ಕಲ್ಯಾಣಂ ತುಳಸಿ ಕಲ್ಯಾಣಂ

ಕಲ್ಯಾಣಂ ತುಳಸಿ ಕಲ್ಯಾಣಂ

ಕಲ್ಯಾಣಂ ತುಳಸಿ ಕಲ್ಯಾಣಂ ಕಲ್ಯಾಣಂ ತುಳಸಿ ಕಲ್ಯಾಣಂ|| ಕಲ್ಯಾಣವೇ ನಮ್ಮ ಕೃಷ್ಣ ಶ್ರೀ ತುಳಸಿಗೆ ಬಲ್ಲಿದ ಶ್ರೀ ವಾಸುದೇವನಿಗೆ||ಕಲ್ಯಾಣಂ..|| ಅಂಗಳದೊಳಗೆಲ್ಲ ತುಳಸಿಯ ವನ ಮಾಡಿ ಶೃಂಗಾರ ಮಾಡಿ ಶೀಘ್ರದಿಂದ| ಕಂಗಳ ಪಾಪವ ಪರಿಹರಿಸುವ ಮುದ್ದು ರಂಗ ಬಂದಲ್ಲಿ ನೆಲೆಸಿದನು||ಕಲ್ಯಾಣಂ..|| ಮಿಂದು ಮಡಿಯನುಟ್ಟು ಸಂದೇಹವ ಬಿಟ್ಟು ತಂದ ಶ್ರೀಗಂಧಾಕ್ಷತೆ ಪುಷ್ಪದಿಂದ| ಸಿಂಧುಶಯನನ ವೃಂದಾವನದಿ ಪೂಜಿಸೆ ಕುಂದದ ಭಾಗ್ಯವ ಕೊಡುತಿಹಳು||ಕಲ್ಯಾಣಂ..|| ಉತ್ತಾನ ದ್ವಾದಶಿ ದಿವಸದಿ ಕೃಷ್ಣಗೆ ಉತ್ತಮ ತುಳಸಿಗೆ ವಿವಾಹವ| ಚಿತ್ತ ನಿರ್ಮಲರಾಗಿ ಮಾಡಿದವರಿಗೆ ಉತ್ತಮ ಗತಿಯೀವ ಪುರಂದರ ವಿಠಲ||ಕಲ್ಯಾಣಂ..||
ದಾಸ ಸಾಹಿತ್ಯ ಪ್ರಕಾರ
ಬರೆದವರು