ಸುಲಭಪೂಜೆಯ ಮಾಡಿ

ಸುಲಭಪೂಜೆಯ ಮಾಡಿ

( ರಾಗ ಕಾಂಭೋಜ ಝಂಪೆತಾಳ) ಸುಲಭಪೂಜೆಯ ಮಾಡಿ ಬಲವಿಲ್ಲದವರು ||ಪ|| ನಳಿನನಾಭನಪಾದನಳಿನಸೇವಕರು ||ಅ|| ಇರುಳು ಹಚ್ಚುವ ದೀಪ ಹರಿಗೆ ನೀರಾಜನವು ಮರೆ ಮಾಡುವ ವಸ್ತ್ರ ಪರಮ ಮಡಿಯು ತಿರುಗಾಡಿ ದಣಿಯುವುದೆ ಹರಿಗೆ ಪ್ರದಕ್ಷಿಣೆಯು ಹೊರಳಿ ಮಲಗುವುದೆಲ್ಲ ಹರಿಗೆ ವಂದನೆಯು || ನುಡಿದ ಮಾತುಗಳೆಲ್ಲ ಕಡಲಶಯನನ ಜಪವು ಮಡದಿ ಮಕ್ಕಳು ಮತ್ತೆ ಒಡನೆ ಪರಿವಾರ ನಡುಮನೆಯ ಅಂಗಳವು ಉಡುಪಿವೈಕುಂಠಗಳು ಎಡಬಲದ ಮನೆಯವರು ಕಡು ಭಾಗವತರು || ಹೀಗೆ ಅನುದಿನ ತಿಳಿದು ಹಿಗ್ಗುವ ಜನರ ಭವ- ರೋಗ ಪರಿಹರವು ಮೂಜಗದಿ ಸುಖವು ಹೋಗುತಿದೆ ಈ ಆಯು ಬೇಗದಿಂದಲಿ ನಮ್ಮ ಯೋಗೀಶ ಪುರಂದರವಿಠಲನ ನೆನೆನೆನೆದು ||
ದಾಸ ಸಾಹಿತ್ಯ ಪ್ರಕಾರ
ಬರೆದವರು