ಕ್ಷೀರವಾರಿಧಿ ಕನ್ನಿಕೆ
ಕ್ಷೀರವಾರಿಧಿ ಕನ್ನಿಕೆ ಮಾರ ಜನಕೆ
ಈರೇಳು ಲೋಕ ನಾಯಿಕೆ
ವಾರವಾರಕೆ ಆರಾಧಿಪುದಕೆ
ಚಾರು ಮನಸು ಕೊಡು ದೂರ ನೋಡದಲೆ
ಶ್ರೀಧರ ದುರ್ಗ ಆಂಬ್ರಣಿ ನಿತ್ಯ ಕಲ್ಯಾಣಿ ವೇದವತಿಯೆ ರುಕ್ಮಿಣಿ
ವೇದ ವೇದಾಂತಭಿಮಾನಿ ವಾರಿಜಪಾಣಿ ಆದಿಮಧ್ಯಾಂತ ಗುಣ ಶ್ರೇಣಿ
ಸಾಧು ಜನರ ಹೃದಯಾಬ್ಜವಿರಾಜಿತೇ ಖೇದಗೊಳಿಪ ಕಾಮ ಕ್ರೋಧಗಳೋಡಿಸಿ
ನೀದಯದಲಿ ಮೇಲಾದಗತಿಗೆ ಪಂಚಬೇಧಮತಿಯ ಕೊಡು ಮಾಧವ ಪ್ರಿಯಳೇ
ಶ್ರೀ ಮಾಯಾ ಜಯಾ ಕೃತಿ ಶಾಂತಿ ದೇವಿ ಜಯಂತಿ ನಾಮದಲಿಪ್ಪ ಜಯವಂತಿ
ಕೋಮಲವಾದ ವೈಜಯಂತಿ ಧರಿಸಿದ ಶಾಂತಿ-ಸೋಮಾರ್ಕ ಕೋಟಿಮಿಗೆ ಕಾಂತಿ
ತಾಮರಸಾಂಬಿಕೆ ರಾಮ ಲಕುಮಿ ಸತ್ಯಭಾಮೆ ಭವಾರಣ್ಯ ಧೂಮಕೇತಳೇ
ಯಾಮಯಾಮಕೆ ಹರಿನಾಮವ ನುಡಿಸುತ್ತಮರೊಡನೆ ಪರಿಣಾಮವ ನೀವುದು
ನಾನಾ ಭರಣ ಭೂಷಿತೆ ಧಾರುಣಿಜಾತೆ ಜ್ಞಾನಿಗಳ ಮನೋಪ್ರೀತೆ
ಅನಾದಿಯಿಂದ ಪ್ರಖ್ಯಾತೆ ಆದಿದೇವತೆ ಗಾನವಿಲೋಲೆ ಸುರಗೀತೆ ನೀನೆಗತಿ
ಎನಗಾರೊಬ್ಬರ ಕಾಣೆ ದಾನಿ ಇಂದಿರಾದೇವಿ ನಾನಾ ಪರಿಯಲಿ ಶ್ರೀ ನಿಧಿ
ವಿಜಯವಿಠಲನ ಮೂರುತಿಯನು ಧ್ಯಾನದೊಳಿಡುವಂತೆ ಜ್ಞಾನ ಭಕುತಿ ಕೊಡೆ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments