ನಿಲ್ಲುಬಾರೊ ದಯಾನಿಧೆ

ನಿಲ್ಲುಬಾರೊ ದಯಾನಿಧೆ

( ರಾಗ-ಆನಂದಭೈರವಿ(ಕಿರ್ವಾಣಿ) ಅಟತಾಳ(ದೀಪಚಂದಿ) ) ನಿಲ್ಲುಬಾರೊ ದಯಾನಿಧೆ ||ಪ|| ನಿಲ್ಲುಬಾರೊ ಸರಿಯಿಲ್ಲ ನಿನಗೆ ಲಕ್ಷ್ಮೀ- ವಲ್ಲಭ ಮನ್ಮನದಲ್ಲಿ ಬಿಡದೆ ಬಂದು ||೧|| ಅತಿಮೃದುವಾದ ಹೃತ್ಶತಪತ್ರ ಸದನದಿ ಶಾಶ್ವತ ಭವ್ಯ ಮೂರುತಿ ಭಕ್ತವತ್ಸಲ ||೨|| ನಾನಾ ವ್ರತಂಗಳ ನಾನನುಕರಿಸಿದೆ ಶ್ರೀನಿಧಿ ನಿನ್ನಂಘ್ರಿ ಕಾಣಬೇಕೆನುತಲಿ ||೩|| ತನು ಮನ ಧನ ಚಿಂತೆಯ ಬಿಟ್ಟು ತ್ವತ್ಪದ ವನರುಹ ಧೇನಿಪೆ ಮನುಮಥನಯ್ಯ ||೪|| ಯಾತರ್ಯೋಚನೆ ಮನಸೋತ ಬಳಿಕ ಪುರು- ಹೂತವಂದಿತ ಜಗನ್ನಾಥವಿಠ್ಠ್ಲರೇಯ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು