ಹನುಮ ಭೀಮ ಮಧ್ವ ಮುನಿಯ

ಹನುಮ ಭೀಮ ಮಧ್ವ ಮುನಿಯ

(ರಾಗ: ಮೋಹನ ಏಕ ತಾಳ) ಹನುಮ ಭೀಮ ಮಧ್ವ ಮುನಿಯ ನೆನೆದು ಬದುಕಿರೋ ||ಪ|| ಅನುಮಾನಂಗಳಿಲ್ಲದಲೆ ಮನೋಭೀಷ್ಟಂಗಳನೀವ ||ಅ.ಪ|| ಪ್ರಾಣಿಗಳ ಪ್ರಾಣೋದ್ಧಾರ ಜೀವರೋತ್ತಮರು ಮತ್ತು ಪ್ರಾಣಾಪಾನ ವ್ಯಾನೋದಾನ ಸಮಾನರೊಳುತ್ಕೃಷ್ಟ ಕಾಣಿರೇನೊ ಕಾಯ ಕರ್ಮ ಚಕ್ಷುರಿಂದ್ರಿಯಗಳಿಗೆ ತ್ರಾಣಗೊಟ್ಟು ಸಲಹುವ ಜಾಣ ಗುರು ಮುಖ್ಯ ಪ್ರಾಣ || ಕಾಮಧೇನು ಚಿಂತಾಮಣಿ ಕಲ್ಪ ವೃಕ್ಷನಾದ ಸ್ವಾಮಿ ಪ್ರೇಮದಿಂದಲಿ ನೆನೆಯುವವರ ಭಾಗ್ಯಕ್ಕೆಣೆಯುಂಟೆ ಸಾಮಾನ್ಯವಲ್ಲವೋ ಈತ ಮೋಕ್ಷ ಸಂಪದವಿಗಳ ದಾತ ಆ ಮಹಾ ಅಪರೋಕ್ಷ ಜ್ಞಾನ ದಾರ್ಢ್ಯ ಭಕ್ತಿ ಕೊಡುವ || ಅವತಾರ ತ್ರಯಂಗಳಲ್ಲಿ ಹರಿಯ ಸೇವಿಸುತ ಮತ್ತು ತವಕದಿಂದ ಪೂಜಿಪ ಮಹಾ ಮಹಿಮೆಯುಳ್ಳವರೊ ಕವಿತ ವಾಕ್ಯವಲ್ಲವಿದು ಅವಿವೇಕವೆಂದೆಣಿಸಬೇಡಿ ಭವಬಂಧನ ಕಳೆವ ಕಾವ ಪುರಂದರ ವಿಠಲನ ದಾಸ ||
ದಾಸ ಸಾಹಿತ್ಯ ಪ್ರಕಾರ
ಬರೆದವರು