗಾದರೂ ಸಿಕ್ಕರೆ ನೀವು ಹಾಕಿ.