ಕೊಬ್ಬಿರಲು ಬೇಡವೋ

ಕೊಬ್ಬಿರಲು ಬೇಡವೋ

( ರಾಗ ಪೂರ್ವಿ. ಅಟ ತಾಳ) ಕೊಬ್ಬಿರಲು ಬೇಡವೋ, ಹೇ ಮನುಜ ||ಪ || ಸಿರಿ ಬಂದ ಕಾಲಕೆ ಬಲು ಗರ್ವ ತೋರುತ್ತ ಬಿರಿ ಬಿರಿ ಕಣ್ಣು ಮೇಲಕ್ಕೆ ನೋಡುವರು ಸಿರಿ ಹೋದ ಮರುದಿನ ಬಡತನ ಬಂದರೆ ಹುರುಕು ಕಜ್ಜಿಯ ತುರಿಸಿ ತಿರುಗುವರಯ್ಯ || ಒಡವೆ ವಸ್ತುಗಳಿಟ್ಟು ಬಡಿವಾರ ಮಾಡುವರು ನಡೆಯಲಾರೆವೆಂದು ಬಳುಕುವರು ಸಿಡಿಲು ಎರಗಿದಂತೆ ಬಡತನ ಬಂದರೆ ಕೊಡಗಳೆರಡು ಹೊತ್ತು ನೀರ ತರುವರಯ್ಯ || ವ್ಯಾಪಾರ ಒಲಿದಾಗ ಕೋಪ ಅನ್ಯಾಯದಿ ಶಾಪಕೊಂಬರು ಬಡವರ ಕೈಯ ಶ್ರೀಪತಿ ಪುರಂದರವಿಟ್ಠಲರಾಯನೆ ವ್ಯಾಪಾರ ಮುಗಿದರೆ ತಿರಿದುಂಬರಯ್ಯ ||
ದಾಸ ಸಾಹಿತ್ಯ ಪ್ರಕಾರ
ಬರೆದವರು