ಏನ ಬೇಡಲಿ ನಿನ್ನ ಚಂಚಲ ಕಠಿಣನ

ಏನ ಬೇಡಲಿ ನಿನ್ನ ಚಂಚಲ ಕಠಿಣನ

ಏನ ಬೇಡಲಿ ನಿನ್ನ, ಚಂಚಲ ಕಠಿಣನ ಮೌನದಿಂದಲಿ ಮೋರೆ ಓರೆ ಮಾಡುವನ|| ಕರುಳ ಹರಕನ ಬೇಡಲೇನು ತಿರಿದು ತಿಂಬುವನ ಕೊರಳಗೊಯ್ಯ ಅರಣ್ಯ ತಿರುಗುವವವ ತಿರುಗಿ ಬೆಣ್ಣೆ ಕದ್ದು ತಿಂಬುವನ || ವಾಸಶೂನ್ಯನ ಕೈಯ ಕತ್ತಿ ಬೀಸಿ ಸವರುವನ ಕಾಸುವೀಸವನೆಲ್ಲ ಮೀಸಲು ಮಾಡಿಟ್ಟು ಕೇಸಕ್ಕಿ ಉಂಡುಂಡು ವಾಸ ಮಾಡುವನ || ಬೇಡಿದರೆ ನೀಡಿ ಅವರ ಮೋರೆ ಭಿಡೆಯವನು ನೋಡಿ ಬಡವರ ಕರೆತಂದು ಅಡಿಗೆ ಸೇರಿಸಿಕೊಂಡ ಒಡೆಯ ಶ್ರೀ ಪುರಂದರವಿಠಲ ದೊರೆಯೆ || ( ಟಿಪ್ಪಣಿ ಚಂಚಲ -> ಮತ್ಸ್ಯಾವತಾರದಲ್ಲಿ ಮೀನು , ಕಠಿಣ -> ಕೂರ್ಮಾವತಾರದಲ್ಲಿ ಆಮೆ ಮೋರೆಯನು ಓರೆ ಮಾಡುವ -> ವರಾಹಾವತಾರದಲ್ಲಿ ಹಂದಿ ಕರುಳ ಹರಕ - ನರಸಿಂಹ ತಿರಿದು ತಿಂಬುವವ = ವಾಮನ ಕೊರಳ ಕೊಯ್ಯುವವನು - ಪರಶುರಾಮ ಅರಣ್ಯದಲ್ಲಿ ತಿರುಗುವವ - ರಾಮ ಬೆಣ್ಣೆ ಕದ್ದು ತಿನ್ನುವವ - ಕೃಷ್ಣ ವಾಸಶೂನ್ಯ - ಬುದ್ಧ ಕೈಗತ್ತಿ ಬೀಸಿ ಸವರುವವವ - ಕಲ್ಕಿ ಕಾಸು ಕೂಡಿಸುವವ - ತಿರುಪತಿ ತಿಮ್ಮಪ್ಪ )
ದಾಸ ಸಾಹಿತ್ಯ ಪ್ರಕಾರ
ಬರೆದವರು