ಮುಖ್ಯಪ್ರಾಣದೇವ

ಮುಖ್ಯಪ್ರಾಣದೇವ

ರಾಗ : ಮಧ್ಯಮಾವತಿ ಏಕತಾಳ ಮುಖ್ಯಪ್ರಾಣದೇವ ನೀನಲ್ಲದೆ ಕಾಯ್ವರ ಕಾಣೆನು ಜಗದೊಳಗೇ ಪ್ರಾಣ ಪಾನಾ ವ್ಯಾನೋದಾನ ಸಮಾನನೇನೆನಿಪ....... ವಾಸವ ಕುಲಿಶದಿ ಘಾಸಿನೆ ಜೀವಕ ಶ್ವಾಸ ನಿರೋಧಿಸಿದೆ.. ಆ ಸಮಯದಿ ಕಮಲಾಸನ ಪೇಳಲು, ನೀ ಸಲಹಿದೆ ಜಗವಾ.... ಅಂಗದ ಪ್ರಮುಖ ಪ್ಲವಂಗರು ರಾಮನ ಅಂಗನೆಯನು ಹುಡುಕೇ.. ತಿಂಗಳು ಮೀರಲು ಕಂಗೆಡೆ ಕಪಿವರ ಪುಂಗವ ಪಾಲಿಸಿದೇ.... ಪಾವನ ಪಾಶದಿ ರಾವಣ ನೀಲ ಸುಗೀವ, ಮುಖ್ಯರಾ ಬಿಗಿಯೇ.. ಸಾವಿರದೈವತ್ತು ಗಾವುದದಲ್ಲಿಹ ಸಂಜೀವನವನು ತಂದೇ...... ಪರಿಸರ ನೀನಿರೆ ಹರಿತಾನಿರುವನು, ಇಂದಿರೆ ತಾನಿರನೂ.. ಕರಣ ನಿಯಾಮಕ ಸುರರ ಗುರುವೇ ನೀ ಕರುಣಿಸೆ ಕರುಣಿಸುವಾ... ಭೂತೇಂದ್ರಿಯದಧಿನಾಥ ನಿಯಾಮಕ ಅತ್ತೆಜಿದೆಹರನಾ.. ತಾತನೆನಿಪ ಜಗನ್ನಾಥ ವಿಠಲನ ಪ್ರೀತಿ ಪಾತ್ರನಾದೇ...
ದಾಸ ಸಾಹಿತ್ಯ ಪ್ರಕಾರ
ಬರೆದವರು