ಮುಟ್ಟಿ ಮುಟ್ಟಿ ಮುಟ್ಟಿ ಮುದ್ದು ವಿಟ್ಠಲ
(ರಾಗ ಮೇಚಗೌಳ ಧ್ರುವ ತಾಳ )
ಮುಟ್ಟಿ ಮುಟ್ಟಿ ಮುಟ್ಟಿ ಮುದ್ದು ವಿಟ್ಠಲ
ನಿಷ್ಠೆಯಿಂದ ನೈವೇದ್ಯ ಇಡುವ ತನಕ ||ಪ||
ಪಂಚರಾತ್ರಾಗಮ ಪೂಜೆಗಳಿಂದ
ಕಿಂಚಿತು ಭಕುತಿಯಿಂದಲೆ ಮಾಡಲು
ಚಂಚಲಮನವ ಮಾಡಗೊಡಲು ಬೇಡ
ಪಂಚಪಾಂಡವಪ್ರಿಯ ವಿರಿಂಚಾಧೀಶನೆ ||
ಸಣ್ಣಕ್ಕಿ ಅನ್ನ ಪರಮಾನ್ನಗಳಿಂದ
ಬೆಣ್ಣೆ ಕಾಸಿದ ತುಪ್ಪ ಫುಲ್ಲಗಳಿಂದ
ಎಣ್ಣೋರಿಗೆ ಮಂಡಿಗೆ ಭಕ್ಷ್ಯಗಳಿಂದ
ಬಣ್ಣಿಸಿ ನೈವೇದ್ಯ ಇಡುವ ತನಕ ||
ಷೋಡಶೋಪಚಾರಪೂಜೆಗಳಿಂದ
ಕಡು ಮುದ್ದು ಸುರಿವುತ್ತರಾಡುತಿರು
ಬೇಡಿಕೊಂಬೆನು ಬಹಳ ಭಕುತಿಯಿಂದ
ಪೊಡವಿಯನಾಳುವ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments