ಬಾರೈ ಬಾರೈ ಭಾರತಿ ಮನೋಹರ

ಬಾರೈ ಬಾರೈ ಭಾರತಿ ಮನೋಹರ

ಬಾರೈ ಬಾರೈ ಭಾರತಿ ಮನೋಹರ ಮಾರುತಿ ಗುರುವರನೆ ದೇವ || ಪಲ್ಲವಿ || ಪವನದೇವ ಬಾರೊ ಪವಿಸಮಗಾತ್ರ ಬಾರೊ ರವಿಜನ ಭವಭಯಹರ ಪಾವನ ಮೂರುತಿ || ೧ || ಮಧ್ವಮುನಿಯೆ ಬಾರೊ ಉದ್ಧರಿಸಲು ಬಾರೊ ಶುದ್ಧ ಮುಕುತಿದಾತ ದದ್ಧಲಪುರವಾಸ || ೨ || ಗಂಧವಾಹನ ಬಾರೊ ಸಿಂಧುಬಂಧನ ಬಾರೊ ಮಂಧರೋದ್ಧರ ಶಾಮ ಸುಂದರಪ್ರಿಯ ಸುತ || ೩ ||
ದಾಸ ಸಾಹಿತ್ಯ ಪ್ರಕಾರ
ಬರೆದವರು