ಕರ್ಮಬಂಧನ ಛೇದನಾ

ಕರ್ಮಬಂಧನ ಛೇದನಾ

(ರಾಗ ಧನಶ್ರೀ ಆದಿತಾಳ) ಕರ್ಮಬಂಧನ ಛೇದನಾ, ರಘು ರಾಮನ ನಾಮ ನೀ ನೆನೆ ಮನವೆ || ಪ|| ಮಂತ್ರವನರಿಯೆನು ತಂತ್ರವನರಿಯೆನು ಜಗ- ದಂತ್ರವನರಿಯೆಂದೆನಬೇಡ ತಂತ್ರಸ್ವತಂತ್ರನ ಪರಮಪವಿತ್ರನ ಅಂತರಂಗದಿ ನೀ ನೆನೆ ಮನವೆ || ಜಪವನು ಅರಿಯೆನು ತಪವ ನಾನರಿಯೆನು ಉಪದೇಶವನರಿಯೆನೆಂದೆನಬೇಡ ಅಪಾರಮಹಿಮೆಯ ಉಡುಪಿಯ ಕೃಷ್ಣನ ಉಪಾಯದಿಂದಲಿ ನೆನೆ ಮನವೆ || ಅರ್ಚಿಸಲರಿಯೆನು ಪೂಜಿಸಲರಿಯೆನು ಮೆಚ್ಚಿಸಲರಿಯೆನೆಂದೆನಬೇಡ ಅಚ್ಯುತಾನಂತ ಮುಕುಂದನ ನಾಮವ ಸ್ವಚ್ಛದಿಂದಲಿ ನೆನೆ ಮನವೆ || ಧ್ಯಾನವನರಿಯೆನು ಮೌನವನರಿಯೆನು ಜ್ಞಾನವನರಿಯೆನೆಂದೆನಬೇಡ ಜಾನಕಿವಲ್ಲಭ ರಘುನಾಥನ ಸದಾ ಧ್ಯಾನದಲಿಟ್ಟು ನೀ ನೆನೆ ಮನವೆ || ವದನದಿ ನಾರಾಯಣನೆಂಬೊ ನಾಮವು ಮುದದಿ ಮಾತನು ಬಿಡಬೇಡ ಪದುಮನಾಭ ಶ್ರೀ ಪುರಂದರವಿಠಲನ ಸದಾಕಾಲದಿ ನೀ ನೆನೆ ಮನವೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು