ಶ್ರೀನಿವಾಸನು ಬಂದ ಕೋನೇರಿ ತಿಮ್ಮಪ್ಪ
( ರಾಗ ಭೈರವಿ ಅಟತಾಳ)
ಶ್ರೀನಿವಾಸನು ಬಂದ ಕೋನೇರಿ ತಿಮ್ಮಪ್ಪ
ವಾಣಿಯರಸನಯ್ಯನು ||ಪ||
ವೇಣುಗಾನಲೋಲ ಮೋಸಮಾಡಲು ಬಂದ
ದೀನರಕ್ಷಕನಯ್ಯ ಮೋಹನಕೃಷ್ಣ ||
ಪತಿತಪಾವನ ಬಂದ ಸಚ್ಚಿದಾನಂದನು
ಹಿತಕರನು ಬಂದ ನಿಖಿಳವೇದ
ಪ್ರತಿಪಾದ್ಯನು ಬಂದ ಹಿಗ್ಗುತಲಿ ನಿಂದ
ಮತಿಗೆಡಿಸಿ ಪೋದನಯ್ಯ ಮುದ್ದುರಂಗಯ್ಯ ಕೃಷ್ಣ ||
ಉಡುಪಿನಿಲಯ ಬಂದ ಉಡುಪನಂತ್ಹೊಳೆಯುತ
ತಟಿಯಂತೆ ಮರೆಯಾದ ಕಾಣಬಾರದ ವಸ್ತು
ಉಟ್ಟದ್ದು ತೊಟ್ಟದ್ದು ಇಟ್ಟದ್ದು ನೋಡಲು
ಅಷ್ಟು ಮಾಯವಯ್ಯ ಬಲು ಮಾಯವಯ್ಯ ||
ಏಸು ಹರುಷವೊ ಏಸು ಕರುಣವೊ
ಕಾಸು ಬಾಳದ ಎನಮ್ಯಾಲ ಮುದ್ದು ಕೃಷ್ಣಯ್ಯಗೆ
ವಾಸುಕಿ ಶಯನನು ತಂದೆ ಪುರಂದರವಿಠಲ
ಶೇಷಾದ್ರಿವಾಸನಯ್ಯ ಕೇಳಣ್ಣಯ್ಯ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments