ಮಾರುತವತಾರನೀತ

ಮಾರುತವತಾರನೀತ

(ರಾಗ ಶಂಕರಾಭರಣ ಆದಿ ತಾಳ ) ಮಾರುತವತಾರನೀತ ನಮ್ಮ ಗುರು ಕಾಣಿರೋ ಭಾರತಿಯ ರಮಣನೇ ಮೂಲಗುರು ಕಾಣಿರೋ ||ಪ || ಸಂತತಿಸಹಿತ ರಾವಣಬಲವ ತರಿದ ಹೊಂತಕಾರಿ ಹನುಮಂತ ನಮ್ಮ ಗುರು ಕಾಣಿರೋ ಅಂತಕನ ಪುರಿಗೆ ಕೌರವರನು ಕಳುಹಿದ ಪಂಥದೊಳು ಭೀಮಸೇನ ಮೂಲ ಗುರು ಕಾಣಿರೋ || ಯತಿ ರೂಪಿನಲಿ ಕ್ಷಿತಿಯ ಮೇಲೆ ನಿಂದು ದು- ರ್ಮತವ ಖಂಡಿಸಿದಾತ ನಮ್ಮ ಗುರು ಕಾಣಿರೋ ಶ್ರುತಿಗೆ ಸಮ್ಮತವಾದ ಮತವ ಸ್ಥಾಪಿಸಿ ಮುಕ್ತಿಪಥವ ತೋರಿಸಿದಾತ ಮೂಲ ಗುರು ಕಾಣಿರೋ || ಹೇಮಭೂಮಿಯ ಕಾಮಿನಿಯ ವ್ರತವಳಿದು ನಿ- ಸ್ಸೀಮನೆನಿಸಿದಾತ ನಮ್ಮ ಗುರು ಕಾಣಿರೋ ರಾಮಚಂದ್ರ ಪುರಂದರವಿಠಲನ ದಾಸರಾದ ಶ್ರೀ ಮಧ್ವಾಚಾರ್ಯರೆ ನಮ್ಮ ಗುರು ಕಾಣಿರೋ ||
ದಾಸ ಸಾಹಿತ್ಯ ಪ್ರಕಾರ
ಬರೆದವರು