ಬಾರೈ ಬಾರೈ ಭಾರತಿ ಮನೋಹರ
ಬಾರೈ ಬಾರೈ ಭಾರತಿ ಮನೋಹರ
ಮಾರುತಿ ಗುರುವರನೆ ದೇವ || ಪಲ್ಲವಿ ||
ಪವನದೇವ ಬಾರೊ
ಪವಿಸಮಗಾತ್ರ ಬಾರೊ
ರವಿಜನ ಭವಭಯಹರ
ಪಾವನ ಮೂರುತಿ || ೧ ||
ಮಧ್ವಮುನಿಯೆ ಬಾರೊ
ಉದ್ಧರಿಸಲು ಬಾರೊ
ಶುದ್ಧ ಮುಕುತಿದಾತ
ದದ್ಧಲಪುರವಾಸ || ೨ ||
ಗಂಧವಾಹನ ಬಾರೊ
ಸಿಂಧುಬಂಧನ ಬಾರೊ
ಮಂಧರೋದ್ಧರ ಶಾಮ
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ
- Read more about ಬಾರೈ ಬಾರೈ ಭಾರತಿ ಮನೋಹರ
- Log in to post comments