ಸಾರಿ ಬಂದನೆ ಪ್ರಾಣೇಶ ಬಂದನೆ
ರಾಗ ಹಿಂದೂಸ್ಥಾನಿ ಕಾಪಿ/ಅಟ್ಟ ತಾಳ
ಸಾರಿ ಬಂದನೆ ಪ್ರಾಣೇಶ ಬಂದನೆ || ಪಲ್ಲವಿ ||
ಸಾರಿ ಬಂದ ಲಂಕಾಪುರವ ಮೀರಿದ ರಾವಣನ ಕಂಡು
ಧೀರನು ವಯ್ಯಾರದಿಂದ || ಅನು ಪಲ್ಲವಿ ||
ವಾಯು ಪುತ್ರನೆ ಶ್ರೀರಾಮನ ದೂತನೆ ಪ್ರೀಯದಿಂದ
ಸೀತಾಂಗನೆಗೆ ಮುದ್ರಿಕೆಯ ತಂದಿತ್ತವನೆ || ೧ ||
ಭೀಮಸೇನನೆ ಕುಂತಿ ತನಯನೆ ವಿರಾಟನ ಮನೆಯಲ್ಲಿ
ನಿಂತು ಕೀಚಕನ ಸಂಹರಿಸಿದವನೆ || ೨ ||
ಮಧ್ವರಾಯನೆ ಸರ್ವಜ್ಞಶ್ರೇಷ್ಠ ಅದ್ವೈತವ ಗೆದ್ದು
ಪುರಂದರವಿಠಲನ ಮುಂದೆ ನಿಂತವನೆ || ೩ ||
~~~ * ~~~
ಪ್ರೀಯದಿಂದ... - ಪ್ರೀತಿಯಿಂದ ಸೀತೆಗೆ ರಾಮನ ಮುದ್ರಿಕೆಯುಂಗುರವನ್ನು ಮುಟ್ಟಿಸಿದವನು.
[ಪುರಂದರ ಸಾಹಿತ್ಯ ದರ್ಶನ - ಭಾಗ ೨]
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ
- Log in to post comments