ನಿನ್ನ ದಾಸನಾದೆ

ನಿನ್ನ ದಾಸನಾದೆ

(ರಾಗ ಯದುಕುಲಕಾಂಭೋಜ ತ್ರಿಪುಟತಾಳ ) ನಿನ್ನ ದಾಸನಾದೆ ನಾನು ||ಪ|| ಎನ್ನ ಮನ್ನಿಸಿ ಮಮತೆಯ ಮಾಡಯ್ಯ ನೀನು ||ಅ|| ಜನನಿಯ ಗರ್ಭದೊಳು ನಾನು ಬಲು ದೀನತ್ವದಿಂದ ತೊಳಲಿ ಬಂದವನು ಚಿನುಮಯಾನಂದಾತ್ಮಕನು ಏ- ನನುಮಾನವಿಲ್ಲದೆ ನಿನ್ನ ನಂಬಿದೆನು || ಹಲವು ಜನ್ಮದಿ ತೊಳಲಿದೆನು ಬಲು ಬಳಲಿದೆನು ಸಾಕೋ ಜನಿಸಲಾರೆ ನಾನು ನಳಿನಾಕ್ಷ ನಿನ್ನ ನಂಬಿದೇನು, ಎನ್ನ ಅಳಲಿಸುವುದು ಗುಣವಲ್ಲ ಇದೇನು || ಮಲಮೂತ್ರ ದೇಹದೊಳ್ಬಂದು ಬಲು ಅಲಸಿದೆ ನಿನ್ನ ಕಾಣದೆ ದೇಹ ನೊಂದು ಲಲನೆಗಕ್ಷಯವಿತ್ತೆ ಎಂದು, ನಿನ್ನ ಒಳಗಿನ ಕರುಣದ ಕಂದ ನಾನೆಂದು || ಮಂದಮತಿಯೊಳಗಾನು ಬಲು ದಂದುಗದಲಿ ಸಿಲುಕಿ ನೊಂದೆನೊ ನಾನು ತಂದೆತಾಯೆಲ್ಲವು ನೀನು, ಹೀಗೆ ಎಂದು ನೇಮಿಸು ಎನಗೊಂದು ದಾರಿಯನು || ಹಿಂದಿನ ಜನ್ಮವ ಮರೆತು ಎನ್ನ ಅಂತರಂಗವು ಕರಗಿತು ನಿನ್ನನೆ ಮರೆತು ಚಿಂತೆಗಳೆಲ್ಲವ ತೊರೆದು ನಿ- ಶ್ಚಿಂತನಾದೆ ನಿನ್ನ ದಾಸರೊಳ್ ಬೆರೆತು || ಸಾರಿ ಪೇಳುವೆನೊಂದು ಸೊಲ್ಲ ಇದ- ನರಿತು ತಿಳಿದುಕೊಳ್ಳಿರಿ ನೀವೆಲ್ಲ ನಾರಾಯಣನಲ್ಲದಿಲ್ಲ, ಹೀಗೆ ಸಾರುತಿದೆ ವೇದ ಶಾಸ್ತ್ರಂಗಳಲೆಲ್ಲ || ಮರೆತೆನೋ ನಿನ್ನ ನಾಮವನು, ಜಿಹ್ವೆಗೆ ಬರೆದು ಬೋಧಿಸೊ ನಿನ್ನ ದಿವ್ಯ ನಾಮವನು ಶರಣುಪೊಕ್ಕರ ಕಾಯುವನು, ನಮ್ಮ ವರದ ಪುರಂದರವಿಠಲ ಇದೇನು ||
ದಾಸ ಸಾಹಿತ್ಯ ಪ್ರಕಾರ
ಬರೆದವರು