ಕರುಣಿಗಳೊಳಗೆಣೆ ಕಾಣೆನೊ ನಿನಗೆ
---ರಾಗ ಧನಶ್ರೀ (ಭೀಮ್ ಪಲಾಸ್ ) ಅಟತಾಳ (ದೀಪಚಂದಿ)
ಕರುಣಿಗಳೊಳಗೆಣೆ ಕಾಣೆನೊ ನಿನಗೆ ಸ-
ದ್ಗುರುವರ ರಾಘವೇ೦ದ್ರ || ಪ ||
ಚರಣ ಕಮಲಯುಗ್ಮ ಮೊರೆಹೊಕ್ಕವರ ಮನದ
ಹರಕೆಯ ನಿರುತದಲೀವೆ-ನೀ ಕಾವೇ || ಅ ||
ರಾಘವೇ೦ದ್ರ ಗುರುವೇ ಗತಿ ಎ೦ದನು-
ರಾಗದಿ೦ದಲಿ ಭಜಿಪ
ಭಾಗವತರ ದುರಿತೌಘಗಳಳಿದು ಚೆ-
ನ್ನಾಗಿ ಸ೦ತೈಸುವೆ ನೀ ಸನ್ಮೌನಿ || ೧ ||
ಸುಧೀ೦ದ್ರಯತಿಕರ ಪದುಮಸ೦ಭವ ಮಧು
ವಧ ಪಾದಾ೦ಬುಜ ಮಧುಪ
ತ್ರಿದಶಭೂರುಹದ೦ತೆ ಬುಧಜನರೀಪ್ಸಿತ
ಒದಗಿ ಪಾಲಿಸಿ ಪೊರೆವೆ ಮದ್ಗುರುವೆ || ೨ ||
ಕುಧರದೇವನ ದಿವ್ಯರದನದಿ ಜನಿಸಿದ
ನದಿಯ ತೀರದಿ ಶೋಭಿಪ
ಸದಮಲ ಘನ ಮ೦ತ್ರಸದನನಿಲಯ ಜಿತ-
ಮದನ ಶ್ರೀ ಜಗನ್ನಾಥವಿಠ್ಠಲನ ದೂತ || ೩ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments