ಯಾರು ಬರುವರು ನಿನ್ನ ಹಿಂದೆ

ಯಾರು ಬರುವರು ನಿನ್ನ ಹಿಂದೆ

( ರಾಗ ಯದುಕುಲಕಾಂಭೋಜ. ತ್ರಿಪುಟ ತಾಳ) ಯಾರು ಬರುವರು ನಿನ್ನ ಹಿಂದೆ ||ಪ|| ಇತ್ತ ಬಾರೆಂದು ಯಮಭಟರು ಸೆಳೆದೊಯ್ಯುವಾಗ ||ಅ|| ಸತಿಸುತರುಗಳು ಬರುವುದಿಲ್ಲ, ನಿನ್ನ ಹಿತವಾದ ಬಂಧು ಸ್ನೇಹಿತರು ಬರುವುದಿಲ್ಲ ಕ್ಷಿತಿಮಾನ್ಯಕ್ಷೇತ್ರವು ಬರುವುದಿಲ್ಲ ಲಕ್ಷ್ಮೀಪತಿಯೆಂಬವನಲ್ಲದೆ ಗತಿಯೊಬ್ಬರಿಲ್ಲ || ತುರಗ ಗಜಗಳು ಬರುವುದಿಲ್ಲ, ನಿನ್ನ ಮೆರವಣಿಗೆ ಮಾಡುವ ಈ ತನು ನಿನ್ನದಲ್ಲ ನರಪತಿಯ ಸೇವೆ ಸ್ಥಿರವಲ್ಲ ನರ- ಹರಿಯೊಬ್ಬನಲ್ಲದೆ ಪರಗತಿಯಿಲ್ಲ || ಧನಧಾನ್ಯಗಳು ಬರುವುದಿಲ್ಲ, ನಿನ್ನ ಅನುವಾದ ನವಸಾಧನಗಳು ಬರುವುದಿಲ್ಲ ಜನನಿಜನಕರು ಬರುವುದಿಲ್ಲ, ನಮ್ಮ ಹನುಮನಯ್ಯನ ಹೊರತು ಬೇರೆ ಗತಿಯಿಲ್ಲ || ಈ ದೇಹ ನೀ ಬಿಟ್ಟ ಬಳಿಕ, ಅವರ ಬಾಧೆಗೋಸ್ಕರ ಬೆಂಕಿ ಹಾಕಿ ಸುಡುತಿಹರೊ ಬೂದಿ ನೀರೊಳು ಚೆಲ್ಲುತಿಹರೊ, ಬಂದು ಬೀದಿಯಲಿ ನಿಂತು ಬೊಬ್ಬೆಯ ಮಾಡುತಿಹರೊ || ಇನ್ನಾದರು ತಿಳಿದುಕೊಂಡು, ಮತ್ತೆ ಮುನ್ನಾದರು ಅನ್ಯ ಗತಿಯಿಲ್ಲವಂದು ಎನ್ನೊಡೆಯ ನೀನೆ ಗತಿಯೆಂದು, ಬೇಡು ಮನ್ನಿಸಿ ಪುರಂದರವಿಠಲ ಸಲಹೆಂದು ||
ದಾಸ ಸಾಹಿತ್ಯ ಪ್ರಕಾರ
ಬರೆದವರು