ಜ್ಞಾನವೊಂದೇ ಸಾಕು ಮುಕ್ತಿಗೆ

ಜ್ಞಾನವೊಂದೇ ಸಾಕು ಮುಕ್ತಿಗೆ

(ರಾಗ ಮೋಹನ ಅಟತಾಳ) ಜ್ಞಾನವೊಂದೇ ಸಾಕು ಮುಕ್ತಿಗೆ ಇನ್ನೇನು ಬೇಕು ಹುಚ್ಚು ಮರುಳೆ(/ಮಾನವನೆ) ||ಪ|| ಪಿತಮಾತೆ ಸತಿಸುತರಗಲಿರಬೇಡ ಯತಿಯಾಗಿ ಅರಣ್ಯ ಚರಿಸುತಲುಬೇಡ ವ್ರತನೇಮ ಮಾಡಿ ದಣಿಯಲು ಬೇಡ ಸತಿಯಿಲ್ಲದವಗೆ ಸದ್ಗತಿಯಿಲ್ಲವೊ ಮೂಢ || ಜಪತಪವನೆ ಮಾಡಿ ದಣಿಯಲು ಬೇಡ ಕಪಿಯಾಗಿ ಅಡಿಗಡಿಗ್ಹಾರಲು ಬೇಡ ಉಪಮಾರರಸ ಕಾಶಿ ಕಳಿಯಲು ಬೇಡ ಚಪಲತನದಲ್ಲಿ ಫಲವಿಲ್ಲೊ ಮೂಢ || ಜಾಗ್ರತೆಯಲಿ ನಿದ್ರೆ ಕಳೆಯಲುಬೇಡ ಆಗ್ರಹವನ್ನು ಬಿಟ್ಟು ಒಣಗಲುಬೇಡ ಸೋಗು ಮಾಡಿ ಮಾತು ಕಳೆಯಲುಬೇಡ ಗೂಗೆ ಹಾಗೆ ಕಣ್ಣು ಮುಚ್ಚಲುಬೇಡ || ಹೆಣ್ಣು ಹೊನ್ನು ಮಣ್ಣು ಜರೆದಿಡಬೇಡ ಅನ್ನ ವಸ್ತ್ರ ನೀನು ತೊರೆದಿಡಬೇಡ ನನ್ನದೆಂದು ದೇಹ ನಂಬಲುಬೇಡ ತಣ್ಣೀರು ಮುಣುಗಿ ನಡುಗಲುಬೇಡ || ಮಹಾವಿಷ್ಣುವನ್ನು ಮರೆತಿರಬೇಡ ನಾಯಾಸದಿನದಲ್ಲಿ ಶ್ರಮ ಬಿಡಬೇಡ ಕುಹಕಬುದ್ಧಿಯಲಿ ಕುಣಿದಾಡಬೇಡ ಪುರಂದರವಿಠಲನ್ನ ಮರೆತಿರಬೇಡ ||
ದಾಸ ಸಾಹಿತ್ಯ ಪ್ರಕಾರ
ಬರೆದವರು