Skip to main content

ಎಂದಿಗಾಹುದೋ ನಿನ್ನ ದರ್ಶನ

ರಾಗ: ಆರಭಿ ರೂಪಕ ತಾಳ

ಎಂದಿಗಾಹುದೋ ನಿನ್ನ ದರ್ಶನ ||ಪ||
ಅಂದಿಗಲ್ಲದೆ ಬಂಧ ನೀಗದೊ ||ಅ. ಪ.||

ಗಾನಲೋಲ ಶ್ರೀವತ್ಸ ಲಾಂಛನ
ದಾನವಾಂತಕ ದೀನ ರಕ್ಷಕ

ಆರಿಗೆ ಮೊರೆಯಿಡಲೊ ದೇವನೆ
ಸಾರಿ ಬಂದು ನೀ ಕಾಯೊ ಬೇಗನೆ

ಗಜವ ಪೊರೆದೆಯೊ ಗರುಡ ಗಮನನೆ
ತ್ರಿಜಗಭರಿತ ಶ್ರೀ ವಿಜಯ ವಿಠ್ಠಲ

ದಾಸ ಸಾಹಿತ್ಯ ಪ್ರಕಾರ: 
ಬರೆದವರು: