ಹೊರಡುತಾನೆ ಚೆನ್ನ ಕೃಷ್ಣ

ಹೊರಡುತಾನೆ ಚೆನ್ನ ಕೃಷ್ಣ

( ರಾಗ ಪುನ್ನಾಗವರಾಳಿ ಆದಿ ತಾಳ) ಹೊರಡುತಾನೆ ಚೆನ್ನ ಕೃಷ್ಣ ಸುಮ್ಮನೆ || ಪ|| ಚಿಕ್ಕ ಮಗು ಎಂದು ನಾವು ಮುದ್ದಾಡಹೋದರೆ ಸೊಕ್ಕುತಲೆ ಬಂದು ಎನ್ನ ಕಕ್ಕಸ ಕುಚಗಳ ಪಿಡಿದು ಮಕ್ಕಳ್ಹುಟ್ಟುವರೆಂದು ಘಕ್ಕನೆ ರಟ್ಟೆಯ ಪಿಡಿದು ಕಕ್ಕುಲತಿ ಮಾಡಿ ಪೋದ ಏನು ಮಾಡಲೆ ನಾನೇನು ಮಾಡಲೆ || ಅಂಗಳದೊಳಗೆ ನಾವು ಗೆಳತೆರೆಲ್ಲರು ಮಂಗಳಸ್ನಾನವ ಮಾಡಲು ಸಂಗಡ ರಾಯರ ಕೂಡಿ ಬೊಗರಿಯಾಡುತ ಬಂದು ಕಂಗಳನೆಲ್ಲನು ಮುಚ್ಚಿ ಭಂಡು ಮಾಡಿ ಓಡಿ ಪೋದ || ಎಷ್ಟು ನಿನಗೆ ಹೇಳಲೊ ರಂಗಯ್ಯ ರಂಗ ದುಷ್ಟತನಗಳು ಭಾಳವೊ ಸೃಷ್ಟಿಗೊಡೆಯನೆ ನಮ್ಮ ಪುರಂದರವಿಠಲನು ದಿಟ್ಟತನದಲಿ ಬಲು ಅಟ್ಟುಳಿಯ ಮಾಡಿ ಪೋದ ||
ದಾಸ ಸಾಹಿತ್ಯ ಪ್ರಕಾರ
ಬರೆದವರು